ತಂದೆಯ ಬಗ್ಗೆ ಯಾರಿಗೂ ತಿಳಿಯದ ಅಪರೂಪದ ವಿಷಯ ಹಂಚಿಕೊಂಡ ಕಿಚ್ಚ
ಸಿನಿಮಾ ಹೇಗೆ ಸುದೀಪ್ ಅವರ ಜೀವನದ ಭಾಗ ಆಗಿದೆಯೋ ಹಾಗೆಯೇ ಬಿಗ್ಬಾಸ್ ಸಹ ಸುದೀಪ್ ಅವರ ಜೀವನದ ಭಾಗ ಆಗಿಬಿಟ್ಟಿದೆ. ಸಿನಿಮಾಗಳಲ್ಲಿ ಬೇರೆ ಯಾವುದೋ ವ್ಯಕ್ತಿಯ ಪಾತ್ರದಲ್ಲಿ ಸುದೀಪ್ ನಟಿಸುತ್ತಾರೆ ಆದರೆ ಬಿಗ್ಬಾಸ್ ವೇದಿಕೆಯಲ್ಲಿ ಖುದ್ದು ತಾವಾಗಿಯೇ ಇರುತ್ತಾರೆ. ಸುದೀಪ್ ಅವರು ತಮ್ಮ ಬಗ್ಗೆ, ತಮ್ಮ ಜೀವನದ ಬಗ್ಗೆಯೂ ಸಹ ಬಹಳ ಅಪರೂಪಕ್ಕೆ ಬಿಗ್ಬಾಸ್ ವೇದಿಕೆಯಲ್ಲಿ ಮಾತನಾಡುತ್ತಾರೆ. ಇದೀಗ ಸುದೀಪ್ ಅವರು ಬಿಗ್ಬಾಸ್ ವೇದಿಕೆ ಮೇಲೆ ಅವರ ತಂದೆ ಸಂಜೀವ್ ಅವರ ಬಗ್ಗೆ ಮಾತನಾಡಿದ್ದಾರೆ.

ಮುಖ್ಯಾಂಶಗಳು
- ಬಿಗ್ಬಾಸ್ ವೇದಿಕೆ ಮೇಲೆ ತಂದೆ ಬಗ್ಗೆ ಕಿಚ್ಚನ ಮಾತು
- ಸುದೀಪ್ ಅವರು ತಂದೆಯ ಬಗ್ಗೆ ಅಪರೂಪದ ವಿಷಯ ಹೇಳಿದರು
- ಸುದೀಪ್ ತಂದೆಯ ಬಗ್ಗೆ ಅಪರೂಪದ ವಿಷಯ ಇಲ್ಲಿದೆ
ಸುದೀಪ್ ಅವರು ಕಳೆದ 13 ವರ್ಷಗಳಿಂದಲೂ ಬಿಗ್ಬಾಸ್ ಕನ್ನಡ ಶೋ ನಿರೂಪಣೆ ಮಾಡುತ್ತಿದ್ದಾರೆ. ಸುದೀಪ್ ಇಲ್ಲದೆ ಕನ್ನಡ ಬಿಗ್ಬಾಸ್ ಅನ್ನು ಊಹೆ ಸಹ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆ ಮಟ್ಟಿಗೆ ಸುದೀಪ್ ಆ ಶೋ ಅನ್ನು ಆವರಿಸಿಕೊಂಡಿದ್ದಾರೆ. ಸಿನಿಮಾ ಹೇಗೆ ಸುದೀಪ್ ಅವರ ಜೀವನದ ಭಾಗ ಆಗಿದೆಯೋ ಹಾಗೆಯೇ ಬಿಗ್ಬಾಸ್ ಸಹ ಸುದೀಪ್ ಅವರ ಜೀವನದ ಭಾಗ ಆಗಿಬಿಟ್ಟಿದೆ. ಸಿನಿಮಾಗಳಲ್ಲಿ ಬೇರೆ ಯಾವುದೋ ವ್ಯಕ್ತಿಯ ಪಾತ್ರದಲ್ಲಿ ಸುದೀಪ್ ನಟಿಸುತ್ತಾರೆ ಆದರೆ ಬಿಗ್ಬಾಸ್ ವೇದಿಕೆಯಲ್ಲಿ ಖುದ್ದು ತಾವಾಗಿಯೇ ಇರುತ್ತಾರೆ. ಸುದೀಪ್ ಅವರು ತಮ್ಮ ಬಗ್ಗೆ, ತಮ್ಮ ಜೀವನದ ಬಗ್ಗೆಯೂ ಸಹ ಬಹಳ ಅಪರೂಪಕ್ಕೆ ಬಿಗ್ಬಾಸ್ ವೇದಿಕೆಯಲ್ಲಿ ಮಾತನಾಡುತ್ತಾರೆ. ಇದೀಗ ಸುದೀಪ್ ಅವರು ಬಿಗ್ಬಾಸ್ ವೇದಿಕೆ ಮೇಲೆ ಅವರ ತಂದೆ ಸಂಜೀವ್ ಅವರ ಬಗ್ಗೆ ಮಾತನಾಡಿದ್ದಾರೆ.
ಸುದೀಪ್ ಅವರು ಚಿತ್ರರಂಗದಲ್ಲಿ 30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇದೇ ಕಾರಣಕ್ಕೆ ಬೇರೆ ಬೇರೆ ಚಿತ್ರರಂಗದ ಸ್ಟಾರ್ ನಟರು, ಸೆಲೆಬ್ರಿಟಿಗಳು ಸುದೀಪ್ ಅವರಿಗೆ ಈ ಕುರಿತಾಗಿ ಶುಭಾಶಯ ಹೇಳಿದರು. ಆದರೆ ವಿಶೇಷ ಎನಿಸಿದ್ದು, ಸುದೀಪ್ ಅವರ ತಂದೆ ಸಂಜೀವಯ್ಯ ಅವರು ಮಗನಿಗೆ ಬರೆದ ಲೆಟರ್ ಅನ್ನು ಓದಲಾಯ್ತು. ಬಹಳ ಭಾವುಕ ಕ್ಷಣ ಅದಾಗಿತ್ತು. ಮಗನಿಗೆ, ಮಗನ ಸಾಧನೆ ಬಗ್ಗೆ ಸುದೀಪ್ ಅವರ ತಂದೆ ಬಹಳ ಹೆಮ್ಮೆಯಿಂದ ಬರೆದಿದ್ದ ಪತ್ರ ಅದಾಗಿತ್ತು. ಪತ್ರವನ್ನು ಖುದ್ದು ಸುದೀಪ್ ಅವರ ತಂದೆಯ ಧ್ವನಿಯಲ್ಲೇ ರೆಕಾರ್ಡ್ ಮಾಡಲಾಗಿತ್ತು.
ಇದನ್ನೂ ಓದಿ:ಕಿರಣ್ ಶಾಸ್ತ್ರಿಗೆ ಕಿಚ್ಚನ ಮೆಚ್ಚುಗೆ, ಲಿಖಿತ್ಗೆ ಬೆಂಡೆತ್ತಿದ ಸುದೀಪ್
ಪತ್ರಕ್ಕೆ ಧನ್ಯವಾದ ಹೇಳಿದ ಸುದೀಪ್ ಅವರು ತಂದೆಯ ಬಗ್ಗೆ ಕೆಲ ಅಪರೂಪದ ವಿಷಯಗಳನ್ನು ಪ್ರೇಕ್ಷಕರೆದುರು ಹಂಚಿಕೊಂಡರು. ‘ನನ್ನ ತಂದೆಯವರು ಅದ್ಭುತವಾದ ಕಲಾವಿದ. ಅವರು ಬಹಳ ಒಳ್ಳೆಯ ನಟರು. ಅವರು ಕಾಲೇಜಿನಲ್ಲಿದ್ದಾಗ ನಟನೆ ಮಾಡುತ್ತಿದ್ದರು. ಅವರು ನಾಯಕನಾಗಿ ನಟಿಸಿದರೆ ಅವರ ಪತ್ನಿಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಎನಿಸಿಕೊಂಡಿರುವ ಶ್ರೀನಾಥ್ ಅವರು ನಾಯಕಿಯ ಪಾತ್ರದಲ್ಲಿ ನಟನೆ ಮಾಡುತ್ತಿದ್ದರು. ಅವರು ಅಷ್ಟು ಒಳ್ಳೆಯ ಕಲಾವಿದ ಆಗಿದ್ದರು. ಅವರಿಗೆ ನಟ ಆಗಬೇಕು ಎಂಬ ಬಹಳ ಆಸೆ ಇತ್ತು. ಆದರೆ ಕೌಟುಂಬಿಕ ಜವಾಬ್ದಾರಿಗಳಿಂದ ಅದು ಸಾಧ್ಯವಾಗಲಿಲ್ಲ’ ಎಂದರು ಸುದೀಪ್.
‘ನನ್ನ ತಂದೆಯವರು ಅದ್ಭುತವಾದ ಮೈಮ್ ನಟ. ಮನೆಯಲ್ಲಿ ಕೂತ ಸ್ಥಳದಲ್ಲೇ ನಟನೆ ಮಾಡುತ್ತಾರೆ, ಅದ್ಭುತವಾಗಿ ನಟಿಸುತ್ತಾರೆ. ಅವರಿಗೆ ಹೋಲಿಸಿದರೆ ನನ್ನ ನಟನೆ ಏನೂ ಇಲ್ಲ. ಅವರಿಂದ ಬಂದ ಅಲ್ಪ-ಸ್ವಲ್ಪ ಗುಣದಿಂದ ನಾನು ಇಲ್ಲಿಯವರೆಗೆ ತಲುಪಿದ್ದೇನೆ. ನಾನು ಹಲವು ಪ್ರಶಸ್ತಿ ಪಡೆದಿದ್ದೇನೆ ಎಂದು ಅವರು ಹೇಳಿದರು. ಆದರೆ ನಟನೆಗೆ ಅವರಿಗೆ ಬಂದಷ್ಟು ಪ್ರಶಸ್ತಿ ನನಗೆ ಬಂದಿಲ್ಲ. ಅವರಿಗೆ ನಟನೆ ಮೇಲೆ ಇದ್ದಿದ್ದ ಆ ಪ್ರೀತಿಯಿಂದಾಗಿಯೇ ನಾನು ನಿರ್ದೇಶಿಸಿದ ‘ಮೈ ಆಟೊಗ್ರಾಫ್’ ಸಿನಿಮಾನಲ್ಲಿ ಅವರಿಗೆ ಅವಕಾಶ ನೀಡಿದೆ’ ಎಂದರು ಸುದೀಪ್.
ತಂದೆ ಬರೆದ ಪತ್ರದ ಬಗ್ಗೆ ಖುಷಿ ವ್ಯಕ್ತಪಡಸಿದ ಸುದೀಪ್ ಅವರು ಜೊತೆಗೆ ಸಣ್ಣ ಬೇಸರದ ಬಗ್ಗೆಯೂ ಹೇಳಿದರು. ಅವರ ಸಹಿ ಬಹಳ ಖದರ್ ಆಗಿ ಇರುತ್ತಿತ್ತು. ಆದರೆ ಈಗ ಅವರು ಸಹಿ ಹಾಕಲು ಕಷ್ಟಪಡುತ್ತಿರುವುದು ನೋಡಿದರೆ ದುಃಖವಾಗುತ್ತದೆ’ ಎಂದರು ಕಿಚ್ಚ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




