AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್ ಅವಾರ್ಡ್​​​ಗೆ ಇರಾನ್ ಡ್ರೋನ್ ದಾಳಿ ಭೀತಿ; ಎಚ್ಚರಿಸಿದ ಪೊಲೀಸರು

ಲಾಸ್ ಎಂಜಲೀಸ್‌ನಲ್ಲಿ 2026ರ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಇರಾನ್ ದಾಳಿಯ ಭೀತಿ ಆವರಿಸಿದೆ. ಅಮೆರಿಕ-ಇಸ್ರೇಲ್ vs ಇರಾನ್ ಸಂಘರ್ಷದಿಂದ ಡ್ರೋನ್ ದಾಳಿಯ ಎಚ್ಚರಿಕೆ ನೀಡಲಾಗಿದೆ. ಎಫ್‌ಬಿಐ ಸೂಚನೆಯಂತೆ ಡಾಲ್ಬಿ ಥಿಯೇಟರ್ ಸುತ್ತ ಭದ್ರತೆ ಬಿಗಿಗೊಳಿಸಲಾಗಿದೆ. ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಆಸ್ಕರ್ ಅವಾರ್ಡ್​​​ಗೆ ಇರಾನ್ ಡ್ರೋನ್ ದಾಳಿ ಭೀತಿ; ಎಚ್ಚರಿಸಿದ ಪೊಲೀಸರು
ಆಸ್ಕರ್
ರಾಜೇಶ್ ದುಗ್ಗುಮನೆ
|

Updated on: Mar 12, 2026 | 3:04 PM

Share

ಆಸ್ಕರ್ ಅವಾರ್ಡ್ (Oscar Awards) ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಅಮೆರಿಕದ ಲಾಸ್ ಎಂಜಲೀಸ್​​​ನಲ್ಲಿರುವ ಹಾಲಿವುಡ್ ಸ್ಟುಡಿಯೋದ ಡಾಲ್ಬಿ ಥಿಯೇಟರ್​​​ನಲ್ಲಿ ನಡೆಯಲಿದೆ. ಈಗ ಈ ಶೋಗೆ ಇರಾನ್ ದಾಳಿಯ ಭಯ ಕಾಡುತ್ತಿದೆ. ಅಮೆರಿಕ, ಇಸ್ರೇಲ್ vs ಇರಾನ್ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ದಾಳಿ-ಪ್ರತಿದಾಳಿಗಳು ನಡೆಯುತ್ತಲೇ ಇವೆ. ಅಮೆರಿಕದ ಕ್ಯಾಲಿಫೋರ್ನಿಯಾ ಮೇಲೆ ದಾಳಿ ನಡೆಯುವ ಆತಂಕವೂ ಇದೆ.

ಸದ್ಯ ಹಾಲಿವುಡ್ ಸ್ಟುಡಿಯೋದಲ್ಲಿ ಆಸ್ಕರ್​ ಅವಾರ್ಡ್​​ಗೆ ಸಿದ್ಧತೆಗಳು ನಡೆಯುತ್ತಿವೆ. ಸಿನಿಮಾ ಜಗತ್ತಿನ ದೊಡ್ಡ ಹಬ್ಬದ ಆಚರಣೆಗೆ ಎಲ್ಲರೂ ರೆಡಿ ಆಗುತ್ತಿದ್ದಾರೆ. ಈ ಮಧ್ಯೆ ಎಫ್​​​ಬಿಐ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಆಸ್ಕರ್ ನಡೆಯುವ ಜಾಗದಲ್ಲಿ ಭದ್ರತೆ ಹೆಚ್ಚುಸುವಂತೆ ಸೂಚಿಸಿದ್ದಾರೆ. ಡ್ರೋನ್ ದಾಳಿ ನಡೆಯುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ತೀವ್ರ ಕಾಡ್ಗಿಚ್ಚು; ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದು?

ಎಬಿಸಿ ನ್ಯೂಸ್ ವರದಿ ಮಾಡಿದ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಇರಾನ್ ಹಾಗೂ ಇಸ್ರೇಲ್ ಮಧ್ಯೆ ಯುದ್ಧ ಭೀತಿ ಮೂಡಿದೆ. ಇರಾನ್ ಮೇಲೆ ಅಮೆರಿಕ ನಡೆಸಿರುವ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಶ್ಚಿಮ ಕರಾವಳಿಯತ್ತ ಇರಾನ್ ಡ್ರೋನ್‌ ದಾಳಿ ಮಾಡಬಹುದು ಎನ್ನಲಾಗಿದೆ. ಆಸ್ಕರ್ ಅವಾರ್ಡ್​​​ ಕಾರ್ಯಕ್ರಮದಲ್ಲಿ ಸಾಕಷ್ಟು ದೊಡ್ಡ ಸೆಲೆಬ್ರಿಟಿಗಳು ಭಾಗಿ ಆಗುತ್ತಾರೆ. ಈ ಸಂದರ್ಭದಲ್ಲಿ ದಾಳಿ ನಡೆದರೆ ಅಮೆರಿಕಕ್ಕೆ ಭಾರೀ ನಷ್ಟ ಉಂಟಾಗಲಿದೆ. ಫೆಬ್ರವರಿ ತಿಂಗಳಲ್ಲಿ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿತು. ಈ ಮೂಲಕ ಅವರ ಸುಪ್ರೀಂ ನಾಯಕ, ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಿದರು. ಇದು ಇರಾನ್​​ನ ಕೆರಳಿಸಿದೆ.

ಅಕಾಡೆಮಿ ಅವಾರ್ಡ್ಸ್ ಕಾರ್ಯಮ್ರಮದ ದಿನಾಂಕ

98ನೇ ಸಾಲಿನ ಆಸ್ಕರ್ ಅವಾರ್ಡ್ಸ್ 2026ರ ಮಾರ್ಚ್ 15ರಂದು (ಭಾರತೀಯ ಕಾಲಮಾನ: ಮಾರ್ಚ್ 16, ಮುಂಜಾನೆ 4.30) ನಡೆಯಲಿದೆ. ಕಾಮಿಡಿಯನ್ ಒ ಬ್ರೇನ್ ಅವರು ಈ ಶೋನ ನಡೆಸಿಕೊಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ