AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಮನೆಗೆ ಮೂವರು ಹೊಸ ಸ್ಪರ್ಧಿಗಳ ಎಂಟ್ರಿ: ಯಾರದು?

ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಮೂವರು ಹೊಸ ಸ್ಪರ್ಧಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಈ ಮೂವರು ಈ ಸೀಸನ್ನಿನ ವೈಲ್ಡ್ ಕಾರ್ಡ್​ ಸ್ಪರ್ಧಿಗಳಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಘಾಟಿ ಹುಡುಗಿ ಗಾನವಿ, ಕಮಿಡಿಯನ್ ಪ್ರಶಾಂತ್ ಮತ್ತು ಉದ್ಯಮಿ, ಮಾಜಿ ನಟಿ ಸೋನಿಕಾ ಅವರುಗಳನ್ನು ಸುದೀಪ್ ಅವರು ಪ್ರೇಕ್ಷಕರಿಗೆ ಪರಿಚಯಿಸಿದ್ದು, ಈ ಮೂವರೂ ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸುತ್ತಿದ್ದಾರೆ.

ಬಿಗ್​​ಬಾಸ್ ಮನೆಗೆ ಮೂವರು ಹೊಸ ಸ್ಪರ್ಧಿಗಳ ಎಂಟ್ರಿ: ಯಾರದು?
Wild Card Entry
ಮಂಜುನಾಥ ಸಿ.
|

Updated on: Sep 27, 2026 | 10:41 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಮನೆಗೆ ಹೊಸ ಸದಸ್ಯರ ಎಂಟ್ರಿ
  • ವೈಲ್ಡ್ ಕಾರ್ಡ್ ಮೂಲಕ ಬಂದ ಮೂವರು ಸ್ಪರ್ಧಿಗಳು
  • ಸೋನಿಕಾ, ಗಾನವಿ ಮತ್ತು ಪ್ರಶಾಂತ್

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಕಳೆದ ವಾರ ಏನೇನೋ ಬದಲಾವಣೆಗಳಾಗಿವೆ. ಈ ವಾರ ಒಟ್ಟು ಮೂವರು ಸ್ಪರ್ಧಿಗಳು ಈಗಾಗಲೇ ಮನೆಯಿಂದ ಹೊರಗೆ ಹೋಗಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್​​ನಲ್ಲಿ ತಾಂಡವ್ ಹೊರಗೆ ಹೋದರು (ಮತ್ತೆ ಒಳಗೆ ಬರುತ್ತಾರೆ). ಬಳಿಕ ವೀಕೆಂಡ್ ಎಲಿಮಿನೇಷನ್​​ನಲ್ಲಿ ಅವಿನಾಶ್ ಮತ್ತು ವೈಷ್ಣವ್ ಹೊರಗೆ ಹೋಗಿದ್ದಾರೆ. ಅಂದರೆ ಒಟ್ಟು ಮೂರು ಮಂದಿ ಮನೆಯಿಂದ ಹೊರಗೆ ಹೋಗಿದ್ದಾರೆ. ಈಗ ಆ ಮೂವರ ಜಾಗವನ್ನು ತುಂಬಲು ಮೂವರನ್ನು ವೈಲ್ಡ್ ಕಾರ್ಡ್ ಮೂಲಕ ಮನೆಯ ಒಳಗೆ ಕಳಿಸುತ್ತಿದ್ದಾರೆ.

ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಮೂವರು ಹೊಸ ಸ್ಪರ್ಧಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಈ ಮೂವರು ಈ ಸೀಸನ್ನಿನ ವೈಲ್ಡ್ ಕಾರ್ಡ್​ ಸ್ಪರ್ಧಿಗಳಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಘಾಟಿ ಹುಡುಗಿ ಗಾನವಿ, ಕಮಿಡಿಯನ್ ಪ್ರಶಾಂತ್ ಮತ್ತು ಉದ್ಯಮಿ, ಮಾಜಿ ನಟಿ ಸೋನಿಕಾ ಅವರುಗಳನ್ನು ಸುದೀಪ್ ಅವರು ಪ್ರೇಕ್ಷಕರಿಗೆ ಪರಿಚಯಿಸಿದ್ದು, ಈ ಮೂವರೂ ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸುತ್ತಿದ್ದಾರೆ.

ಈ ಮೊದಲು ‘ಹಳ್ಳಿ ಪವರ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಗಾನವಿ, ಕಂಟೆಂಟ್ ಕ್ರಿಯೇಟರ್ ಸಹ ಹೌದು. ಈ ಹಿಂದಿನ ರಿಯಾಲಿಟಿ ಶೋನಲ್ಲಿ ತಮ್ಮ ನೇರ ಮಾತು ಹಾಗೂ ದಿಟ್ಟ ವ್ಯಕ್ತಿತ್ವದಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ‘ಹಳ್ಳಿ ಪವರ್’ ಶೋನಲ್ಲಿ ಮೊದಲ ರನ್ನರ್ ಅಪ್ ಆಗಿ ಸೌಂಡ್ ಮಾಡಿದ್ದರು ಗಾನವಿ. ತಾವು ಫೇಮಸ್ ಆಗಬೇಕು, ವೈರಲ್ ಆಗಬೇಕು ದೊಡ್ಡ ಮಟ್ಟದಲ್ಲಿ ಜನರ ಪ್ರೀತಿ ಸಿಗಬೇಕು ಎಂಬ ಕಾರಣಕ್ಕಾಗಿ ತಾವು ಬಿಗ್​​ಬಾಸ್​ ಶೋಗೆ ಬಂದಿರುವುದಾಗಿ ಅವರು ಹೇಳಿಕೊಂಡರು.

ಇದನ್ನೂ ಓದಿ:ಸಿನಿಮಾ ರಿಲೀಸ್​​ಗೆ ಮುಂಚೆ ‘ರಣಬಾಲಿ’ ಡಾಕ್ಯು ಸರಣಿ ರಿಲೀಸ್, ಎಲ್ಲಿ ನೋಡಬಹುದು?

ಎರಡನೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಕಮಿಡಿಯನ್ ಪ್ರಶಾಂತ್ ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ. ಪ್ರಶಾಂತ್ ಕೆಲವು ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೀಲ್ಸ್​​ಗಳ ಮೂಲಕವೂ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಹಿಂದೆ ಬಿಗ್​​ಬಾಸ್ ವೇದಿಕೆ ಮೇಲೆ ಬಿಗ್​​ಬಾಸ್ ಸ್ಪರ್ಧಿಗಳ ಸ್ಪೂಫ್​​ಗಳನ್ನು ಸಹ ಪ್ರಶಾಂತ್ ಮಾಡಿದ್ದರು. ಈಗ ಅವರು ಬಿಗ್​​ಬಾಸ್ ಮನೆಗೆ ಹೋಗಿದ್ದಾರೆ. ತಾವು ಜಗಳ ಮಾಡಲು ಅಲ್ಲ ಬದಲಿಗೆ ಮನೆಯಲ್ಲಿ ತುಸು ಫನ್ ವಾತಾವರಣ ಸೃಷ್ಟಿಸಲು ಹೋಗುತ್ತಿರುವುದಾಗಿ ಹೇಳಿದ್ದಾರೆ.

ಮೂರನೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಸೋನಿಕಾ ಗೌಡ ಅವರು ಸಹ ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ. ಸೋನಿಕಾ ಗೌಡ ಅವರು ಉದ್ಯಮಿ, ಫ್ಯಾಷನ್ ಡಿಸೈನರ್, ಮಾಜಿ ನಟಿ ಸಹ ಹೌದು. ಸೋನಿಕಾ ಅವರೇ ಹೇಳಿಕೊಂಡಿರುವಂತೆ ಅವರಿಗೆ ನಟನೆಯನ್ನು ಮುಂದುವರೆಸುವ ಆಸೆಯಂತೆ. ಬಿಗ್​​ಬಾಸ್ ಅಂಥಹಾ ಜನಪ್ರಿಯ ವೇದಿಕೆಯಲ್ಲಿ ಕಾಣಿಸಿಕೊಂಡರೆ ಅದು ತಮ್ಮ ನಟನೆ ಮುಂದುವರೆಸುವ ಆಸೆಗೆ ಸಹಾಯಕ ಆಗಬಹುದು ಎಂಬ ಕಾರಣಕ್ಕೆ ತಾವು ಬಿಗ್​​ಬಾಸ್​​ಗೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ಭಾನುವಾರದ ಎಪಿಸೋಡಿನಲ್ಲಿ ವೈಲ್ಡ್ ಕಾರ್ಡ್​​ ಎಂಟ್ರಿಗಳು ಪ್ರೇಕ್ಷಕರಿಗೆ ಪರಿಚಯಿಸಲ್ಪಟ್ಟಿದ್ದಾರೆ ಆದರೆ ಸ್ಪರ್ಧಿಗಳಿಗೆ ಇನ್ನೂ ಪರಿಚಯಿಸಲಾಗಿಲ್ಲ. ಅವರು ಸೋಮವಾರದ ಎಪಿಸೋಡಿನಲ್ಲಿ ಬಹುಷಃ ಮನೆಯ ಒಳಗೆ ಹೋಗಲಿದ್ದಾರೆ. ಮನೆಯಿಂದ ಮಿಡ್ ವೀಕ್ ಎಲಿಮಿನೇಷನ್​​ನಲ್ಲಿ ಮನೆಯಿಂದ ಹೊರಗೆ ಬಂದಿರುವ ತಾಂಡವ್, ಮತ್ತೆ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಡಬೇಕಿದೆ. ಅದು ಸಹ ಇದೇ ವಾರ ನಡೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್