AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಣ್ ಶಾಸ್ತ್ರಿಗೆ ಕಿಚ್ಚನ ಮೆಚ್ಚುಗೆ, ಲಿಖಿತ್​ಗೆ ಬೆಂಡೆತ್ತಿದ ಸುದೀಪ್

ಬಿಗ್ ಬಾಸ್ ಕನ್ನಡ 13ರಲ್ಲಿ ಉತ್ತಮ ಆಟವಾಡಿ ಸುದೀಪ್ ಅವರಿಂದ ಮೆಚ್ಚುಗೆ ಪಡೆದ ಕಿರಣ್ ಶಾಸ್ತ್ರಿ ಎಮರ್ಜೆನ್ಸಿ ಎಕ್ಸಿಟ್‌ನಿಂದ ಸೇವ್ ಆಗಿದ್ದಾರೆ. ಆದರೆ ಬಾತ್‌ರೂಂ ಸ್ವಚ್ಛಗೊಳಿಸದೆ ಮತ್ತು ನಿಯಮ ಉಲ್ಲಂಘನೆ ಮಾಡಿದ ಲಿಖಿತ್, ಯಶಸ್ ಹಾಗೂ ನಿದ್ದೆ ಮಾಡಿದ ಕಿರಣ್‌ಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ.

ಕಿರಣ್ ಶಾಸ್ತ್ರಿಗೆ ಕಿಚ್ಚನ ಮೆಚ್ಚುಗೆ, ಲಿಖಿತ್​ಗೆ ಬೆಂಡೆತ್ತಿದ ಸುದೀಪ್
ಕಿರಣ್, ಸುದೀಪ್, ಯಶಸ್-ಲಿಖಿತ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 27, 2026 | 9:38 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಕಿರಣ್ ಶಾಸ್ತ್ರಿ ಉತ್ತಮವಾಗಿ ಆಡಿದ್ದಾರೆ. ಕಳೆದ ವಾರ ಅವರು ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡ ಬಳಿಕ ಕಿರಣ್ ಅವರು ಸಂಪೂರ್ಣವಾಗಿ ಆಟದ ಗತಿ ಬದಲಿಸಿದ್ದಾರೆ. ಇದಕ್ಕೆ ಸುದೀಪ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಸುದೀಪ್ ಅವರು ಕಿರಣ್​ ಭೇಷ್ ಎಂದಿದ್ದಾರೆ. ಇದರಿಂದ ಕಿರಣ್ ಶಾಸ್ತ್ರಿಗೆ ಖುಷಿ ಆಗಿದೆ. ಅತ್ತ, ಲಿಖಿತ್ ಶಾಸ್ತ್ರಿ ಹಾಗೂ ಯಶಸ್​ಗೆ ಸರಿಯಾಗಿ ಬೆಂಡೆತ್ತಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13ರ’ ಎಮರ್ಜೆನ್ಸಿ ಎಕ್ಸಿಟ್​ನಿಂದ ಈ ವಾರ ಸೇವ್ ಆಗಿದ್ದು ಕಿರಣ್. ಈ ವಿಷಯ ಅವರಿಗೆ ಖುಷಿ ನೀಡಿದೆ. ಕಳೆದ ವಾರಕ್ಕೆ ಹೋಲಿಸಿದರೆ ಅವರು ಸಂಪೂರ್ಣವಾಗಿ ಬದಲಾದರು. ಈ ಕಾರಣಕ್ಕೆ ಸುದೀಪ್ ಮೆಚ್ಚುಗೆ ಸೂಚಿಸಿದರು. ‘ಕಿರಣ್ ಶಾಸ್ತ್ರಿ ಸೇಫ್ ಆಗಿದ್ದಾರೆ. ಎಫರ್ಟ್​ಸ್ ಕಾಣಿಸಿದೆ, ನಿಮಗಾಗಿ ನಿಂತುಕೊಂಡಿದ್ದೀರಿ, ಆಡುವಲ್ಲಿ ಆಡಿದ್ರಿ, ಮಾತನಾಡುವಾಗ ಮಾತನಾಡಿದ್ರಿ’ ಎಂದು ಭೇಷ್ ಎಂದರು ಸುದೀಪ್.

ಲಿಖಿತ್-ಯಶಸ್​ಗೆ ಪಾಠ

ಲಿಖಿತ್ ಬೋಂಧಿ ಹಾಗೂ ಯಶಸ್​​ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಇದಕ್ಕೆ ಕಾರಣವೂ ಇತ್ತು. ಈ ವಾರ ಬಾತ್​ರೂಂ ಕ್ಲೀನ್ ಮಾಡುವ ಜವಾಬ್ದಾರಿ ಇತ್ತು. ಆದರೆ, ಅದನ್ನು ಮಾಡಿಲ್ಲ. ಇದಕ್ಕೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರು. ‘ಇದು ನಮ್ಮ ಬಳಿ ಬೇಡ’ ಎಂದು ನೇರವಾಗಿ ಹೇಳಿದರು. ರೂಲ್ಸ್ ಬ್ರೇಕ್ ಮಾಡಿ ಮಾಡಿ, ಲಿಖಿತ್ ಖುಷಿಯಾಗಿ ಇರುತ್ತಿದ್ದರು. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ಇದು ನ್ಯಾಯಸಮ್ಮತವಲ್ಲ’; ತಾಂಡವ್ ಎಲಿಮಿನೇಷನ್​ಗೆ ಓಪನ್ ಆಗಿ ಅಸಮಾಧಾನ ಹೊರಹಾಕಿದ ಗಗನ್

ಕಿರಣ್​ಗೂ ಕ್ಲಾಸ್

ಕಿರಣ್ ಶಾಸ್ತ್ರಿಗೆ ಸುದೀಪ್ ಬೈದರು. ಈ ವಾರ ಬಿಟ್ಟು ಬಿಡದೇ ಕಿರಣ್ ಅವರು ನಿದ್ದೆ ಮಾಡಿದ್ದರು. ಈ ರೂಲ್ಸ್ ಬ್ರೇಕ್ ಮಾಡಿದ್ದು ಕಿರಣ್ ಶಾಸ್ತ್ರಿ. ಇದು ಸರಿ ಅಲ್ಲ ಎಂದು ಸುದೀಪ್ ಖಡಕ್ ಆಗಿಯೇ ಕಿವಿಮಾತು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:28 pm, Sat, 26 September 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More