ರಜನಿಕಾಂತ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್; ‘ಕೂಲಿ’ ಮೊದಲ ದಿನದ ಗಳಿಕೆ ಎಷ್ಟು?
ರಜನಿಕಾಂತ್, ಆಮಿರ್ ಖಾನ್, ಉಪೇಂದ್ರ ಮತ್ತು ರಚಿತಾ ರಾಮ್ ಮೊದಲಾದವರು ‘ಕೂಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಆಗಸ್ಟ್ 14ರಂದು ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದ ಗಳಿಕೆ ಮಾಡಿದೆ. ಮೊದಲ ದಿನವೇ ಚಿತ್ರ ಕೋಟಿ ಕೋಟಿ ಬಾಚಿಕೊಂಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಉತ್ಸಾಹದಿಂದ ಜನರು ಚಿತ್ರಮಂದಿರಗಳಿಗೆ ಧಾವಿಸಿದ್ದಾರೆ.

ರಜನಿಕಾಂತ್, ಆಮಿರ್ ಖಾನ್, ಉಪೇಂದ್ರ, ರಚಿತಾ ರಾಮ್ ಸೇರಿದಂತೆ ಅನೇಕರು ನಟಿಸಿರೋ ‘ಕೂಲಿ’ ಸಿನಿಮಾ (Coolie Movie) ಆಗಸ್ಟ್ 14ರಂದು ರಿಲೀಸ್ ಆಗಿದೆ. ಹಲವು ಕಡೆಗಳಲ್ಲಿ ಸಿನಿಮಾ ಅಬ್ಬರದ ಪ್ರದರ್ಶನ ಕಂಡಿದೆ. ಮೊದಲ ದಿನ ಫ್ಯಾನ್ಸ್ ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ದುಬಾರಿ ಟಿಕೆಟ್ ದರ ಕೂಡ ಸಿನಿಮಾದ ಗಳಿಕೆ ಹೆಚ್ಚಿಸಲು ಸಹಾಯ ಮಾಡಿದೆ. ಈ ಸಿನಿಮಾದ ಮೊದಲ ದಿನ ಕಲೆಕ್ಷನ್ ಎಷ್ಟು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ‘ಕೂಲಿ’ ಕಲೆಕ್ಷನ್ ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ.
‘ಕೂಲಿ’ ಸಿನಿಮಾಗೆ ಸದ್ಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಸಿನಿಮಾ ರಿಲೀಸ್ಗೂ ಮೊದಲು ಚಿತ್ರಕ್ಕೆ ಇದ್ದ ಹೈಪ್ ನೋಡಿ ಅನೇಕರು ಥಿಯೇಟರ್ನತ್ತ ನುಗ್ಗಿದ್ದಾರೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ‘ಕೂಲಿ’ ಚಿತ್ರದ ಕಲೆಕ್ಷನ್ ಮೊದಲ ದಿನ 65 ಕೋಟಿ ರೂಪಾಯಿ. ಇದು ದೇಶಿಯ ಬಾಕ್ಸ್ ಆಫೀಸ್ ಗಳಿಕೆ ಮಾತ್ರ. ವಿದೇಶದ ಕಲೆಕ್ಷನ್ ಸೇರಿದರೆ 100 ಕೋಟಿ ರೂಪಾಯಿ ಆಗುವ ನಿರೀಕ್ಷೆ ಇದೆ.
‘ಕೂಲಿ’ ಸಿನಿಮಾ ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡಿದ್ದು ಅನೇಕರಿಗೆ ಅಚ್ಚರಿ ತಂದಿಲ್ಲ. ನಿಜ ಹೇಳಬೇಕು ಎಂದರೆ ಅನೇಕರು ಇನ್ನೂ ಹೆಚ್ಚಿನ ಗಳಿಕೆಯ ನಿರೀಕ್ಷೆಯಲ್ಲಿ ಇದ್ದರು. ಕೆಲವರಿಗೆ ಸಿನಿಮಾ ಮತ್ತಷ್ಟು ಗಳಿಕೆ ಮಾಡಲಿದೆ ಎಂಬ ನಿರೀಕ್ಷೆ ಇತ್ತು. ಅವರಿಗೆ ಬೇಸರ ತಂದಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಗಳಿಕೆ ಕೊಂಚ ಇಳಿಕೆ ಕಂಡಿದೆ.
ಇದನ್ನೂ ಓದಿ: ‘ಕೂಲಿ’ ಸಿನಿಮಾನಲ್ಲಿ ಕಮಾಲ್ ಮಾಡಿರುವ ರಚಿತಾ ರಾಮ್
‘ಕೂಲಿ’ ಸಿನಿಮಾದಲ್ಲಿ ಆಮಿರ್ ಖಾನ್, ಸೌಬಿನ್ ಶೋಹಿರ್, ಉಪೇಂದ್ರ, ರಚಿತಾ ರಾಮ್ ಹೀಗೆ ಮೊದಲಾದವರು ಇದ್ದಾರೆ. ಇದೆಲ್ಲವೂ ಸಿನಿಮಾಗೆ ಸಹಕಾರಿ ಆಗಿದೆ. ಲೋಕೇಶ್ ಕನಗರಾಜ್ ನಿರ್ದೇಶನ ಎಂಬ ಕಾರಣಕ್ಕೂ ಸಿನಿಮಾಗೆ ಹೈಪ್ ಸಿಕ್ಕಿತ್ತು. ಬುಕ್ ಮೈ ಶೋನಲ್ಲಿ ಸಿನಿಮಾಗೆ 8ರ ಒಳಗೆ ರೇಟಿಂಗ್ ಸಿಕ್ಕಿದೆ. ಇದು ಸಿನಿಮಾ ಅಷ್ಟು ಉತ್ತಮವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಆದರೆ, ಪಕ್ಕಾ ರಜನಿ ಅಭಿಮಾನಿಗಳು ಸಿನಿಮಾನ ಹೋಗಿ ವೀಕ್ಷಣೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








