AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ರೋಹಿತ್ ಶರ್ಮಾ..!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 92 ರನ್ ಗಳಿಸಿ, ಆರಂಭಿಕ ಆಟಗಾರನಾಗಿ 10,000 ಏಕದಿನ ರನ್‌ಗಳನ್ನು ಪೂರೈಸಿದರು. ಈ ಸಾಧನೆಯನ್ನು ವೇಗವಾಗಿ ಮಾಡಿದ ವಿಶ್ವದ ನಾಲ್ಕನೇ ಆಟಗಾರ ಎನಿಸಿದರು. ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದರು. ಅಲ್ಲದೆ, ವಿಂಡೀಸ್ ವಿರುದ್ಧ 100 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿ ವಿಶ್ವ ದಾಖಲೆ ಬರೆದರು.

ಪೃಥ್ವಿಶಂಕರ
|

Updated on: Oct 03, 2026 | 7:40 PM

Share
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 92 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ಕೇವಲ 8 ರನ್​ಗಳಿಂದ ತಮ್ಮ ಶತಕದಿಂದ ವಂಚಿತರಾದರು. ಆದಾಗ್ಯೂ ಈ ಇನ್ನಿಂಗ್ಸ್ ಮೂಲಕ ರೋಹಿತ್, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನಾಗಿ 10,000 ರನ್‌ಗಳನ್ನು ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ 2 ರನ್ ಗಳಿಸುವ ಮೂಲಕ ಅವರು ಈ ಮೈಲಿಗಲ್ಲು ದಾಟಿದರು(PC-PTI).

1 / 5
ಈ ಮೂಲಕ ರೋಹಿತ್ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ 10,000 ರನ್‌ಗಳನ್ನು ತಲುಪಿದ ವೇಗದ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆಯನ್ನು ರೋಹಿತ್ ನಿರ್ಮಿಸಿದ್ದಾರೆ(PC-PTI).

2 / 5
ಇದರ ಜೊತೆಗೆ ರೋಹಿತ್, ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್ ಶರ್ಮಾ ತಮ್ಮ 204 ನೇ ಏಕದಿನ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರನಾಗಿ 10,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮೊದಲು, ಸಚಿನ್ ತೆಂಡೂಲ್ಕರ್ 214 ಇನ್ನಿಂಗ್ಸ್‌ಗಳಲ್ಲಿ ಆರಂಭಿಕ ಆಟಗಾರನಾಗಿ 10,000 ಏಕದಿನ ರನ್‌ಗಳನ್ನು ತಲುಪುವ ಮೂಲಕ ಈ ದಾಖಲೆಯನ್ನು ಹೊಂದಿದ್ದರು(PC-PTI).

3 / 5
ಹಾಗೆಯೇ ರೋಹಿತ್ ತಮ್ಮ ಇನ್ನಿಂಗ್ಸ್‌ನ ಮೂರನೇ ಸಿಕ್ಸ್‌ನೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 100 ಸಿಕ್ಸ್‌ಗಳನ್ನು ತಲುಪಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ವಿಭಿನ್ನ ದೇಶಗಳ ವಿರುದ್ಧ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸ್‌ಗಳನ್ನು ಹೊಡೆದ ಮೊದಲ ಮತ್ತು ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾದರು(PC-PTI).

4 / 5
ಈ ಪಂದ್ಯಕ್ಕೂ ಮುನ್ನ, ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳ ಶತಕವನ್ನು ತಲುಪಲು ಮೂರು ಸಿಕ್ಸರ್‌ಗಳ ಅಗತ್ಯವಿತ್ತು. ಇನ್ನಿಂಗ್ಸ್‌ನ 21 ನೇ ಓವರ್‌ನ ಮೊದಲ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಈ ಮೈಲಿಗಲ್ಲನ್ನು ತಲುಪಿದರು. ಈ 100 ಸಿಕ್ಸರ್‌ಗಳಲ್ಲಿ ರೋಹಿತ್ 47 ಸಿಕ್ಸರ್‌ಗಳನ್ನು ಏಕದಿನ ಪಂದ್ಯಗಳಲ್ಲಿ, ಟೆಸ್ಟ್ ವೃತ್ತಿಜೀವನದಲ್ಲಿ 14 ಮತ್ತು ಟಿ20ಯಲ್ಲಿ 39 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us