ಹೆಣ್ಮಕ್ಕಳು ಬೇಕು ಸರ್.. ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಿಎಂಗೆ ಬೇಡಿಕೆ ಇಟ್ಟ ಯುವಕ
ರೈತರು ದೇಶದ ಬೆನ್ನಲುಬು, ಅನ್ನ ಹಾಕುವ ದೇವರು ಎಂಬೆಲ್ಲ ಹೊಗಳುತ್ತಾರೆ. ಆದ್ರೆ ಮದುವೆಯಾಗಲು ರೈತನಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಇದು ಯುವ ರೈತರ ಅಳಲು. ಮೊನ್ನೆ ಹಾಸನದಲ್ಲಿ ಪ್ರಜಾಸೇವೆ ಕಾರ್ಯಕ್ರಮದಲ್ಲೂ ಸಹ ಯುವಕನೋರ್ವ ಮದುವೆ ಮಾಡಿಸಿ ಎನ್ನುವ ಬೇಡಿಕೆ ಇಟ್ಟಿದ್ದ. ಅದೇ ರೀತಿ ಇದೀಗ ಮೈಸೂರಿನ ಪಿರಿಯಾಪಟ್ಟಣದಲ್ಲಿ ಪ್ರಜಾಸೇವೆ ಕಾರ್ಯಕ್ರಮದಲ್ಲೂ ಸಹ ಸಿಎಂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದೆ ಬೇಡಿಕೆ ಬಂದಿದೆ. ಹೌದು....ಯುವಕನೋರ್ವ ಹೆಣ್ಮಕ್ಕಳು ಬೇಕು ಸರ್ ಎಂದು ಸಿಎಂಗೆ ಮನವಿ ಮಾಡಿದ್ದಾನೆ.
ಮೈಸೂರು, (ಅಕ್ಟೋಬರ್ 03): ರೈತರು ದೇಶದ ಬೆನ್ನಲುಬು, ಅನ್ನ ಹಾಕುವ ದೇವರು ಎಂಬೆಲ್ಲ ಹೊಗಳುತ್ತಾರೆ. ಆದ್ರೆ ಮದುವೆಯಾಗಲು ರೈತನಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಇದು ಯುವ ರೈತರ ಅಳಲು. ಮೊನ್ನೆ ಹಾಸನದಲ್ಲಿ ಪ್ರಜಾಸೇವೆ ಕಾರ್ಯಕ್ರಮದಲ್ಲೂ ಸಹ ಯುವಕನೋರ್ವ ಮದುವೆ ಮಾಡಿಸಿ ಎನ್ನುವ ಬೇಡಿಕೆ ಇಟ್ಟಿದ್ದ. ಅದೇ ರೀತಿ ಇದೀಗ ಮೈಸೂರಿನ ಪಿರಿಯಾಪಟ್ಟಣದಲ್ಲಿ ಪ್ರಜಾಸೇವೆ ಕಾರ್ಯಕ್ರಮದಲ್ಲೂ ಸಹ ಸಿಎಂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದೆ ಬೇಡಿಕೆ ಬಂದಿದೆ. ಹೌದು….ಯುವಕನೋರ್ವ ಹೆಣ್ಮಕ್ಕಳು ಬೇಕು ಸರ್ ಎಂದು ಸಿಎಂಗೆ ಮನವಿ ಮಾಡಿದ್ದಾನೆ.
ಕಷ್ಟಪಟ್ಟು ಬೆಳೆ ಬೆಳೆಯುವ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. 35, 40 ವರ್ಷ ಆಗಿದೆ, ಮದುವೆ ಆಗುತ್ತಿಲ್ಲ. ಜೀವನದಲ್ಲಿ ಜುಗುಪ್ಸೆ ಬಂದುಬಿಟ್ಟಿದೆ. ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಹೆಣ್ಣುಮಕ್ಕಳು ಬೇಕು ಸರ್, ಮದುವೆ ಆಗುತ್ತಿಲ್ಲ. ನಮ್ಮ ರಾಜ್ಯದಲ್ಲಿ ಅದೇ ಸಮಸ್ಯೆ ಆಗುತ್ತಿದೆ. ಎಷ್ಟೇ ಜಮೀನು ಇದ್ರೂ, ಮನೆ ಮಠ ಮಾರಿಕೊಂಡ್ರು ಹುಡುಗಿ ಕೊಡುತ್ತಿಲ್ಲ. ಲಕ್ಷಾಂತರ ಗಂಡು ಮಕ್ಕಳ ಬದುಕಿನ ಪ್ರಶ್ನೆ ಒಂದು ಯೋಜನೆ ತನ್ನಿ. ಇದನ್ನು ನೀವು ತಮಾಷೆ ಎಂದುಕೊಳ್ಳಬೇಡಿ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಡಿಕೆಶಿ, ಇದು ತಮಾಷೆಯಲ್ಲ, ಸಾಮಾಜಿಕ ಸಮಸ್ಯೆ. ನೀನು ಹೇಳುತ್ತಿರುವುದು ನಿಜ. ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಎಲ್ಲರಿಗೂ ವಿಧಾನಸೌಧದಲ್ಲೇ, ಕಚೇರಿಯಲ್ಲೇ ಇರಬೇಕು. ನಿನ್ನ ಹೆಸರಲ್ಲೇ ಯೋಜನೆ ತರೋಣ ಹೋಗು ಎಂದು ಸಮಜಾಯಿಷಿ ನೀಡಿ ಕಳುಹಿಸಿದರು.

