AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾನ್ಯವಾಗಿಲ್ಲ ‘ಬಿಲ್ಲ ರಂಗ ಭಾಷಾ’, ಅದ್ಭುತ ಲೋಕವನ್ನೇ ಸೃಷ್ಟಿಸಿರುವ ಅನೂಪ್

‘ಬಿಲ್ಲ ರಂಗ ಭಾಷಾ’ ಸಿನಿಮಾ ಘೋಷಣೆಯಾಗಿ ಸಾಕಷ್ಟು ಸಮಯವಾಯ್ತು, ಆದರೆ ಚಿತ್ರೀಕರಣ ನಿಧಾನವಾಗಿ ಸಾಗುತ್ತಿದೆ. ಸಿನಿಮಾದ ಕುರಿತು ಯಾವುದೇ ಅಪ್​​ಡೇಟ್​​ಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ, ಬಲು ಗುಟ್ಟಿನಿಂದ ಚಿತ್ರೀಕರಣ ನಡೆಸಲಾಗುತ್ತಿದೆ. ಆದರೆ ಇತ್ತೀಚೆಗೆ ಆ ಸಿನಿಮಾದ ಬಗ್ಗೆ ಸಣ್ಣ ಆದರೆ ಕುತೂಹಲ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ.

ಸಾಮಾನ್ಯವಾಗಿಲ್ಲ ‘ಬಿಲ್ಲ ರಂಗ ಭಾಷಾ’, ಅದ್ಭುತ ಲೋಕವನ್ನೇ ಸೃಷ್ಟಿಸಿರುವ ಅನೂಪ್
Billa Ranga BashaImage Credit source: Veerakaputra M Srinivasa facebook profile
ಮಂಜುನಾಥ ಸಿ.
|

Updated on: Sep 23, 2026 | 6:27 PM

Share

ಮುಖ್ಯಾಂಶಗಳು

  • ಸುದೀಪ್ ನಟಿಸುತ್ತಿರುವ ‘ಬಿಲ್ಲ ರಂಗ ಭಾಷಾ’ ಸಿನಿಮಾ
  • ‘ಬಿಲ್ಲ ರಂಗ ಭಾಷಾ’ ಸಿನಿಮಾಕ್ಕಾಗಿ ಅದ್ಧೂರಿ ಸೆಟ್
  • ಭರ್ಜರಿಯಾಗಿ ನಿರ್ಮಾಣ ಆಗುತ್ತಿದೆ ಸಿನಿಮಾ

ಸುದೀಪ್ ನಾಯಕನಾಗಿ ನಟಿಸಿರುವ ಸಿನಿಮಾ ಒಂದು ಬಿಡುಗಡೆ ಆಗಿ ವರ್ಷವಾಗುತ್ತಾ ಬಂತು. 2025ರ ಡಿಸೆಂಬರ್​​ನಲ್ಲಿ ಸುದೀಪ್ ನಾಯಕನಾಗಿ ನಟಿಸಿದ್ದ ‘ಮಾರ್ಕ್’ ಸಿನಿಮಾ ರಿಲೀಸ್ ಆಗಿತ್ತು. ಈ ವರ್ಷ ‘ಕೆಡಿ’ ಸಿನಿಮಾನಲ್ಲಿ ಸಣ್ಣ ಅತಿಥಿ ಪಾತ್ರವನ್ನಷ್ಟೆ ಸುದೀಪ್ ಮಾಡಿದ್ದಾರೆ. ಆದರೆ ಸುದೀಪ್ ಅವರು ಒಟ್ಟಿಗೆ ಕೆಲವು ಸಿನಿಮಾಗಳನ್ನು ಘೋಷಣೆ ಮಾಡಿದ್ದು, ಅಭಿಮಾನಿಗಳಂತೂ ಬಲು ಉತ್ಸುಕರಾಗಿದ್ದಾರೆ. ಅದರಲ್ಲೂ ಸುದೀಪ್ ನಟನೆಯ ‘ಬಿಲ್ಲ ರಂಗ ಭಾಷಾ’ ಸಿನಿಮಾಕ್ಕಾಗಿ ಅಂತೂ ಸಿನಿಮಾ ಪ್ರೇಮಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

‘ಬಿಲ್ಲ ರಂಗ ಭಾಷಾ’ ಸಿನಿಮಾ ಘೋಷಣೆಯಾಗಿ ಸಾಕಷ್ಟು ಸಮಯವಾಯ್ತು, ಆದರೆ ಚಿತ್ರೀಕರಣ ನಿಧಾನವಾಗಿ ಸಾಗುತ್ತಿದೆ. ಸಿನಿಮಾದ ಕುರಿತು ಯಾವುದೇ ಅಪ್​​ಡೇಟ್​​ಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ, ಬಲು ಗುಟ್ಟಿನಿಂದ ಚಿತ್ರೀಕರಣ ನಡೆಸಲಾಗುತ್ತಿದೆ. ಆದರೆ ಇತ್ತೀಚೆಗೆ ಆ ಸಿನಿಮಾದ ಬಗ್ಗೆ ಸಣ್ಣ ಆದರೆ ಕುತೂಹಲ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ.

ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಭಾರಿ ಅದ್ಧೂರಿಯಾಗಿ ವಿಷ್ಣುಸೇನಾ ಸಮಿತಿಯ ಪ್ರಮುಖರಾದ ವೀರಕಪುತ್ರ ಶ್ರೀನಿವಾಸ್ ಆಯೋಜನೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ನಂದಿ ಲಿಂಕ್ ಗ್ರೌಂಡ್​​ನಲ್ಲಿ9 ಭಾರಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸುದೀಪ್ ಅವರನ್ನು ಆಹ್ವಾನಿಸಲು ‘ಬಿಲ್ಲ ರಂಗ ಭಾಷಾ’ ಸಿನಿಮಾದ ಸೆಟ್​​ಗೆ ಹೋಗಿದ್ದರು. ಆ ವೇಳೆ ಅವರು ಅಲ್ಲಿ ನೋಡಿದ ಅದ್ಧೂರಿತನವನ್ನು ತಮ್ಮ ಫೇಸ್​​ಬುಕ್​​ನಲ್ಲಿ ದಾಖಲಿಸಿದ್ದಾರೆ.

‘ಬಿಲ್ಲ ರಂಗ ಭಾಷಾ’ ಸಿನಿಮಾಕ್ಕಾಗಿ ಅದ್ಭುತ ಲೋಕವನ್ನೇ ನಿರ್ದೇಶಕ ಅನೂಪ್ ಭಂಡಾರಿ ಸೃಷ್ಟಿಸಿದ್ದಾರಂತೆ. ‘ಅಲ್ಲಿ ಅದ್ಭುತ ಲೋಕವೊಂದು ಸೃಷ್ಟಿಯಾಗಿದೆ. ಸಾವಿರಾರು ಜನ ಕೆಲಸ ಮಾಡ್ತಿದ್ದಾರೆ. ಮೂರು ಮೂರು ಪಾತ್ರಗಳಿಗೆ ಅವರು (ಸುದೀಪ್) ಜೀವ ತುಂಬುತ್ತಿದ್ದಾರೆ. ನಿನ್ನೆ ‘ರಂಗ’ನನ್ನು ಕಣ್ತುಂಬಿಕೊಳ್ಳುವ ಅವಕಾಶವಷ್ಟೇ ನನಗೆ ಸಿಕ್ಕಿತ್ತು. ಉಳಿದಂತೆ ಹೊಸ ಸಿನಿಮಾ ದೇವರಾಯನಿಗಾಗಿ ದೇಹರಾಯನನ್ನು ಹುರಿಗೊಳಿಸುತ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ವಾಹ್ ಎನಿಸಿವಂತಹ ಕಟ್ಟುಮಸ್ತಾದ ಮೈಕಟ್ಟು ಸಿದ್ದಗೊಂಡಿದೆ’ ಎಂದು ಬರೆದುಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್.

ಇದನ್ನೂ ಓದಿ:ಮುಂದಿನ ವರ್ಷದಿಂದ ಬಿಗ್ ಬಾಸ್ ಅಗ್ನಿಪರೀಕ್ಷೆ ಬೇಡ; ನೇರವಾಗಿ ಹೇಳಿದ ಸುದೀಪ್

ಸುದೀಪ್ ಅವರು ‘ಬಿಲ್ಲ ರಂಗ ಭಾಷಾ’ ಸಿನಿಮಾನಲ್ಲಿ ಮೂರು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಮೂರೂ ಪಾತ್ರಗಳಲ್ಲಿ ಭಿನ್ನ ಗೆಟಪ್ ಇರಲಿದೆ. ಸಿನಿಮಾದ ಬಹುತೇಕ ಭಾಗವನ್ನು ಸೆಟ್​​ನಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ ಅನೂಪ್ ಭಂಡಾರಿ, ‘ವಿಕ್ರಾಂತ್ ರೋಣ’ ಸಿನಿಮಾವನ್ನೂ ಸಹ ಬಹುತೇಕ ಸೆಟ್ಟುಗಳಲ್ಲೇ ಅವರು ಚಿತ್ರೀಕರಣ ಮಾಡಿದ್ದರು. ಈಗ ‘ಬಿಲ್ಲ ರಂಗ ಭಾಷಾ’ ಸಿನಿಮಾಕ್ಕೆ ಇನ್ನೂ ಅದ್ಭುತ ಲೋಕವನ್ನು ಅವರು ಸೃಷ್ಟಿ ಮಾಡುತ್ತಿದ್ದಾರೆ.

ಇನ್ನು ಸುದೀಪ್ ಅವರು ಶ್ರೀ ಕೃಷ್ಣ ದೇವರಾಯ ಪಾತ್ರ ಆಧರಿಸಿದ ‘ದೇವರಾಯ’ ಸಿನಿಮಾ ಘೋಷಿಸಿದ್ದು, ಐತಿಹಾಸಿಕ ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ‘ಪೈಲ್ವಾನ್’ ಸಿನಿಮಾಕ್ಕಾಗಿ ಅವರು ಅದ್ಭುತವಾದ ಕಟ್ಟುಮಸ್ತು ದೇಹ ಮಾಡಿಕೊಂಡಿದ್ದರು. ಈಗ ‘ದೇವರಾಯ’ ಸಿನಿಮಾಕ್ಕಾಗಿ ಭರಪೂರ ತಯಾರಿ ನಡೆಸುತ್ತಿದ್ದಾರೆ. ಒಟ್ಟಾರೆ ಅಭಿಮಾನಿಗಳಿಗೆ ಹಬ್ಬ ನೀಡಲು ಸುದೀಪ್ ತಯಾರಾಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ!
ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ!
ಉಪ್ಪಿನ ಬಳಕೆಗೆ ಬ್ರೇಕ್ ಹಾಕಲು ಹೆಲ್ತ್ ಡಿಪಾರ್ಟ್‌ಮೆಂಟ್ ಪ್ಲಾನ್
ಉಪ್ಪಿನ ಬಳಕೆಗೆ ಬ್ರೇಕ್ ಹಾಕಲು ಹೆಲ್ತ್ ಡಿಪಾರ್ಟ್‌ಮೆಂಟ್ ಪ್ಲಾನ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಯಶವಂತರಾಯಗೌಡ ಖಡಕ್ ಮಾತು
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಯಶವಂತರಾಯಗೌಡ ಖಡಕ್ ಮಾತು
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ವಾಯುಭಾರ ಕುಸಿತದ ಎಫೆಕ್ಟ್​​: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ
ವಾಯುಭಾರ ಕುಸಿತದ ಎಫೆಕ್ಟ್​​: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ
ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!
ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!
ಉಪ್ಪಿನ ಪ್ಯಾಕೆಟ್​​ ಮೇಲೂ ಇನ್ನು 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಸ್ಟಿಕರ್
ಉಪ್ಪಿನ ಪ್ಯಾಕೆಟ್​​ ಮೇಲೂ ಇನ್ನು 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಸ್ಟಿಕರ್