AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದನದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ ಶಶಿಧರ್​

ಸದನದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ: ಕಣ್ಣೀರಿಡುತ್ತಲೇ ಹೊರಹೋದ ಶಾಸಕಿ ರೂಪಕಲಾ ಶಶಿಧರ್​

ಪ್ರಮೋದ್​ ಶಾಸ್ತ್ರಿ ಜಿ.
| Edited By: |

Updated on:Sep 23, 2026 | 5:37 PM

Share

ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರ ನಡುವೆಯೇ ಜಟಾಪಟಿ ನಡೆದ ಘಟನೆ ನಡೆದಿದೆ. ಹೌದು...ಶಾಸಕ ಯಶವಂತರಾಯಗೌಡ ರಾಜೀನಾಮೆ ಗದ್ದಲದ ನಡುವೆಯೇ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಗಲಾಟೆ ಮಾಡಿಕೊಂಡಿಕೊಂಡಿದ್ದಾರೆ. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮತ್ತು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರು ಮಾತಿನ‌ ಚಕಮಕಿ ನಡೆದಿದೆ.

ಬೆಂಗಳೂರು, (ಸೆಪ್ಟೆಂಬರ್ 23): ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರ ನಡುವೆಯೇ ಜಟಾಪಟಿ ನಡೆದ ಘಟನೆ ನಡೆದಿದೆ. ಹೌದು…ಶಾಸಕ ಯಶವಂತರಾಯಗೌಡ ರಾಜೀನಾಮೆ ಗದ್ದಲದ ನಡುವೆಯೇ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಗಲಾಟೆ ಮಾಡಿಕೊಂಡಿಕೊಂಡಿದ್ದಾರೆ. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮತ್ತು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರು ಮಾತಿನ‌ ಚಕಮಕಿ ನಡೆದಿದೆ.

ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಗದ್ದಲದ ನಡುವೆಯೇ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಸುಬ್ಬಾರೆಡ್ಡಿ ಅಕ್ಕಪಕ್ಕ ಕುಳಿತು ಮಾತನಾಡುತ್ತಿದ್ದರು. ಇಬ್ಬರು ಶಾಸಕರು ನಗುನಗುತ್ತಾ ಮಾತನಾಡುತ್ತಿದ್ದರು. ಇದರಿಂದ ಕೆರಳಿದ ರೂಪಕಲಾ, ಹಿಂದಿನಿಂದ ಎದ್ದು ಬಂದು ಅವರ ಎದುರಿಗೆ ನಿಂತು ಕೈ ತೋರಿಸಿ ಜೋರಾಗಿ ಏರುಧ್ವನಿಯಲ್ಲೇ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕಂಡುಬಂತು. ಪ್ರತಿ ಬಾರಿ ನನ್ನ ಕಂಡಮ್ ಮಾಡ್ತೀರಾ ಎಂದು ರೂಪಕಲಾ ಮೇಲಿಂದ ಕೈ ಎತ್ತಿ ಗಟ್ಟಿಯಾಗಿ ಮೇಜು ಗುದ್ದಿದರು.

ಇಷ್ಟಕ್ಕೆ ಸುಮ್ಮನಾಗದೇ ಸಿಟ್ಟಿನಿಂದಲೇ ಜೋರಾಗಿ ಕೂಗಲು ಆರಂಭಿಸಿದರು. ಬಳಿಕ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಯಾಕಮ್ಮಾ ಟೇಬಲ್ ಕುಟ್ಟುತ್ತಿದ್ದೀಯಾ? ಇನ್ನೊಂದು ಇಲ್ಲೇ ಗಲಾಟೆ ಶುರುವಾಗುತ್ತೆ ಎಂದರು. ನಂತರ ಕೆಲ ಶಾಸಕರು ರೂಪಕಲಾರನ್ನ ಹೊರಗಡೆ ಕರೆದುಕೊಂಡು ಹೋದರು. ಈ ವೇಳೆ ರೂಪಕಲಾ ಶಶಿಧರ್​ ಕಣ್ಣೀರಿಡುತ್ತಲೇ ಹೊರಹೋದರು.

Published on: Sep 23, 2026 05:30 PM

Follow Us
ಪ್ರಮೋದ್​ ಶಾಸ್ತ್ರಿ ಜಿ.
ಪ್ರಮೋದ್​ ಶಾಸ್ತ್ರಿ ಜಿ.