AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಬಿಎಫ್​​ಸಿ ಹೊಸ ನಿಯಮ: ನಿರ್ಮಾಪಕರಿಗೆ ತಂದಿದೆ ತಲೆನೋವು

CBFC new rule: ಇದೀಗ ಸಿಬಿಎಫ್​​ಸಿ ಹೊರ ನಿಯಮವೊಂದನ್ನು ಜಾರಿ ಮಾಡಿದ್ದು, ಈ ನಿಯಮ ನಿರ್ಮಾಪಕರಿಗೆ ಇನ್ನಷ್ಟು ತಲೆನೋವು ತರಲಿದೆ. ಆದರೆ ಇದೊಂದು ಉಪಯುಕ್ತ ನಿಯಮವಾಗಿದ್ದು, ನಿರ್ಮಾಪಕರುಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಬೇಕಿದೆ. ಸಿಬಿಎಫ್​​ಸಿಯ ಹೊಸ ನಿಯಮ ಕೆಲವರಿಗೆ ಉತ್ತಮ ಎನಿಸಿದರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಿಬಿಎಫ್​​ಸಿ ಹೊಸ ನಿಯಮ: ನಿರ್ಮಾಪಕರಿಗೆ ತಂದಿದೆ ತಲೆನೋವು
Cbfc
ಮಂಜುನಾಥ ಸಿ.
|

Updated on: Mar 12, 2026 | 6:33 PM

Share

ಸಿಬಿಎಫ್​​ಸಿ (CBFC) ಯಿಂದ ಇತ್ತೀಚೆಗೆ ಕೆಲವು ನಿರ್ಮಾಪಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ನಿರ್ಮಾಪಕರು ಇತ್ತೀಚೆಗಿನ ದಿನಗಳಲ್ಲಿ ಸಿಬಿಎಫ್​​ಸಿ ಬಗ್ಗೆ ಅಸಮಾಧಾನ ಸಹ ಹೊರಹಾಕಿದ್ದಾರೆ. ಕೆಲವರು ಕೇಸುಗಳನ್ನು ಸಹ ದಾಖಲಿಸಿದ್ದಿದೆ. ಇದೀಗ ಸಿಬಿಎಫ್​​ಸಿ ಹೊರ ನಿಯಮವೊಂದನ್ನು ಜಾರಿ ಮಾಡಿದ್ದು, ಈ ನಿಯಮ ನಿರ್ಮಾಪಕರಿಗೆ ಇನ್ನಷ್ಟು ತಲೆನೋವು ತರಲಿದೆ. ಆದರೆ ಇದೊಂದು ಉಪಯುಕ್ತ ನಿಯಮವಾಗಿದ್ದು, ನಿರ್ಮಾಪಕರುಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಬೇಕಿದೆ.

ಸಿಬಿಎಫ್​​ಸಿಯ ನಿಯಮದ ಪ್ರಕಾರ, ಈ ಭಾನುವಾರದ (ಮಾರ್ಚ್ 15) ಪ್ರಮಾಣ ಪತ್ರಕ್ಕೆ ಸಲ್ಲಿಕೆ ಆಗುವ ಎಲ್ಲ ಸಿನಿಮಾಗಳು ಕಡ್ಡಾಯವಾಗಿ ಕ್ಯಾಪ್ಷನ್ಸ್ (ಕ್ಲೋಸ್ಡ್ ಕ್ಯಾಪ್ಷನ್ಸ್ ಅಥವಾ ಓಪನ್ ಕ್ಯಾಪ್ಷನ್ಸ್) ಅಥವಾ ಸಬ್​​ಟೈಟಲ್ಸ್ ಹಾಗೂ ಆಡಿಯೋ ಡಿಸ್ಕ್ರಿಪ್ಷನ್ ಅನ್ನು ಹೊಂದಿರಲೇ ಬೇಕಾಗಿದೆ. ಒಂದೊಮ್ಮೆ ಈ ಕ್ಯಾಪ್ಷನ್​​ಗಳು ಇಲ್ಲದೇ ಇದ್ದಲ್ಲಿ ಸಿನಿಮಾವನ್ನು ಪ್ರಮಾಣ ಪತ್ರಕ್ಕೆ ಪರಿಗಣಿಸಲಾಗುವುದಿಲ್ಲ ಎಂದಿದೆ.

ಸಿನಿಮಾಗಳಿಗೆ ಸಿಸಿ, ಓಸಿ (ಸಬ್​​ಟೈಟಲ್ಸ್) ಮತ್ತು ಆಡಿಯೋ ಡಿಸ್ಕ್ರಿಪ್ಷನ್​​ಗಳು ಹಾಕುವುದು ನಿರ್ಮಾಪಕರಿಗೆ ಹೆಚ್ಚಿನ ಬಾಬತ್ತಾಗಲಿದೆ. ಭಾರಿ ದೊಡ್ಡ ಮೊತ್ತ ಇದಕ್ಕೆ ಖರ್ಚಾಗದಿದ್ದರೂ ಸಹ ಇದು ಹೆಚ್ಚುವರಿ ಖರ್ಚಂತೂ ಖಂಡಿತ ಎನಿಸಿಕೊಳ್ಳಲಿದೆ. ಅಲ್ಲದೆ, ಆಡಿಯೋ ಡಿಸ್ಕ್ರಿಪ್ಷನ್ ಸಹ ಸೇರಿಸಬೇಕಾಗಿರುವದರಿಂದ ಡಬ್ಬಿಂಗ್​​ ಅವಧಿ ಹೆಚ್ಚಾಗಲಿದೆ. ಪ್ರತ್ಯೇಕ ಧ್ವನಿ ಕಲಾವಿದರ ನೆರವು ಪಡೆಯಬೇಕಾಗುತ್ತದೆ. ಇದೆಲ್ಲವೂ ಖರ್ಚಿನ ವಿಷಯವೇ ಆಗಿದೆ.

ಇದನ್ನೂ ಓದಿ:‘ಜನ ನಾಯಗನ್’ ವಿವಾದ: ಸಿಬಿಎಫ್​ಸಿ ಮಾಡಿದ್ದೇನು? ವಿವರಿಸಿದ ನಿರ್ಮಾಪಕ

ಒಟಿಟಿ ಜಮಾನಾನಲ್ಲಿ ಈ ಕ್ಯಾಪ್ಷನ್​​ಗಳು ಬಹುತೇಕ ಎಲ್ಲ ಸಿನಿಮಾಗಳು ಕಡ್ಡಾಯವಾಗಿ ಅಳವಡಿಸಿಕೊಳ್ಳುತ್ತವೆ. ಕೆಲವು ಸಿನಿಮಾಗಳಿಗೆ ಒಟಿಟಿಗಳೇ ಕ್ಯಾಪ್ಷನ್ ನೀಡುತ್ತವೆ. ಆದರೆ ಭಾರತೀಯ ಸಿನಿಮಾಗಳು ಆಡಿಯೋ ಡಿಸ್ಕ್ರಿಪ್ಷನ್​​ಗಳು ಸೇರಿಸುವುದು ಕಡಿಮೆ. ಆದರೆ ಇನ್ನು ಮುಂದೆ ಇದೂ ಸಹ ಕಡ್ಡಾಯ ಆಗಲಿದೆ. ಅಲ್ಲದೆ, ಸಬ್​​ಟೈಟಲ್​​ಗಳ ಗಾತ್ರದ ಬಗ್ಗೆಯೂ ಸಿಬಿಎಫ್​​ಸಿ ನಿಯಮ ಮಾಡಿದ್ದು, ಇದು ಕೆಲವು ನಿರ್ದೇಶಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ವಿಶೇಷ ಗೌರವ
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ವಿಶೇಷ ಗೌರವ
ಫ್ರಾನ್ಸ್‌ನ ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ
ಫ್ರಾನ್ಸ್‌ನ ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ
ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ
ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ
ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ
ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ
ಧರ್ಮಸ್ಥಳ ಬುರುಡೆ ಪ್ರಕರಣದ SIT ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಧರ್ಮಸ್ಥಳ ಬುರುಡೆ ಪ್ರಕರಣದ SIT ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ:ಕಾಂಗ್ರೆಸ್ ಶಾಸಕರು ರೆಸಾರ್ಟ್​​ಗೆ
ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ:ಕಾಂಗ್ರೆಸ್ ಶಾಸಕರು ರೆಸಾರ್ಟ್​​ಗೆ
ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ
66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿದ ಸಚಿವ ಖರ್ಗೆ
66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿದ ಸಚಿವ ಖರ್ಗೆ
ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ
ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ