ಅಮೆರಿಕದಲ್ಲಿ ತೀವ್ರ ಕಾಡ್ಗಿಚ್ಚು; ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದು?
ಲಾಸ್ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿಚ್ಚು ಹಬ್ಬಿದ್ದು, ಆಸ್ಕರ್ ಪ್ರಶಸ್ತಿ ಸಮಾರಂಭದ ಮೇಲೆ ಪರಿಣಾಮ ಬೀರುತ್ತದೆ ಎಂಬ ವದಂತಿಗಳು ಹಬ್ಬಿವೆ. ಆದರೆ, ಆಸ್ಕರ್ ಸಂಘಟಕರು ಸಮಾರಂಭವು ನಿಗದಿತ ದಿನಾಂಕದಂದು ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ. ಕಾಡ್ಗಿಚ್ಚಿನಿಂದಾಗಿ ಹಾಲಿವುಡ್ ಸ್ಟುಡಿಯೋಗಳಿಗೆ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ .
ಅಮೆರಿಕದ ಲಾಸ್ ಏಂಜಲೀಸ್ ಮೊದಲಾದ ಭಾಗದಲ್ಲಿ ತೀವ್ರವಾದ ಕಾಡ್ಗಿಚ್ಚು ಹಬ್ಬಿದೆ. ಇದರ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಭಯ ಹುಟ್ಟಿಸಿದೆ. ಅಮೆರಿಕ ಹಿಂದೆಂದೂ ಕಂಡಿರದ ಕಾಡ್ಗಿಚ್ಚು ಇದಾಗಿದೆ ಎಂಬ ಬಗ್ಗೆ ವರದಿಗಳು ಆಗಿವೆ. ಈ ಹಿನ್ನೆಲೆಯಲ್ಲಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದಾಗುತ್ತದೆ ಎಂಬ ವದಂತಿಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ನಿಗದಿಪಡಿಸಿದ ದಿನಾಂಕದಂದೇ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
ಆಸ್ಕರ್ ಅವಾರ್ಡ್ ಕಾರ್ಯಕ್ರಮ ಕಳೆದ 96 ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಾಲಿವುಡ್ನ ಪ್ರತಿಷ್ಠಿತ ಅವಾರ್ಡ್ ಫಂಕ್ಷನ್ಗಳಲ್ಲಿ ಇದು ಕೂಡ ಒಂದು ಎಂಬುದು ಅನೇಕರಿಗೆ ತಿಳಿದಿರುವ ವಿಚಾರ. ಈ ಬಾರಿ ನಡೆಯುತ್ತಿರುವುದು 97ನೇ ಸಾಲಿನ ಅವಾರ್ಡ್ ಕಾರ್ಯಕ್ರಮ. ಈ ಕಾರ್ಯಕ್ರಮ ಕಾಡ್ಗಿಚ್ಚಿನ ಕಾರಣದಿಂದ ರದ್ದಾಗಿದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅಲ್ಲಗಳೆಯಲಾಗಿದೆ.
‘96 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ರದ್ದಾಗುತ್ತಿದೆ’ ಎಂದು ವರದಿ ಹರಿದಾಡಿತ್ತು. ಆದರೆ, ಆಸ್ಕರ್ ಮೂಲಗಳು ಇದನ್ನು ಅಲ್ಲಗಳೆದಿವೆ. ಈ ಸಂಸ್ಥೆಯಿಂದ ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಸಿಕ್ಕಿದೆ. ಪ್ರತಿ ವರ್ಷವೂ ಇದರಿಂದ ಸಾಕಷ್ಟು ಜನರಿಗೆ ಲಾಭ ಆಗುತ್ತಿದೆ. ಕೊವಿಡ್ ಸಂದರ್ಭದಲ್ಲೂ ಇದನ್ನು ನಿಲ್ಲಿಸಿರಲಿಲ್ಲ. ಹಾಗಗಿ ಈ ಬಾರಿಯೂ ಅವಾರ್ಡ್ ಕಾರ್ಯಕ್ರಮ ನಡೆದೇ ನಡೆಯುತ್ತದೆ ಎಂದು ವರದಿ ಆಗಿದೆ.
ಮಾರ್ಚ್ 2ರಂದು ‘ಆಸ್ಕರ್ ಅವಾರ್ಡ್’ ಕಾರ್ಯಕ್ರಮ ನಡೆಯುತ್ತಿದೆ. ದೇಶ-ವಿದೇಶದ ಸಿನಿಮಾಗಳು ಈ ಬಾರಿಯ ರೇಸ್ನಲ್ಲಿ ಇದೆ. ಈ ಪೈಕಿ ಹಲವು ವಿಭಾಗದಲ್ಲಿ ಅವಾರ್ಡ್ಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಿನಿಮಾ ಮೊದಲಾದ ವಿಭಾಗಗಳಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಹೀಗಾಗಿದ್ದರೆ ‘ಜೈ ಹೋ..’ ಹಾಡಿಗೆ ಆಸ್ಕರ್ ಅವಾರ್ಡ್ ಸಿಗುತ್ತಲೇ ಇರಲಿಲ್ಲ; ಅದೃಷ್ಟ ಬದಲಿಸಿತು ಆ ಘಟನೆ
ಅಮೆರಿಕದಲ್ಲಿ ಕಾಡ್ಗಿಚ್ಚು ಸಾಕಷ್ಟು ಹಾನಿ ಉಂಟು ಮಾಡಿದೆ. ಈ ಮೊದಲು ‘ಹಾಲಿವುಡ್’ಸ್ಟುಡಿಯೋಗೂ ಬೆಂಕಿ ಬಿದ್ದಿದೆ, ಅದರ ಲೋಗೋ ಸುಟ್ಟಿದೆ ಎಂದೆಲ್ಲ ಎಐ ವಿಡಿಯೋಗಳನ್ನು ಮಾಡಿ ಹರಿಬಿಡಲಾಗಿತ್ತು. ಆದರೆ, ಆ ರೀತಿ ಆಗಿಲ್ಲ ಎಂಬುದು ಈಗ ಗೊತ್ತಾಗಿದೆ. ಭಾರತದಿಂದ ‘ಆಸ್ಕರ್ ಅವಾರ್ಡ್’ ಕಾರ್ಯಕ್ರಮಕ್ಕೆ ‘ಲಾಪತಾ ಲೇಡಿಸ್’ ಕಳುಹಿಸಲಾಗಿತ್ತು. ಆದರೆ, ಸಿನಿಮಾ ಆಯ್ಕೆ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:47 am, Fri, 17 January 25