‘ವಾರ್ 2’ vs ‘ಕೂಲಿ’; ಎರಡು ಬಿಗ್ ಬಜೆಟ್ ಚಿತ್ರಗಳಲ್ಲಿ ಮೊದಲ ದಿನ ಗೆದ್ದವರು ಯಾರು?
ಆಗಸ್ಟ್ 14ರಂದು ಬಿಡುಗಡೆಯಾದ ‘ವಾರ್ 2’ ಮತ್ತು ‘ಕೂಲಿ’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸ್ಪರ್ಧೆ ನೀಡಿವೆ. ಮೊದಲ ದಿನದ ಗಳಿಕೆಯಲ್ಲಿ ‘ಕೂಲಿ’ ಚಿತ್ರವು 65 ಕೋಟಿ ರೂಪಾಯಿಗಳನ್ನು ಗಳಿಸಿ ‘ವಾರ್ 2’ ಚಿತ್ರದ 52 ಕೋಟಿ ರೂಪಾಯಿಗಳ ಗಳಿಸಿದೆ. ವಿಮರ್ಶೆಗಳಲ್ಲಿ ‘ವಾರ್ 2’ ಚಿತ್ರವನ್ನು ‘ಕೂಲಿ’ ಹಿಂದಿಕ್ಕಿದೆ.

ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ನಟನೆಯ ‘ವಾರ್ 2’ ಮತ್ತು ರಜನಿಕಾಂತ್, ಆಮಿರ್ ಖಾನ್, ಉಪೇಂದ್ರ ಮೊದಲಾದವರು ನಟಿಸಿರೋ ‘ಕೂಲಿ’ ಚಿತ್ರ (Coolie Movie) ಆಗಸ್ಟ್ 14ರಂದು ರಿಲೀಸ್ ಆಗಿದೆ. ಎರಡು ಬಿಗ್ ಬಜೆಟ್ ಚಿತ್ರಗಳು ಒಂದೇ ದಿನ ಬಂದಿದ್ದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿತ್ತು. ಹಾಗಾದರೆ ಈ ಎರಡು ಸಿನಿಮಾಗಳಲ್ಲಿ ಗೆದ್ದಿದ್ದು ಯಾರು? ಯಾರ ಅಬ್ಬರಕ್ಕೆ ಯಾರು ಮಂಕಾದರು ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.
‘ವಾರ್ 2’ ಹಾಗೂ ‘ಕೂಲಿ’ ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಕಂಡಿದೆ. ಇನ್ನು ಎರಡೂ ಸಿನಿಮಾಗಳಲ್ಲಿ ಬಹುತಾರಾಗಣ ಇದೆ. ಎರಡೂ ಚಿತ್ರಗಳು ಬಿಗ್ ಬಜೆಟ್ನವು. ಈ ಕಾರಣದಿಂದಲೇ ಈ ಎರಡೂ ಚಿತ್ರಗಳು ಗಮನ ಸೆಳೆದಿದ್ದವು. ಈಗ ಎರಡೂ ಸಿನಿಮಾಗಳ ಗಳಿಕೆ ಲೆಕ್ಕ ಸಿಕ್ಕಿದೆ. ರೇಟಿಂಗ್ ಹಾಗೂ ಗಳಿಕೆ ಎರಡರಲ್ಲೂ ಸಿನಿಮಾಗಳ ಮಧ್ಯೆ ಸ್ಪರ್ಧೆ ಮೂಡಿದೆ. ‘ಕೂಲಿ’ ಚಿತ್ರ ಗಳಿಕೆಯಲ್ಲಿ ‘ವಾರ್ 2’ ಚಿತ್ರವನ್ನು ಹಿಂದಿಕ್ಕಿದೆ. ಅದೇ ರೀತಿಯಲ್ಲಿ, ವಿಮರ್ಶೆ ವಿಚಾರದಲ್ಲಿ ‘ವಾರ್ 2’ ಚಿತ್ರಕ್ಕಿಂತ ‘ಕೂಲಿ’ ಮೇಲುಗೈ ಸಾಧಿಸಿದೆ.
‘ವಾರ್ 2’ ನೋಡಿದ ಬಹುತೇಕರು ನೆಗೆಟಿವ್ ವಿಮರ್ಶೆ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಆ್ಯಕ್ಷನ್ ಬಿಟ್ಟು ಬೇರೆ ಏನೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಿನಿಮಾದಲ್ಲಿ ಒಳ್ಳೆಯ ಕಥೆ ನೀಡುವಲ್ಲಿ ನಿರ್ದೇಶಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇನ್ನು, ‘ಕೂಲಿ’ ಸಿನಿಮಾ ವಿಚಾರದಲ್ಲೂ ಪರಿಸ್ಥಿತಿ ಬೇರೆ ರೀತಿ ಏನೂ ಇಲ್ಲ. ಆದಾಗ್ಯೂ, ಕೆಲವು ಟ್ವಿಸ್ಟ್ಗಳು, ರಜನಿಕಾಂತ್ ನಟನೆ, ಉಪೇಂದ್ರ ಹಾಗೂ ರಚಿತಾ ಪರ್ಫಾರ್ಮೆನ್ಸ್ ಸಿನಿಮಾದ ಹೈಲೈಟ್.
ಇದನ್ನೂ ಓದಿ: ರಜನಿಕಾಂತ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್; ‘ಕೂಲಿ’ ಮೊದಲ ದಿನದ ಗಳಿಕೆ ಎಷ್ಟು?
‘ವಾರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ 52 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಕೂಲಿ’ ಸಿನಿಮಾದ ಕಲೆಕ್ಷನ್ 65 ಕೋಟಿ ರೂಪಾಯಿ ಇದೆ. ಇದು ಮೊದಲ ದಿನದ ಲೆಕ್ಕಾಚಾರ ಮಾತ್ರ. ಮುಂದಿನ ದಿನಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








