‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ನಟ ಎಂ.ಕೆ. ಮಠ
‘ಲಾಕ್ಡೌನ್ 21 ಡೇಸ್’ ಸಿನಿಮಾದಲ್ಲಿ ಎಂ.ಕೆ. ಮಠ ಅವರು ನಟಿಸಿದ್ದಾರೆ. ಈ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಅವರು ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿಕೊಂಡರು. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
‘ಲಾಕ್ಡೌನ್ 21 ಡೇಸ್’ ಸಿನಿಮಾದಲ್ಲಿ ಎಂ.ಕೆ. ಮಠ ಅವರು ನಟಿಸಿದ್ದಾರೆ. ಈ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಅವರು ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಸ್ಮರಿಸಿಕೊಂಡರು. ‘ನಾನು ಇಷ್ಟು ಉದ್ದ ಗಡ್ಡ ಬಿಟ್ಟಿದ್ದೇನೆ. ಅದಕ್ಕೆ ಒಂದು ಕಾರಣ ಇದೆ. ಅಪ್ಪು ಸರ್ ಸಿನಿಮಾಗೋಸ್ಕರ ನಾನು ಗಡ್ಡ ಬಿಟ್ಟೆ. ಇನ್ನೇನು ಆ ಸಿನಿಮಾ ಮುಗಿದ ಕೂಡಲೇ ಗಡ್ಡ ತೆಗೆಯಬೇಕು ಅಂದುಕೊಂಡಿದ್ದೆ. ಅಷ್ಟರಲ್ಲಿ ಅಪ್ಪು ಸರ್ ಹೊರಟುಹೋದರು. ಇನ್ನು ಗಡ್ಡ ತೆಗೆಯುವುದು ಯಾಕೆ ಅಂತ ನಾನು ಕಂಟಿನ್ಯೂ ಮಾಡಿದೆ. ಇಷ್ಟು ಉದ್ದ ಗಡ್ಡವನ್ನು ನಾನು ಜೀವನಪರ್ಯಂತ ಬಿಡುತ್ತೇನೆ ಅಂತ ಹರಕೆ ಹೊತ್ತುಕೊಂಡಿಲ್ಲ. ಅಪ್ಪು ಸರ್ ನೆನಪಿಗೋಸ್ಕರ ಹಾಗೆಯೇ ಬಿಟ್ಟಿದ್ದೇನೆ. ಯಾವುದಾದರೂ ಪಾತ್ರಕ್ಕೆ ಗಡ್ಡ ತೆಗೆಯಬೇಕು ಎಂದರೆ ಖಂಡಿತಾ ತೆಗೆಯಬಲ್ಲೆ’ ಎಂದು ಎಂ.ಕೆ. ಮಠ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
