AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲಿ ಬೀಳುತ್ತೆ, ಎಷ್ಟು ಜೀವ ಹೋಗುತ್ತೆ ಗೊತ್ತಿಲ್ಲ: ಆಕಾಶದಿಂದ ಬಿದ್ದ ಕ್ಷಿಪಣಿ, ಕತಾರ್‌ನಲ್ಲಿ ಬೆಂಕಿಯ ಜ್ವಾಲೆ

ಎಲ್ಲಿ ಬೀಳುತ್ತೆ, ಎಷ್ಟು ಜೀವ ಹೋಗುತ್ತೆ ಗೊತ್ತಿಲ್ಲ: ಆಕಾಶದಿಂದ ಬಿದ್ದ ಕ್ಷಿಪಣಿ, ಕತಾರ್‌ನಲ್ಲಿ ಬೆಂಕಿಯ ಜ್ವಾಲೆ

ಅಕ್ಷಯ್​ ಪಲ್ಲಮಜಲು​​
|

Updated on: Feb 28, 2026 | 8:19 PM

Share

ಇಸ್ರೇಲ್-ಇರಾನ್ ಯುದ್ಧವು ಕತಾರ್‌ಗೂ ವಿಸ್ತರಿಸಿದೆ. ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆ ಸಮೀಪ ಕ್ಷಿಪಣಿ ದಾಳಿಯ ವಿಡಿಯೋ ವೈರಲ್ ಆಗಿದೆ. ಈ ಪ್ರದೇಶದಲ್ಲಿ ವಾಸಿಸುವ ಸುಮಾರು 8 ಲಕ್ಷ ಭಾರತೀಯರ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಿದೆ. ಭಾರತ ಸರ್ಕಾರವು ತನ್ನ ಪ್ರಜೆಗಳಿಗೆ "ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ" ಎಂದು ರೆಡ್ ಅಲರ್ಟ್ ಘೋಷಿಸಿದೆ.

ದೋಹಾ, ಫೆ.28: ಇಸ್ರೇಲ್-ಇರಾನ್ ನಡುವಿನ ಯುದ್ಧದ ಕಿಡಿ ಈಗ ನೆರೆಯ ದೇಶಗಳಿಗೂ ಹರಡುತ್ತಿದ್ದು, ಕತಾರ್‌ನಿಂದ ಆತಂಕಕಾರಿ ವಿಡಿಯೋವೊಂದು ಹೊರಬಂದಿದೆ. ಆಕಾಶದಿಂದ ಕ್ಷಿಪಣಿಯೊಂದು ವೇಗವಾಗಿ ಬಂದು ಭೂಮಿಗೆ ಅಪ್ಪಳಿಸಿ ಸ್ಫೋಟಗೊಳ್ಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಪಕ್ಕಾಕ್ಕೆ ಬನ್ನಿ ಎಂದು ಕಿರುಚುತ್ತಿರುವುದು ಈಗ ಇಡೀ ವಿಶ್ವದ ಗಮನ ಸೆಳೆದಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇರಾನ್ ತನ್ನ ನೆರೆರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎನ್ನಲಾಗಿದೆ. ಕತಾರ್‌ನಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆಯ ಆಸುಪಾಸಿನಲ್ಲಿ ಈ ಕ್ಷಿಪಣಿ ಬಿದ್ದಿದೆ ಎಂದು ವರದಿಯಾಗಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಭಾರತೀಯ ಮೂಲದವನೆಂದು ಅಂದಾಜಿಸಲಾಗಿದ್ದು, ಕ್ಷಿಪಣಿ ತೀರಾ ಹತ್ತಿರದಲ್ಲಿ ಬೀಳುತ್ತಿರುವುದನ್ನು ಕಂಡು ಗಾಬರಿಯಿಂದ ತನ್ನ ಜೊತೆಗಿದ್ದವರಿಗೆ ಪಕ್ಕಕ್ಕೆ ಸರಿಯುವಂತೆ ಹಿಂದಿಯಲ್ಲಿ ಕೂಗಿದ್ದಾರೆ. ಕತಾರ್‌ನಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಯುದ್ಧದ ತೀವ್ರತೆ ಇರಾನ್-ಇಸ್ರೇಲ್ ಗಡಿ ದಾಟಿ ಕತಾರ್ ಮತ್ತು ಯುಎಇ ಅಂತಹ ದೇಶಗಳಿಗೂ ವ್ಯಾಪಿಸುತ್ತಿರುವುದು ಅಲ್ಲಿರುವ ಭಾರತೀಯ ಸಮುದಾಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಈಗಾಗಲೇ ಭಾರತ ಸರ್ಕಾರವು ಅಲ್ಲಿರುವ ತನ್ನ ಪ್ರಜೆಗಳಿಗೆ “ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ” ಎಂದು ರೆಡ್ ಅಲರ್ಟ್ ಘೋಷಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More