- TV9 Kannada Photo gallery Ankush Panghal Wins Historic Asian Games Boxing Gold for India, Securing 6th Medal
ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಆರನೇ ಪದಕ..!
ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ನಲ್ಲಿ ಅಂಕುಶ್ ಪಂಘಲ್ 80 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಇದು ಭಾರತದ ಆರನೇ ಪದಕವಾಗಿದ್ದು, ಪುರುಷರ ವಿಭಾಗದಲ್ಲಿ ಎಂಟು ವರ್ಷಗಳ ನಂತರ ಬಂದ ಮೊದಲ ಚಿನ್ನ. ಲವ್ಲಿನಾ ಮತ್ತು ಪರ್ವೀನ್ ಕೂಡ ಚಿನ್ನ ಗೆದ್ದಿದ್ದು, ಭಾರತ ಒಟ್ಟು ಆರು ಬಾಕ್ಸಿಂಗ್ ಪದಕಗಳೊಂದಿಗೆ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದೆ.
Updated on: Oct 02, 2026 | 8:09 PM

ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ನಲ್ಲಿ ಭಾರತ ತನ್ನ ಆರನೇ ಪದಕವನ್ನು ತನ್ನದಾಗಿಸಿಕೊಂಡಿದೆ. 80 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಬಾಕ್ಸರ್ ಅಂಕುಶ್ ಪಂಗಲ್ ದಕ್ಷಿಣ ಕೊರಿಯಾದ ಬಾಕ್ಸರ್ ಕಿನ್ ಮೈಯೆನ್ಸಾಂಗ್ ಅವರನ್ನು 4-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು(PC-PTI).

ಏಷ್ಯನ್ ಗೇಮ್ಸ್‌ನಲ್ಲಿ ಇದು ಅಂಕುಶ್ ಅವರ ಮೊದಲ ಚಿನ್ನದ ಪದಕವಾಗಿದ್ದು, ಭಾರತವು ಪೂರ್ಣ 8 ವರ್ಷಗಳ ನಂತರ ಪುರುಷರ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದೆ. ಅಂಕುಶ್ ಇದಕ್ಕೂ ಮೊದಲು ಅಂದರೆ 2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಅಂಕುಶ್ ಅವರ ಐತಿಹಾಸಿಕ ವಿಜಯದಿಂದಾಗಿ, ಭಾರತವು ಈಗ ಪದಕ ಪಟ್ಟಿಯಲ್ಲಿ 5 ನೇ ಸ್ಥಾನವನ್ನು ತಲುಪಿದೆ(PC-PTI).

ಇದು ಏಷ್ಯನ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಆರನೇ ಪದಕವಾಗಿದ್ದು, ಒಟ್ಟಾರೆಯಾಗಿ ಮೂರನೇ ಚಿನ್ನವಾಗಿದೆ. ಅಂಕುಶ್ ಪಂಘಲ್‌ಗಿಂತ ಮೊದಲು, ಲವ್ಲಿನಾ ಬೊರ್ಗೊಹೈನ್ 75 ಕೆಜಿ ವಿಭಾಗದಲ್ಲಿ ಮತ್ತು ಪರ್ವೀನ್ ಹೂಡಾ 65 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಇದು ಭಾರತೀಯ ಬಾಕ್ಸಿಂಗ್ ತಂಡದ ಅತ್ಯುತ್ತಮ ಪ್ರದರ್ಶನವಾಗಿದೆ(PC-PTI).

ಈ ವರ್ಷ, ಭಾರತ ಮೂರು ಚಿನ್ನ ಮತ್ತು ಮೂರು ಕಂಚು ಸೇರಿದಂತೆ ಒಟ್ಟು ಆರು ಪದಕಗಳನ್ನು ಗೆದ್ದಿದೆ. ಲವ್ಲಿನಾ, ಪರ್ವೀನ್ ಮತ್ತು ಅಂಕುಶ್ ಜೊತೆಗೆ, ಪ್ರಿಯಾ ಘಂಘಾಸ್ (60 ಕೆಜಿ), ಕಪಿಲ್ ಪೋಖಾರಿಯಾ (90 ಕೆಜಿ), ಮತ್ತು ನರೇಂದ್ರ ಬೆರ್ವಾಲ್ (+90 ಕೆಜಿ) ಸಹ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದಕ್ಕೂ ಮೊದಲು, 2010 ರ ಗುವಾಂಗ್‌ಝೌ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಒಂಬತ್ತು ಪದಕಗಳನ್ನು ಗೆದ್ದಿತ್ತು, ಆದರೆ ಆ ಸಮಯದಲ್ಲಿ ಕೇವಲ ಎರಡು ಚಿನ್ನದ ಪದಕಗಳನ್ನು ಮಾತ್ರ ಗೆದ್ದಿತ್ತು(PC-PTI).

ಅಂಕುಶ್ ಪಂಘಲ್ ಅವರ ವೃತ್ತಿಜೀವನ ಇದೀಗ ಆರಂಭವಾಗಿದ್ದು, ಈ ವರ್ಷ ನಡೆದ ಗ್ರ್ಯಾಂಡ್ ಪ್ರಿಕ್ಸ್ ಉಸ್ತಿ ನಾಡ್ ಲ್ಯಾಬೆಮ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಹಾಗೆಯೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 80 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಡಿಮೆಜಿ ಶಿಟ್ಟು ಅವರನ್ನು 4-1 ಅಂತರದಿಂದ ಸೋಲಿಸುವ ಮೂಲಕ ಅಂಕುಶ್ ಬಂಗಾರವನ್ನು ತನ್ನದಾಗಿಸಿಕೊಂಡಿದ್ದರು(PC-PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



