AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗೆ ಹೊರಡಿ, ಶೋ ನಾನು ನಡೆಸಿಕೊಂಡು ಹೋಗ್ತೀನಿ: ಸ್ಪರ್ಧಿಗಳಿಗೆ ಕಿಚ್ಚನ ಖಡಕ್ ಸಲಹೆ

ಸುದೀಪ್ ಅವರು ನಾಮಿನೇಷನ್​ ಪ್ರಕ್ರಿಯೆ ಕುರಿತು ಮಾತನಾಡುತ್ತಿದ್ದರು. ಆ ವೇಳೆ ಗಾನವಿ ಅವರನ್ನುದ್ದೇಶಿಸಿ, ‘ತಾಂಡವ್ ಇನ್ನೂ ಮಾತನಾಡಲು ಶುರು ಸಹ ಮಾಡಿರುವುದಿಲ್ಲ ಆಗಲೇ ನೀವು ಅವರಿಗೆ ಪ್ರತ್ಯುತ್ತರ ಕೊಡಲು ರೆಡಿ ಆಗಿಬಿಟ್ಟಿರುತ್ತೀರ. ನಿಮಗೆ ತಾಳ್ಮೆ ಇಲ್ಲ ಎಂದಾದರೆ ದಯವಿಟ್ಟು ಹೊರಗೆ ಹೋಗಿಬಿಡಿ. ನೀವ್ಯಾರೂ ಇಲ್ಲದೇ ಇದ್ದರೂ ಪರವಾಗಿಲ್ಲ, ಪ್ರತಿ ವಾರವೂ ನಾನು ಈ ವೇದಿಕೆಗೆ ಬರುತ್ತೀನಿ, ಹಾಡು ಹಾಡಿಯೋ, ಡ್ಯಾನ್ಸ್ ಮಾಡಿಯೋ ಜನರನ್ನು ರಂಜಿಸುತ್ತೇನೆ. ಶೋ ಕಂಪ್ಲೀಟ್ ಮಾಡುತ್ತೀನಿ’ ಎಂದರು ಸುದೀಪ್.

ಮನೆಗೆ ಹೊರಡಿ, ಶೋ ನಾನು ನಡೆಸಿಕೊಂಡು ಹೋಗ್ತೀನಿ: ಸ್ಪರ್ಧಿಗಳಿಗೆ ಕಿಚ್ಚನ ಖಡಕ್ ಸಲಹೆ
Sudeep Bigg Boss
ಮಂಜುನಾಥ ಸಿ.
|

Updated on: Oct 03, 2026 | 10:54 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಪಂಚಾಯ್ತಿ
  • ಎಲ್ಲರೂ ಮನೆ ಬಿಟ್ಟು ಹೊರಡಿ ಎಂದ ಸುದೀಪ್
  • ವೀಕ್ಷಕರನ್ನು ನಾನು ರಂಜಿಸುತ್ತೇನೆಂದ ಕಿಚ್ಚ

ಬಿಗ್​​ಬಾಸ್​​ ಕನ್ನಡ ಸೀಸನ್ 13ರಲ್ಲಿ ಈ ವಾರ ಹಲವಾರು ತಪ್ಪುಗಳು ನಡೆದಿದ್ದವು. ಟಾಸ್ಕ್ ನಡೆಯಲಿಲ್ಲ, ಕ್ಯಾಪ್ಟನ್ಸಿ ಓಟವೇ ನಡೆಯಲಿಲ್ಲ. ಸಾಕಷ್ಟು ಜಗಳುಗಳು ನಡೆದಿವೆ. ಕೆಲವರು ಕೀಳು ಭಾಷೆ ಬಳಸಿದ್ದಾರೆ. ಇದೆಲ್ಲದರ ನ್ಯಾಯ ಪಂಚಾಯಿತಿಯನ್ನು ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಮಾಡುತ್ತಿದ್ದು, ಸಹಜವಾಗಿಯೇ ಕೆಲ ಸ್ಪರ್ಧಿಗಳ ಮೇಲೆ ತುಸು ಗರಂ ಆಗಿದ್ದಾರೆ. ಅದರಲ್ಲೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಗಾನವಿ ಅಂತೂ ಬಾಯಿಗೆ ಬಿಡುವಿಲ್ಲದೆ ಮಾತನಾಡಿದ್ದು, ತಾಳ್ಮೆಯೇ ಇಲ್ಲದ ರೀತಿ ವರ್ತಿಸಿದ್ದು, ಸುದೀಪ್ ಅವರಿಗೆ ತೀವ್ರ ಬೇಸರ ತರಿಸಿದ್ದು, ಅವರನ್ನು ಪ್ರಮುಖವಾಗಿ ಇರಿಸಿಕೊಂಡು ಇಡೀ ಮನೆಯವರನ್ನೇ ಮನೆ ಬಿಟ್ಟು ಹೋಗಿ ಎಂದರು.

ಸುದೀಪ್ ಅವರು ನಾಮಿನೇಷನ್​ ಪ್ರಕ್ರಿಯೆ ಕುರಿತು ಮಾತನಾಡುತ್ತಿದ್ದರು. ಆ ವೇಳೆ ಗಾನವಿ ಅವರನ್ನುದ್ದೇಶಿಸಿ, ‘ತಾಂಡವ್ ಇನ್ನೂ ಮಾತನಾಡಲು ಶುರು ಸಹ ಮಾಡಿರುವುದಿಲ್ಲ ಆಗಲೇ ನೀವು ಅವರಿಗೆ ಪ್ರತ್ಯುತ್ತರ ಕೊಡಲು ರೆಡಿ ಆಗಿಬಿಟ್ಟಿರುತ್ತೀರ. ನಿಮಗೆ ತಾಳ್ಮೆ ಇಲ್ಲ ಎಂದಾದರೆ ದಯವಿಟ್ಟು ಹೊರಗೆ ಹೋಗಿಬಿಡಿ. ನೀವ್ಯಾರೂ ಇಲ್ಲದೇ ಇದ್ದರೂ ಪರವಾಗಿಲ್ಲ, ಪ್ರತಿ ವಾರವೂ ನಾನು ಈ ವೇದಿಕೆಗೆ ಬರುತ್ತೀನಿ, ಹಾಡು ಹಾಡಿಯೋ, ಡ್ಯಾನ್ಸ್ ಮಾಡಿಯೋ ಜನರನ್ನು ರಂಜಿಸುತ್ತೇನೆ. ಶೋ ಕಂಪ್ಲೀಟ್ ಮಾಡುತ್ತೀನಿ’ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಸುದೀಪ್ ಅವರು ಮನೆಯ ಎಲ್ಲ ಸದಸ್ಯರಿಗೂ ಹೇಳಿದರಾದರೂ ಅವರ ಮಾತಿನ ಗುರಿ ಇದ್ದಿದ್ದು ಗಾನವಿ ಹಾಗೂ ಇನ್ನೂ ಕೆಲವು ವಿತಂಡ ವಾದಿಗಳಿಗೆ ಮಾತ್ರವೇ ಆಗಿತ್ತು. ಸುದೀಪ್ ಅವರು ಸ್ಪರ್ಧಿಗಳನ್ನೆಲ್ಲ ಮನೆಗೆ ಹೋಗಿ ಎಂದು ಹೇಳುವ ಕೆಲ ಸಮಯದ ಮುಂಚೆಯೂ ಸಹ ಖುದ್ದು ಅವರೇ ಬೇಸರದಿಂದ ವೇದಿಕೆಯಿಂದ ಹೊರಗೆ ನಡೆದಿದ್ದರು. ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಕಟಕಟೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದರು. ಗಾನವಿ ಕಟಕಟೆಗೆ ಬಂದಾಗ ಸುದೀಪ್ ಅವರಿಗೂ ಸಹ ಮಾತನಾಡಲು ಅವಕಾಶ ಕೊಡದೆ ಕಾವ್ಯಾ ಜೊತೆ ಅಲ್ಲೇ ಜಗಳಕ್ಕೆ ನಿಂತರು. ಇದರಿಂದ ಬೇಸರಗೊಂಡ ಸುದೀಪ್, ‘ನೀವು ಮಾತನಾಡಿಕೊಳ್ಳಿ ನಾನು ಹೊರಗೆ ಹೋಗುತ್ತೇನೆ’ ಎಂದು ಹೇಳಿದ್ದೆ ವೇದಿಕೆಯಿಂದ ನಡೆದು ಬಿಟ್ಟರು. ಬಳಿಕ ಸುದೀಪ್ ಮರಳಿ ಬಂದಾಗ ಎಲ್ಲರೂ ಸುದೀಪ್ ಅವರ ಬಳಿ ಕ್ಷಮೆ ಕೇಳಿದರು.

ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಗಾನವಿ, ಮಂಜ, ಲಿಖಿತ್ ಅವರುಗಳಿಗೆ ವಿಶೇಷವಾಗಿ ಕ್ಲಾಸ್ ತೆಗೆದುಕೊಂಡರು. ಅವರ ಜೊತೆಗೆ ಇನ್ನೂ ಕೆಲವು ಸ್ಪರ್ಧಿಗಳಿಗೆ ಎಚ್ಚರಿಕೆಯನ್ನೂ ಸಹ ನೀಡಿದರು. ಗಾನವಿ ಅವರಂತೂ ನಾಮಿನೇಷನ್​ ದಿನ ತೋರಿದ ತಮ್ಮ ವಿತಂಡ ವಾದದ ವರ್ತನೆಯನ್ನು ಸುದೀಪ್ ಎದುರು ಸಹ ತೋರಿದರು. ಸುದೀಪ್ ಅವರಿಂದ ಟೀಕೆಗೆ ಗುರಿ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ