AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!

ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Sep 23, 2026 | 12:43 PM

Share

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಕಿಗ್ಗದಲ್ಲಿರುವ ಋಷ್ಯಶೃಂಗೇಶ್ವರ ದೇವಾಲಯವನ್ನು ಮಳೆಯ ದೇವರು ಎಂದು ಪೂಜಿಸಲಾಗುತ್ತದೆ. ಬರಗಾಲ ಮತ್ತು ಪ್ರವಾಹದ ಸಂದರ್ಭಗಳಲ್ಲಿ ರಾಜ್ಯ ಸರ್ಕಾರ ಮತ್ತು ಸ್ಥಳೀಯರು ಮಳೆಗಾಗಿ ಹಾಗೂ ಅತಿವೃಷ್ಟಿ ನಿಲ್ಲಿಸಲು ಇಲ್ಲಿ ಪ್ರಾರ್ಥಿಸುತ್ತಾರೆ. ಈ ದೇವಾಲಯವು ವಾಲ್ಮೀಕಿ ರಾಮಾಯಣದೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ.

ಚಿಕ್ಕಮಗಳೂರು, ಸೆಪ್ಟೆಂಬರ್ 23: ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗದಲ್ಲಿ ನೆಲೆಸಿರುವ ಋಷ್ಯಶೃಂಗೇಶ್ವರ ದೇವಾಲಯವು ಮಳೆಯ ದೇವರು ಎಂದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ರಾಜ್ಯದಲ್ಲಿ ಅನಾವೃಷ್ಟಿ ಅಥವಾ ಅತಿವೃಷ್ಟಿ ಎದುರಾದಾಗ, ರಾಜ್ಯ ಸರ್ಕಾರ ಸೇರಿದಂತೆ ಸ್ಥಳೀಯರು ಮಳೆಗಾಗಿ ಪ್ರಾರ್ಥಿಸಲು ಅಥವಾ ಅತಿವೃಷ್ಟಿ ನಿಲ್ಲಿಸಲು ಈ ದೇವಾಲಯದ ಮೊರೆ ಹೋಗುತ್ತಾರೆ. ರಾಜ್ಯ ಸರ್ಕಾರವು ಹಿಂದೆ ಹಲವಾರು ಬಾರಿ ಋಷ್ಯಶೃಂಗರ ಸನ್ನಿಧಿಯಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿ ಮಳೆಗಾಗಿ ಬೇಡಿಕೊಂಡಿದೆ.

ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ವಾಲ್ಮೀಕಿ ರಾಮಾಯಣದೊಂದಿಗೆ ನಿಕಟ ಸಂಬಂಧ ಹೊಂದಿದೆ. ಮಹರ್ಷಿ ಋಷ್ಯಶೃಂಗರು ವಿಭಂಡಕ ಮಹರ್ಷಿಯವರ ಪುತ್ರರಾಗಿದ್ದು, ದಶರಥ ಮಹಾರಾಜರಿಗೆ ಪುತ್ರ ಸಂತಾನಕ್ಕಾಗಿ ಪುತ್ರಕಾಮೇಷ್ಠಿ ಯಾಗವನ್ನು ನೆರವೇರಿಸಿದ್ದರು. ಇವರ ಪಾದ ಸ್ಪರ್ಶದಿಂದ ಬರಗಾಲ ಪೀಡಿತ ಪ್ರದೇಶಗಳಲ್ಲೂ ಮಳೆಯಾಗುತ್ತದೆ ಎಂಬ ನಂಬಿಕೆ ಬಲವಾಗಿದೆ. ಅಂಗ ದೇಶದಲ್ಲಿ 12 ವರ್ಷಗಳ ಕಾಲ ಮಳೆಯಾಗದಿದ್ದಾಗ, ರಾಜ ರೋಮಪಾದರ ಆಹ್ವಾನದ ಮೇರೆಗೆ ಋಷ್ಯಶೃಂಗರು ಅಲ್ಲಿಗೆ ಭೇಟಿ ನೀಡಿದಾಗ ಮಳೆ ಬಂದಿತ್ತು ಎಂಬ ಐತಿಹ್ಯವಿದೆ. ಕಿಗ್ಗದಲ್ಲಿ ಋಷ್ಯಶೃಂಗರ ಜೊತೆಗೇ ಅವರ ಪತ್ನಿ ಶಾಂತಮ್ಮನ ಗುಡಿಯೂ ಇದೆ. ಭಕ್ತಾದಿಗಳು ಶತರುದ್ರ ಅಭಿಷೇಕ ಮತ್ತು ಪರ್ಜನ್ಯ ಜಪದಂತಹ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿ, ಮಳೆಯ ಅನುಗ್ರಹ ಪಡೆಯುತ್ತಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us