ದಾಖಲೆಯ 86ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ..!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಫೋಟಕ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಇದು ಅವರ 55ನೇ ಏಕದಿನ ಶತಕವಾಗಿದ್ದು, ಮೂರು ಮಾದರಿಗಳಲ್ಲಿ 86ನೇ ಶತಕವಾಗಿದೆ. ಕೇವಲ 74 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಶತಕ ಪೂರೈಸಿದ ಕೊಹ್ಲಿ, ಸಿಕ್ಸರ್ ಮೂಲಕ ಮೈಲಿಗಲ್ಲು ತಲುಪಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದರು. ಈ ಮೂಲಕ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ದಾಖಲೆ ಬರೆದರು.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಶತಕ ಬಾರಿಸಿದ್ದಾರೆ. ಇದು ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ 55ನೇ ಏಕದಿನ ಶತಕವಾಗಿದ್ದು, ಮೂರು ಮಾದರಿಗಳಲ್ಲೂ 86ನೇ ಶತಕವಾಗಿದೆ. ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಇದುವರೆಗೆ ಏಕದಿನ ಕ್ರಿಕೆಟ್ನಲ್ಲಿ 55 ಶತಕ, ಟೆಸ್ಟ್ ಮಾದರಿಯಲ್ಲಿ 30 ಶತಕ ಹಾಗೂ ಟಿ20 ಮಾದರಿಯಲ್ಲಿ ಒಂದು ಶತಕ ಬಾರಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಕೊಹ್ಲಿ 74 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ತಮ್ಮ ಶತಕವನ್ನು ಪೂರೈಸಿದರು. ಮತ್ತೊಂದು ಸ್ಮರಣೀಯ ಸಂಗತಿಯೆಂದರೆ ಕೊಹ್ಲಿ ಈ ಶತಕವನ್ನು ಸಿಕ್ಸರ್ ಬಾರಿಸುವ ಮೂಲಕ ಪೂರೈಸಿದರು. ಕೊಹ್ಲಿ ಸಿಕ್ಸರ್ ಮೂಲಕ ಶತಕ ಪೂರೈಸುತ್ತಿದ್ದಂತೆ ಇಡೀ ಮೈದಾನವೇ ಹುಚ್ಚೆದ್ದು ಕುಣಿದು ಕುಪ್ಪಳಿಸಿತು.
ತಿರುವನಂತಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮೂರು ಶತಕಗಳು ದಾಖಲಾದವು. ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರ ಜಸ್ಟಿನ್ ಗ್ರೀವ್ಸ್ ಅವರ ಚೊಚ್ಚಲ ಶತಕದೊಂದಿಗೆ ಇದು ಪ್ರಾರಂಭವಾಯಿತು. ನಂತರ, ಭಾರತದ ನಾಯಕ ಶುಭ್ಮನ್ ಗಿಲ್ ತಮ್ಮ 10 ನೇ ಏಕದಿನ ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಸತತ ಎರಡನೇ ಏಕದಿನ ಶತಕ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 10 ನೇ ಶತಕವನ್ನು ಪೂರೈಸಿದರು.
Published On - 9:16 pm, Sun, 27 September 26




