ಮಹಾ ತಿರುವು: ಗೌತಮ್ ಕೈಯಲ್ಲಿ ತಾಯಿಯ ಕೆಟ್ಟ ಕೆಲಸದ ಹಿಸ್ಟರಿ; ದುರ್ಗಾಗೆ ಬಂತು ಅಕ್ಕನ ನೆನಪು
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಮತ್ತು ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳು ಪ್ರೇಕ್ಷಕರನ್ನು ತಲ್ಲಣಗೊಳಿಸುವ ತಿರುವುಗಳನ್ನು ಪಡೆದುಕೊಂಡಿವೆ. “ಅಮೃತಧಾರೆ”ಯಲ್ಲಿ ಗೌತಮ್ ತಾಯಿಯ ಮೋಸ ಗೊತ್ತಾಗುವ ಸಮಯ ಸಮೀಪಿಸುತ್ತಿದ್ದರೆ, “ನಾ ನಿನ್ನ ಬಿಡಲಾರೆ”ಯಲ್ಲಿ ದುರ್ಗಾ ಅಕ್ಕ ಅಂಬಿಕಾಳ ಸಾವಿನ ರಹಸ್ಯ ತಿಳಿದುಕೊಳ್ಳುತ್ತಾಳೆ .

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ (Amruthadhaare) ಹಾಗೂ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳು ಮಹತ್ವದ ತಿರುವುಗಳನ್ನು ಪಡೆದು ಸಾಗುತ್ತಿರುವುದು ಗೊತ್ತೇ ಇದೆ. ಈ ಎರಡು ಧಾರಾವಾಹಿಗಳು ಟಿಆರ್ಪಿಯಲ್ಲಿ ಸ್ಪರ್ಧೆಗೆ ಇಳಿದಿವೆ ಎಂದೇ ಹೇಳಬಹುದು. ಈ ಎರಡೂ ಧಾರಾವಾಹಿಗಳಲ್ಲಿ ಮಹಾ ತಿರುವೊಂದು ಬರುವ ಸೂಚನೆ ಸಿಕ್ಕಿದೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ತಾಯಿಯ ಕೆಟ್ಟ ಕೆಲಸ ಗೌತಮ್ಗ ಗೊತ್ತಾಗೋ ಹಂತದಲ್ಲಿ ಇದ್ದರೆ, ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ದುರ್ಗಾಗೆ ಅಕ್ಕ ಅಂಬಿಕಾಳ ಇತಿಹಾಸ ಗೊತ್ತಾಗೋ ಸಮಯ ಹತ್ತಿರವಾಗಿದೆ.
‘ಅಮೃತಧಾರೆ’ ಧಾರಾವಾಹಿ
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮಲತಾಯಿ ಶಕುಂತಲಾ ವಿಲನ್. ಆಕೆ ಗೊತ್ತಿಲ್ಲದೆ ಗೌತಮ್ಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾಳೆ. ಇದು ಈವರೆಗೆ ಗೌತಮ್ ಅರಿವಿಗೆ ಬಂದಿಲ್ಲ. ಆದರೆ, ಭೂಮಿಕಾ ಇದನ್ನು ಅರಿತುಕೊಂಡಳು ಮತ್ತು ಶಕುಂತಲಾ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಶಕುಂತಲಾಗೆ ಇದರಿಂದ ಸಾಕಷ್ಟು ತೊಂದರೆ ಆಗಿದೆ.
‘ಅಮೃತಧಾರೆ’ ಪ್ರೋಮೋ
View this post on Instagram
‘ಗೌತಮ್ಗೆ ಇದನ್ನೆಲ್ಲ ಹೋಗಿ ಹೇಳು ನಂಬ್ತಾನಾ ನೋಡೋಣ’ ಎಂದು ಶಕುಂತಲಾಳು ಭೂಮಿಕಾಗೆ ಚಾಲೆಂಜ್ ಮಾಡಿದಳು. ಈ ಚಾಲೆಂಜ್ನ ಸ್ವೀಕರಿಸಿದ ಭೂಮಿಕಾ, ಹೋಗಿ ಗೌತಮ್ ಬಳಿ ಹೇಳಿದ್ದಾಳೆ. ಅಷ್ಟೇ ಅಲ್ಲ, ಫೋನ್ ಟ್ಯಾಪಿಂಗ್ ಮಾಡಿ, ಅದರ ಆಡಿಯೋಗಳನ್ನು ಇಟ್ಟುಕೊಂಡು ಗೌತಮ್ಗೆ ಕೇಳಿಸಿದ್ದಾಳೆ. ಇದರಿಂದ ಧಾರಾವಾಹಿಗೆ ಮಹಾ ತಿರುವು ಬರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ನಾ ನಿನ್ನ ಬಿಡಲಾರೆ
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಅಂಬಿಕಾ ಈಗಾಗಲೇ ನಿಧನ ಹೊಂದಿದ್ದಾಳೆ. ಆಕೆ ಆತ್ಮವಾಗಿ ಎಲ್ಲ ಕಡೆಗಳಲ್ಲಿ ಓಡಾಡುತ್ತಿದ್ದಾಳೆ. ಆಕೆ ಸಹೋದರಿ ದುರ್ಗಾಗೆ ಮಾತ್ರ ಕಾಣಿಸುತ್ತಿದ್ದಾಳೆ. ಅಂಬಿಕಾಳನ್ನು ಸಾಯಿಸಿದ ಮನೆ ಬಳಿ ದುರ್ಗಾ ಹೋಗಿದ್ದಾಳೆ. ಆಗ ಆಕೆಗೆ ಅಕ್ಕನ ನೆನಪು ಬಂದಿದೆ. ದುರ್ಗಾಳ ಮುಖವು ಅಸ್ಪಷ್ಟವಾಗಿ ಕಾಣಿಸಿದೆ.
ನಾ ನಿನ್ನ ಬಿಡಲಾರೆ ಪ್ರೋಮೋ
View this post on Instagram
ಈ ಮೊದಲು ದುರ್ಗಾ ಕನಸಿನಲ್ಲಿ ಅಂಬಿಕಾಳನ್ನು ಸುಟ್ಟ ಮನೆಯ ಜಾಗದ ಕನಸು ಪದೇ ಪದೇ ಬರುತ್ತಲೇ ಇತ್ತು. ಆದರೆ, ಆ ಜಾಗ ಯಾವುದು ಎಂದು ಗೊತ್ತಿರಲಿಲ್ಲ. ಈಗ ಆ ಜಾಗವನ್ನು ನಿಜವಾಗಿ ನೋಡಿ ಶಾಕ್ ಆಗಿದೆ. ಆಕೆ ತಲೆ ಸುತ್ತಿ ಬಿದ್ದಿದ್ದಾಳೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:42 am, Thu, 14 August 25







