AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ ವಿಡಿಯೋದಲ್ಲಿ ಪೂಜಾ ಹೆಗ್ಡೆ ಗುರುತಿಸಲು ಸಾಧ್ಯವೇ ಇಲ್ಲ; ಇಲ್ಲಿದೆ ಝಲಕ್

ನಟಿ ಪೂಜಾ ಹೆಗ್ಡೆ ಅವರ 2009ರ ಮಿಸ್ ಇಂಡಿಯಾ ದಿನಗಳ ಹಳೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ತಮ್ಮ 18ನೇ ವಯಸ್ಸಿನಲ್ಲಿ ಸ್ಪರ್ಧಿಯಾಗಿದ್ದ ಪೂಜಾ ಅವರ ಅಂದಿನ ರಾಂಪ್ ವಾಕ್ ಹಾಗೂ ಲುಕ್ ಕಂಡು ನೆಟ್ಟಿಗರು ಸದ್ಯದ ಅವರ ಗ್ಲಾಮರಸ್ ರೂಪಕ್ಕೆ ಹೋಲಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಹಳೆಯ ವಿಡಿಯೋದಲ್ಲಿ ಪೂಜಾ ಹೆಗ್ಡೆ ಗುರುತಿಸಲು ಸಾಧ್ಯವೇ ಇಲ್ಲ; ಇಲ್ಲಿದೆ ಝಲಕ್
ಪೂಜಾ ಹೆಗ್ಡೆ
ರಾಜೇಶ್ ದುಗ್ಗುಮನೆ
|

Updated on:Aug 03, 2026 | 2:51 PM

Share

ಮುಖ್ಯಾಂಶಗಳು

  • 18ರ ಹರೆಯದ ಪೂಜಾ ಹೆಗ್ಡೆ ಮಿಸ್ ಇಂಡಿಯಾ ರೇಸ್‌ನಲ್ಲಿ ಹೇಗಿದ್ರು ನೋಡಿ
  • ರಾಂಪ್ ವಾಕ್ ವೇಳೆ ಸಣ್ಣದಾಗಿ ಎಡವಿದ್ದ ರಹಸ್ಯ ಬಿಚ್ಚಿಟ್ಟಿದ್ದ ಸುಂದರಿ
  • ಮಾಡೆಲಿಂಗ್‌ನಿಂದ ಪ್ಯಾನ್-ಇಂಡಿಯಾ ಸ್ಟಾರ್ ನಟಿಯಾಗಿ ಬೆಳೆದ ಪೂಜಾ ಹೆಗ್ಡೆ

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಪೂಜಾ ಹೆಗ್ಡೆ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಅವರು 2009ರ ‘ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದಿನಗಳ ವಿಡಿಯೋ ಆಗಿದೆ. ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ಪೂಜಾ ಹೆಗ್ಡೆ ಅವರು (Pooja Hegde) ಮಾಡೆಲಿಂಗ್ ಲೋಕದಲ್ಲಿ ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ಈ ವಿಡಿಯದಲ್ಲಿ ನೋಡಬಹುದಾಗಿದೆ. ಅಂದಿನ ಅವರ ಲುಕ್ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ವೀಡಿಯೊದಲ್ಲಿ ತಮ್ಮನ್ನು ತಾವು ಮುಂಬೈನ 18 ವರ್ಷದ ಯುವತಿ ಎಂದು ಪರಿಚಯಿಸಿಕೊಳ್ಳುವ ಪೂಜಾ, ‘ಜೀವನದಲ್ಲಿ ಗೆಲ್ಲಬೇಕಾದರೆ ಕಠಿಣ ಪರಿಶ್ರಮ, ಮಾಡುವ ಕೆಲಸದ ಮೇಲೆ ತೀವ್ರ ಆಸಕ್ತಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು’ ಎಂದು ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ. ಇದರೊಂದಿಗೆ ತಾವು ಮೊದಲ ಬಾರಿಗೆ ರಾಂಪ್ ವಾಕ್ ಮಾಡಿದಾಗ ಸಣ್ಣದಾಗಿ ಎಡವಿದ್ದ ರಹಸ್ಯವನ್ನೂ ಅವರು ಹಂಚಿಕೊಂಡಿದ್ದಾರೆ.

ಬಿಕಿನಿ ರೌಂಡ್ ಹಾಗೂ ಸಾಂಪ್ರದಾಯಿಕ ಉಡುಪುಗಳಲ್ಲಿ ರಾಂಪ್ ಮೇಲೆ ಹೆಜ್ಜೆ ಹಾಕಿರುವ ಪೂಜಾ ಹೆಗ್ಡೆ ಅವರ ಅಂದಿನ ರೂಪಕ್ಕೂ, ಇಂದಿನ ಗ್ಲಾಮರಸ್ ಲುಕ್‌ಗೂ ತುಂಬಾನೇ ವ್ಯತ್ಯಾಸವಿದ್ದು, ಬದಲಾವಣೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಕಡಿಮೆ ಸ್ಕ್ರೀನ್ ಟೈಮ್ ಇದ್ದರೂ ‘ಜನ ನಾಯಗನ್’ ಒಪ್ಪಿದ್ದೇಕೆ ಪೂಜಾ ಹೆಗ್ಡೆ? ಅಸಲಿ ಕಾರಣ ಇಲ್ಲಿದೆ

ಪೂಜಾ ಹೆಗ್ಡೆ ಅವರ ಸಿನಿಮಾ ಜರ್ನಿ

ಮಾಡಡೆಲಿಂಗ್ ಲೋಕದಿಂದ ಸಿನಿಮಾರಂಗಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಅವರು 2012ರ ತಮಿಳಿನ ‘ಮುಗಮೂಡಿ’ ಚಿತ್ರದ ಮೂಲಕ ನಟನೆ ಆರಂಭಿಸಿದರು. ಆ ಬಳಿಕ ತೆಲುಗು ಚಿತ್ರರಂಗದಲ್ಲಿ ಭಾರಿ ಯಶಸ್ಸು ಕಂಡ ಅವರು ‘ಅರವಿಂದ ಸಮೇದ’, ‘ಮಹರ್ಷಿ’, ಮತ್ತು ‘ಅಲಾ ವೈಕುಂಠಪುರಮುಲೋ’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದರು. ಹೃತಿಕ್ ರೋಷನ್ ಅಭಿನಯದ ‘ಮೊಹೆಂಜೋದಾರೋ’ ಚಿತ್ರದ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟ ಪೂಜಾ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ‘ರಾಧೆ ಶ್ಯಾಮ್’ ಹಾಗೂ ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರಗಳಲ್ಲೂ ಕಾಣಿಸಿಕೊಂಡು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ಅವರ ನಟನೆಯ ‘ಜನ ನಾಯಗನ್’ ಇತ್ತೀಚೆಗೆ ತೆರೆಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:47 pm, Mon, 3 August 26

Follow Us
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು