ಸಿನಿಮಾ ರಿಲೀಸ್ಗೆ ಮುಂಚೆ ‘ರಣಬಾಲಿ’ ಡಾಕ್ಯು ಸರಣಿ ರಿಲೀಸ್, ಎಲ್ಲಿ ನೋಡಬಹುದು?
Vijay Deverakonda: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂಡಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ರಾಣಬಾಲಿ' ಚಿತ್ರವನ್ನು ರಾಹುಲ್ ಸಂಕೃತ್ಯಾಯನ್ ನಿರ್ದೇಶನ ಮಾಡಿದ್ದು, ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಸ್ವಾತಂತ್ರ್ಯ ಹೋರಾಟಗಾರನ ಕತೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಸಿನಿಮಾದ ಕತೆಯ ನೈಜತೆಯ ಬಗ್ಗೆ ಮಾಹಿತಿ ನೀಡಲೆಂದು ಆ ಬಗ್ಗೆ ಡಾಕ್ಯುಸರಣಿಯನ್ನು ರಿಲೀಸ್ ಮಾಡಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರದ್ದು ಟಾಲಿವುಡ್ನ ಬಲು ಯಶಸ್ವಿ ಮತ್ತು ಜನಪ್ರಿಯ ಜೋಡಿ. ಈ ಇಬ್ಬರೂ ಒಟ್ಟಿಗೆ ನಟಿಸಿರುವ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಸಿನಿಮಾಗಳು ಹಿಟ್ ಎನಿಸಿಕೊಂಡಿದ್ದವು. ಆದರೆ ಕಳೆದ ಏಳು ವರ್ಷಗಳಿಂದಲೂ ಈ ಜೋಡಿ ಒಟ್ಟಿಗೆ ನಟಿಸಿದ್ದೇ ಇಲ್ಲ. ಆದರೆ ಇದೀಗ ಏಳು ವರ್ಷಗಳ ಬಳಿಕ ‘ರಣಬಾಲಿ’ ಸಿನಿಮಾನಲ್ಲಿ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾವು ಸ್ವಾತಂತ್ರ್ಯ ಹೋರಾಟದ ಕತೆಯನ್ನು ಒಳಗೊಂಡಿದೆ. ಸಿನಿಮಾದ ರಿಲೀಸ್ ಡೇಟ್ ಈಗಾಗಲೇ ನಿಗದಿ ಆಗಿದೆ. ಆದರೆ ಸಿನಿಮಾ ಬಿಡುಗಡೆಗೂ ಮೊದಲು ಡಾಕ್ಯುಮೆಂಟರಿಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂಡಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರಾಣಬಾಲಿ’ ಚಿತ್ರವನ್ನು ರಾಹುಲ್ ಸಂಕೃತ್ಯಾಯನ್ ನಿರ್ದೇಶನ ಮಾಡಿದ್ದು, ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಸ್ವಾತಂತ್ರ್ಯ ಹೋರಾಟಗಾರನ ಕತೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಸಿನಿಮಾದ ಕತೆಯ ನೈಜತೆಯ ಬಗ್ಗೆ ಮಾಹಿತಿ ನೀಡಲೆಂದು ಆ ಬಗ್ಗೆ ಡಾಕ್ಯುಸರಣಿಯನ್ನು ರಿಲೀಸ್ ಮಾಡಲಾಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಚಿತ್ರತಂಡವು ‘ರಣಬಾಲಿ’ ಡಾಕ್ಯುಮೆಂಟರಿ ಸರಣಿಯ ಬಗ್ಗೆ ಮಾಹಿತಿ ನೀಡಿದೆ, ಬಿಡುಗಡೆ ಆಗಲಿರುವ ಡಾಕ್ಯುಮೆಂಟರಿಯು ‘ರಣಬಾಲಿ’ ಕಥೆಯ ಹಿಂದಿನ ಇತಿಹಾಸವನ್ನು ತೋರಿಸಲಿದೆ, ಜೊತೆಗೆ ಚಿತ್ರತಂಡ ಪಟ್ಟಿರುವ ಶ್ರಮವನ್ನು ಸಹ ಈ ಡಾಕ್ಯುಮೆಂಟರಿ ಒಳಗೊಂಡಿರಲಿದೆ. ‘2 ವರ್ಷಗಳ ಸಂಶೋಧನೆ. 150 ವರ್ಷಗಳ ಮರೆತುಹೋದ ಇತಿಹಾಸ. ನಮಗೆ ಹೇಳಲಾದದ್ದು ಕೇವಲ ಒಂದು ಆವೃತ್ತಿ ಮಾತ್ರ. ಆದರೆ ನಡೆದದ್ದು ಅದಕ್ಕಿಂತ ಹೆಚ್ಚು ವಿನಾಶಕಾರಿಯಾಗಿದೆ’ ಎಂದು ಚಿತ್ರತಂಡ ಹೇಳಿದೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯ ‘ಮೈಸಾ’ ಟೀಸರ್ ರಿಲೀಸ್; ನಟಿಯ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ
ಮುಂದುವರೆದು, ‘ನಾವು ಹೂತುಹೋದ, ಎಂದಿಗೂ ಮಾತನಾಡದ ವಿಷಯಗಳನ್ನು ಬಹಿರಂಗಪಡಿಸಲು ಹಿಂದಕ್ಕೆ ಹೋಗುತ್ತೇವೆ. ಇದು ಇತಿಹಾಸದ ಒಂದು ತುಣುಕು. ನೆನಪಿಡಲು ಅರ್ಹವಾದ ಕಥೆ. ಎಂದಿಗೂ ಮರೆಯಬಾರದ ಸತ್ಯ. ‘ರಣಬಾಲಿ’ ನೆವರ್ ಫರ್ಗೆಟ್ – 4 ಕಂತುಗಳ ಡಾಕ್ಯು-ಸೀರಿಸ್’ ಎಂದು ತಿಳಿಸಿದೆ. ಈ ಡಾಕ್ಯು ಸರಣಿಯಲ್ಲಿ ವಿಜಯ್, ರಶ್ಮಿಕಾ ಮತ್ತು ನಿರ್ದೇಶಕ ರಾಹುಲ್ ಕಾಣಿಸಿಕೊಳ್ಳಲಿದ್ದು, ಮೊದಲ ಸಂಚಿಕೆಯು ಸೆಪ್ಟೆಂಬರ್ 28 ರಿಂದ ಮೈತ್ರಿ ಮೂವಿ ಮೇಕರ್ಸ್ ಅಧಿಕೃತ ಯೂಟ್ಯೂಬ್ ಆನ್‌ಲೈನ್‌ನಲ್ಲಿ ವೀಕ್ಷಿಸಲು ಲಭ್ಯವಿರುತ್ತದೆ. ‘ರಣಬಾಲಿ’ ಸಿನಿಮಾವು ಅಕ್ಟೋಬರ್ 16ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ಹಾಡು, ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಸಾಕಷ್ಟು ಗಮನ ಸೆಳೆದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




