AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುನೀತ್ ರಾಜ್​​ಕುಮಾರ್ ಊಟಕ್ಕೆ ಬನ್ನಿ ಅಂದಿದ್ರು’; ಮೈಸೂರಿನ ಭೇಟಿ ನೆನೆದ ರಾವ್ ರಮೇಶ್

ನಟ ಕೋಮಲ್ ಕುಮಾರ್ ಅಭಿನಯದ ‘ತೆನಾಲಿ ಡಿಎ, ಎಲ್‌ಎಲ್‌ಬಿ’ ಚಿತ್ರದಲ್ಲಿ ಬಹುಭಾಷಾ ನಟ ರಾವ್ ರಮೇಶ್ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಅಪರೂಪದ ಭೇಟಿಯನ್ನು ನೆನೆದು ಭಾವುಕರಾಗಿದ್ದಾರೆ. ಮೈಸೂರಿನ ಹೋಟೆಲ್ ಜಿಮ್‌ನಲ್ಲಿ ಅಪ್ಪು ಸರ್ ತಮ್ಮನ್ನು ಗುರುತಿಸಿ, ಮನೆಗೆ ಊಟಕ್ಕೆ ಆಹ್ವಾನಿಸಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

‘ಪುನೀತ್ ರಾಜ್​​ಕುಮಾರ್ ಊಟಕ್ಕೆ ಬನ್ನಿ ಅಂದಿದ್ರು’; ಮೈಸೂರಿನ ಭೇಟಿ ನೆನೆದ ರಾವ್ ರಮೇಶ್
ಪುನೀತ್​-ರಾವ್ ರಮೇಶ್
ರಾಜೇಶ್ ದುಗ್ಗುಮನೆ
|

Updated on: Jul 23, 2026 | 1:14 PM

Share

ಮುಖ್ಯಾಂಶಗಳು

  • ಅಪ್ಪು ಸರಳತೆ ನೆನೆದು ಭಾವುಕರಾದ ರಾವ್ ರಮೇಶ್
  • ತೆನಾಲಿ ಡಿಎ ಎಲ್‌ಎಲ್‌ಬಿ ಚಿತ್ರಕ್ಕೆ ಸ್ವಂತ ಡಬ್ಬಿಂಗ್
  • ‘ಕೆಜಿಎಫ್ 2’ ಚಿತ್ರದಲ್ಲಿ ನಟಿಸಿದ್ದ ಹೀರೋ

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯ ಮೂಲಕ ಗುರುತಿಸಿಕೊಂಡಿರುವ ನಟ ಕೋಮಲ್ ಕುಮಾರ್ ಅಭಿನಯದ ‘ತೆನಾಲಿ ಡಿಎ, ಎಲ್‌ಎಲ್‌ಬಿ’ ಸಿನಿಮಾ ಸದ್ಯ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಬಹುಭಾಷಾ ನಟ ರಾವ್ ರಮೇಶ್ ಅವರು ಚಿತ್ರದ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ಪುನೀತ್ ರಾಜ್​​ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

‘ತೆನಾಲಿ ಡಿಎ, ಎಲ್‌ಎಲ್‌ಬಿ’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ರಾವ್ ರಮೇಶ್ ಅವರೇ ಸ್ವತಃ ಕನ್ನಡದಲ್ಲಿ ಡಬ್ ಮಾಡಲಿದ್ದಾರೆ. ಈ ಮೂಲಕ ಅವರು ಮತ್ತೊಮ್ಮೆ ಕನ್ನಡ ಪ್ರೇಕ್ಷಕರಿಗೆ ತಮ್ಮದೇ ಧ್ವನಿಯಲ್ಲಿ ಹತ್ತಿರವಾಗಲಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರ ವಿಡಿಯೋದಲ್ಲಿ ರಾವ್ ರಮೇಶ್ ಅವರು ಚಿತ್ರದ ಜೊತೆಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸರಳತೆಯನ್ನು ನೆನೆದು ರಾವ್ ರಮೇಶ್ ಭಾವುಕರಾಗಿದ್ದಾರೆ. ‘ಮೈಸೂರಿನಲ್ಲಿ ಕೆಜಿಎಫ್ ಶೂಟಿಂಗ್ ನಡೆಯುತ್ತಿದ್ದಾಗ ನಾನು ಹೋಟೆಲ್ ಜಿಮ್‌ನಲ್ಲಿದ್ದೆ. ಆಗ ಅಲ್ಲಿಗೆ ಅಪ್ಪು ಸರ್ ಬಂದರು. ನಾನು ಅವರನ್ನು ನೋಡಿ ಆಶ್ಚರ್ಯಪಟ್ಟೆ. ನನ್ನನ್ನು ಗುರುತಿಸಿದ ಅವರು, ನೀವೊಬ್ಬ ಅತ್ಯದ್ಭುತ ನಟ ಸರ್ ಎಂದು ಹೊಗಳಿದರು. ಅಷ್ಟೇ ಅಲ್ಲದೆ, ನಮ್ಮ ಮನೆಗೆ ಬನ್ನಿ ಸರ್, ಒಟ್ಟಿಗೆ ಊಟ ಮಾಡೋಣ ಎಂದು ಪ್ರೀತಿಯಿಂದ ಆಹ್ವಾನಿಸಿದ್ದರು. ಆದರೆ ಇಂದು ಅವರು ನಮ್ಮೊಂದಿಗಿಲ್ಲ’ ಎಂದು ರಾವ್ ರಮೇಶ್ ಆ ದಿನದ ಘಟನೆಯನ್ನು ನೆನೆದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್​​ಕುಮಾರ್

ರಾವ್ ರಮೇಶ್ ಅವರು ಮೊದಲ ಬಾರಿ ಕನ್ನಡದಲ್ಲಿ ನಟಿಸಿದ್ದು ನಿಖಿಲ್ ಕುಮಾರಸ್ವಾಮಿ ಅವರ ‘ಜಾಗ್ವಾರ್’ ಚಿತ್ರದಲ್ಲಿ. ಆ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಸಿಬಿಐ ಅಧಿಕಾರಿ ಪಾತ್ರದಲ್ಲಿ ಗಮನ ಸೆಳೆದರು. ವಿಶೇಷವೆಂದರೆ, ಆ ಚಿತ್ರದಲ್ಲೂ ಕೂಡ ರಾವ್ ರಮೇಶ್ ಅವರೇ ತಮ್ಮ ಪಾತ್ರಕ್ಕೆ ಖುದ್ದಾಗಿ ಕನ್ನಡದಲ್ಲಿ ಡಬ್ ಮಾಡಿದ್ದರು. ಅವರ ಗಂಭೀರ ಧ್ವನಿ ಮತ್ತು ಅದ್ಭುತ ಸಂಭಾಷಣೆ ಚತುರತೆ ಕನ್ನಡಿಗರಿಗೆ ಅದ್ಭುತ ಅನುಭವ ನೀಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us