- TV9 Kannada Photo gallery Cricket photos NZ T20 Squad for India t20 Series: Santner to Lead, Rachin Ravindra Out
ಭಾರತ ವಿರುದ್ಧದ ಟಿ20 ಸರಣಿಯಿಂದ ರಚಿನ್ ರವೀಂದ್ರ ಔಟ್..!
ಅಕ್ಟೋಬರ್‌ನಲ್ಲಿ ನಡೆಯುವ ಭಾರತ-ನ್ಯೂಜಿಲೆಂಡ್ ಟಿ20 ಸರಣಿಗೆ 16 ಸದಸ್ಯರ ಕಿವೀಸ್ ತಂಡವನ್ನು ಪ್ರಕಟಿಸಲಾಗಿದೆ. ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸಲಿದ್ದಾರೆ. ಭುಜದ ಗಾಯದಿಂದ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಸರಣಿಯಿಂದ ಹೊರಗುಳಿಯಲಿದ್ದಾರೆ. ಅಕ್ಟೋಬರ್ 22ರಿಂದ ಸರಣಿ ಆರಂಭವಾಗಲಿದ್ದು, 5 ಟಿ20, 5 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳು ನಡೆಯಲಿವೆ. ಸಂಪೂರ್ಣ ವೇಳಾಪಟ್ಟಿ ಮತ್ತು ತಂಡದ ವಿವರ ಇಲ್ಲಿದೆ.
Updated on:Sep 23, 2026 | 3:14 PM

ಅಕ್ಟೋಬರ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದೀಗ ಈ ಸರಣಿಗೆ ಆತಿಥೇಯ 16 ಸದಸ್ಯರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸಲಿದ್ದಾರೆ(PC-PTI).

ಸರಣಿಯ ಮೊದಲ ಪಂದ್ಯ ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯು 11 ದಿನಗಳಲ್ಲಿ ನಾಲ್ಕು ನಗರಗಳಲ್ಲಿ ನಡೆಯಲಿದೆ. ಈ ಟಿ20 ಸರಣಿಯ ಜೊತೆಗೆ ಉಭಯ ತಂಡಗಳ ನಡುವೆ ಐದು ಏಕದಿನ ಪಂದ್ಯಗಳು ಮತ್ತು ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ(PC-PTI).

ಭುಜದ ಗಾಯದಿಂದಾಗಿ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಈ ಸರಣಿಯಿಂದ ಹೊರಗುಳಿಯಲಿದ್ದಾರೆ. ಆದರೆ ನವೆಂಬರ್ 4 ರಿಂದ ಪ್ರಾರಂಭವಾಗುವ ಏಕದಿನ ಸರಣಿಗೆ ಅವರು ಮರಳುವ ನಿರೀಕ್ಷೆಯಿದೆ. ಜಾಹೀರಾತು ಚಿತ್ರೀಕರಣದ ವೇಳೆ ರವೀಂದ್ರ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಟಿ20 ಸರಣಿಯಿಂದ ಹೊರಗಿಡಲಾಗಿದೆ(PC-PTI).

ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಮ್ಯಾಟ್ ಹೆನ್ರಿ, ಗ್ಲೆನ್ ಫಿಲಿಪ್ಸ್, ಜ್ಯಾಕ್ ಫೌಲ್ಕ್ಸ್, ಮೈಕೆಲ್ ಬ್ರೇಸ್‌ವೆಲ್, ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್ (ನಾಯಕ), ಬೆವನ್ ಜೇಕಬ್ಸ್, ಜಾಕೋಬ್ ಡಫಿ, ಡ್ಯಾರಿಲ್ ಮಿಚೆಲ್, ಟಿಮ್ ಸೀಫರ್ಟ್, ಮಾರ್ಕ್ ಚಾಪ್‌ಮನ್, ಕೈಲ್ ಜೇಮಿಸನ್, ಡೆವೊನ್ ಕಾನ್ವೇ, ನಾಥನ್ ಸ್ಮಿತ್ ಮತ್ತು ಲಾಕಿ ಫರ್ಗುಸನ್(PC-PTI).

ಮೊದಲ ಟಿ20 ಪಂದ್ಯ ಅಕ್ಟೋಬರ್ 22 ರಂದು ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದ್ದು, ಎರಡನೇ ಪಂದ್ಯವೂ ಕೂಡ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಅಕ್ಟೋಬರ್ 24 ರಂದು ನಡೆಯಲಿದೆ. ಮೂರನೇ ಟಿ20ಅಕ್ಟೋಬರ್ 27 ರಂದು, ಹೆನ್ರಿ ಕ್ರೀಡಾಂಗಣದಲ್ಲಿ, ನಾಲ್ಕನೇ ಟಿ20ಪಂದ್ಯ ಅಕ್ಟೋಬರ್ 30 ರಂದು ಈಡನ್ ಪಾರ್ಕ್ ಹಾಗೂ ಐದನೇ ಟಿ20ಪಂದ್ಯ ನವೆಂಬರ್ 1 ರಂದು ಸೆಡ್ಡನ್ ಪಾರ್ಕ್ನಲ್ಲಿ ನಡೆಯಲಿದೆ(PC-PTI).
Published On - 3:07 pm, Wed, 23 September 26

TV9 Kannada
Read More



