AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಹೆಚ್ಚಿದ ಭರವಸೆ; ಫಿಚ್ ಶೇ. 6.9, ಎಸ್&ಪಿ ಶೇ 7, ಒಇಸಿಡಿ ಶೇ. 7.1 ವೃದ್ಧಿಯ ಅಂದಾಜು

2026-27ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ವಿವಿಧ ಏಜೆನ್ಸಿಗಳು ಇಟ್ಟಿದ್ದ ನಿರೀಕ್ಷೆಗಳು ಹೆಚ್ಚಿವೆ. ಫಿಚ್ ರೇಟಿಂಗ್ಸ್ ಪ್ರಕಾರ ಜಿಡಿಪಿ ಶೇ. 6.9ರಷ್ಟು ಬೆಳೆಯುವ ಸಾಧ್ಯತೆ ಇದೆ. ಎಸ್&ಪಿ ಏಜೆನ್ಸಿ ಜಿಡಿಪಿ ವೃದ್ಧಿಯ ನಿರೀಕ್ಷೆಯನ್ನು ಶೇ. 6.6ರಿಂದ 7ಕ್ಕೆ ಹೆಚ್ಚಿಸಿದೆ. ಒಇಸಿಡಿಯಂತೂ ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ತನ್ನ ಹಿಂದಿನ ಅಭಿಪ್ರಾಯಕ್ಕಿಂತ 80 ಮೂಲಾಂಕಗಳಷ್ಟು ಹೆಚ್ಚಿಸಿದೆ.

ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಹೆಚ್ಚಿದ ಭರವಸೆ; ಫಿಚ್ ಶೇ. 6.9, ಎಸ್&ಪಿ ಶೇ 7, ಒಇಸಿಡಿ ಶೇ. 7.1 ವೃದ್ಧಿಯ ಅಂದಾಜು
ಮಾರುಕಟ್ಟೆಯ ಚಾರ್ಟ್Image Credit source: ThinkNeo/DigitalVision Vectors/Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 23, 2026 | 5:51 PM

Share

ನವದೆಹಲಿ, ಸೆಪ್ಟೆಂಬರ್ 23: ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಅಂತಾರಾಷ್ಟ್ರೀಯ ರಾಜಕೀಯ ಬಿಕ್ಕಟ್ಟುಗಳ ನಡುವೆಯೂ ಭಾರತದ ಆರ್ಥಿಕತೆಯು ಬಲವಾದ ಚೇತರಿಕೆ ಮತ್ತು ಸುಸ್ಥಿರತೆಯನ್ನು ಪ್ರದರ್ಶಿಸುತ್ತಿದೆ. ಪ್ರಮುಖ ಜಾಗತಿಕ ಆರ್ಥಿಕ ವಿಶ್ಲೇಷಣಾ ಸಂಸ್ಥೆಗಳಾದ ಒಇಸಿಡಿ, ಎಸ್&ಪಿ ಗ್ಲೋಬಲ್ ಮತ್ತು ಫಿಚ್ ರೇಟಿಂಗ್ಸ್ ಭಾರತದ 2026-27ರ ಸಾಲಿನ (FY27) ಜಿಡಿಪಿ (GDP) ಬೆಳವಣಿಗೆಯ ದರದ ಮುನ್ಸೂಚನೆಯನ್ನು ಹೆಚ್ಚಿಸಿವೆ. ಶೇ. 6.3ರಿಂದ 6.6ರವರೆಗೆ ಬೆಳವಣಿಗೆ ಆಗಬಹುದು ಎಂದು ನಿರೀಕ್ಷಿಸಿದ್ದ ಈ ಮೂರು ರೇಟಿಂಗ್ಸ್ ಸಂಸ್ಥೆಗಳು ತಮ್ಮ ಅಭಿಪ್ರಾಯ ಬದಲಿಸಿದ್ದು, ಜಿಡಿಪಿ ಬೆಳವಣಿಗೆ ಶೇ. 6.9ರಿಂದ ಶೇ. 7.1ರಷ್ಟಿರಬಹುದು ಎನ್ನುತ್ತಿವೆ.

ಪ್ರಬಲ ಆಂತರಿಕ ಅನುಭೋಗ (Domestic Consumption), ಮೂಲಸೌಕರ್ಯ ವಲಯದಲ್ಲಿ ಸರ್ಕಾರದ ಬೃಹತ್ ಹೂಡಿಕೆ ಹಾಗೂ ಖಾಸಗಿ ವಲಯದ ಸಕ್ರಿಯ ಪಾಲ್ಗೊಳ್ಳುವಿಕೆ ಈ ಅಂಶಗಳು ಆರ್ಥಿಕ ಪ್ರಗತಿಗೆ ಪ್ರಮುಖ ಕಾರಣ ಎಂದು ಸಂಸ್ಥೆಗಳು ವಿಶ್ಲೇಷಿಸಿವೆ.

OECD ಪ್ರಕಾರ 2026-27ರಲ್ಲಿ ಶೇ. 7.1 ಜಿಡಿಪಿ ವೃದ್ಧಿ

ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಭಾರತದ ನೈಜ ಜಿಡಿಪಿ ಬೆಳವಣಿಗೆಯು ಸ್ಥಿರವಾಗಿರಲಿದೆ ಎಂದು ಒಇಸಿಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ತಿಳಿಸಿದೆ. ಭಾರತದ ಆಂತರಿಕ ಮಾರುಕಟ್ಟೆ ಬೇಡಿಕೆ ಮತ್ತು ಸೇವಾ ವಲಯದ ಬಲವಾದ ಬೆಳವಣಿಗೆಯನ್ನು ಆಧರಿಸಿ ಈ ಹಿಂದೆ ನೀಡಿದ್ದ ಅಂದಾಜನ್ನು ಪರಿಷ್ಕರಿಸಿ ಹೆಚ್ಚಿಸಿದೆ. ಈ ಮೊದಲು ಅದು ಜಿಡಿಪಿ ಶೇ. 6.3ರಷ್ಟು ವೃದ್ಧಿಸಬಹುದು ಎಂದಿತ್ತು. ಈಗ ಶೇ. 7.1 ಪ್ರಗತಿ ಆಗಬಹುದು ಎಂದು ಹೇಳುತ್ತಿದೆ.

ಇದನ್ನೂ ಓದಿ: ಎಟಿಎಂನಿಂದ ಹಣ ಬಂದಿಲ್ಲ, ಆದರೆ ಅಕೌಂಟ್​ನಿಂದ ಹಣ ಕಡಿತವಾಗಿದೆಯಾ? ಆರ್​ಬಿಐ ನಿಯಮಗಳನ್ನು ತಿಳಿದಿರಿ

ಎಸ್&ಪಿ ಗ್ಲೋಬಲ್ ಶೇ. 6.6ರಿಂದ ಶೇ. 7

ಎಸ್&ಪಿ ಸಂಸ್ಥೆಯು ಭಾರತದ ನಿರೀಕ್ಷಿತ ಆರ್ಥಿಕ ಬೆಳವಣಿಗೆಯ ದರವನ್ನು ಏರಿಕೆ ಮಾಡಿದ್ದು, ಜಾಗತಿಕ ಪೂರೈಕೆ ಸರಪಳಿಯಲ್ಲಿ (Global Supply Chain) ಭಾರತದ ಪಾತ್ರ ಹಿರಿದಾಗುತ್ತಿರುವುದು ಮತ್ತು ಉತ್ಪಾದನಾ (Manufacturing) ವಲಯದ ಉತ್ತೇಜನವು ದೇಶದ ಜಿಡಿಪಿಗೆ ದೊಡ್ಡ ಬಲ ತಂದಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಮೊದಲು ಅದು ಶೇ. 6.6ರಷ್ಟು ಜಿಡಿಪಿ ವೃದ್ಧಿಸಬಹುದು ಎಂದಿತ್ತು. ಈಗ ನಿರೀಕ್ಷೆಯನ್ನು ಶೇ. 7ಕ್ಕೆ ಹೆಚ್ಚಿಸಿದೆ.

ಫಿಚ್ ರೇಟಿಂಗ್ಸ್ ಪ್ರಕಾರ ಶೇ. 6.9 ಬೆಳವಣಿಗೆ

ಫಿಚ್ (Fitch Ratings) ತನ್ನ ಇತ್ತೀಚಿನ ಜಾಗತಿಕ ಆರ್ಥಿಕ ಮುನ್ಸೂಚನೆಯಲ್ಲಿ ಭಾರತದ ಜಿಡಿಪಿ ದರದ ನಿರೀಕ್ಷೆಯನ್ನು ಶೇ. 6.4ರಿಂದ ಶೇ. 6.9ಕ್ಕೆ ಹೆಚ್ಚಿಸಿದೆ. ಭಾರತದಲ್ಲಿ ಚಿಲ್ಲರೆ ಹಣದುಬ್ಬರ (Inflation) ನಿಯಂತ್ರಣಕ್ಕೆ ಬರುತ್ತಿರುವುದು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿಯಲ್ಲಿ ಕಾಯ್ದುಕೊಂಡಿರುವ ಸ್ಥಿರತೆಯು ಆರ್ಥಿಕತೆಗೆ ಪೂರಕವಾಗಿದೆ ಎಂದು ಹೇಳಿದೆ.

ಆರ್ಥಿಕ ದರ ಏರಿಕೆಗೆ ನಿರೀಕ್ಷೆ ಹೆಚ್ಚಲು ಏನು ಕಾರಣ?

  • ಭಾರೀ ಸರ್ಕಾರಿ ಬಂಡವಾಳ ಹೂಡಿಕೆ (Capital Expenditure): ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಬಂದರುಗಳು ಹಾಗೂ ಶಕ್ತಿ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆ.
  • ಖಾಸಗಿ ವಲಯದ ಚೇತರಿಕೆ: ವಿವಿಧ ವಲಯಗಳಲ್ಲಿ ಖಾಸಗಿ ಕಂಪನಿಗಳ ಬಂಡವಾಳ ಹೂಡಿಕೆ ಹೆಚ್ಚುತ್ತಿರುವುದು.
  • ಸೇವಾ ಮತ್ತು ಡಿಜಿಟಲ್ ರಫ್ತು: ಜಾಗತಿಕ ಮಟ್ಟದಲ್ಲಿ ಭಾರತದ ಐಟಿ, ಆರ್‌ಆಂಡ್‌ಡಿ (R&D) ಹಾಗೂ ತಾಂತ್ರಿಕ ಸೇವೆಗಳಿಗೆ ಮುಂದುವರಿದಿರುವ ಭಾರಿ ಬೇಡಿಕೆ.
  • ಸ್ಥಿರ ಹಣದುಬ್ಬರ ಮತ್ತು ಗ್ರಾಹಕರ ಬೇಡಿಕೆ: ಹಬ್ಬಗಳ ಸಾಲು ಮತ್ತು ಗ್ರಾಮೀಣ ಆರ್ಥಿಕತೆಯ ಚೇತರಿಕೆಯಿಂದಾಗಿ ದೇಶಿಯವಾಗಿ ಸರಕುಗಳ ಮಾರಾಟದಲ್ಲಿ ಕಂಡುಬಂದಿರುವ ಪ್ರಗತಿ.

ಇದನ್ನೂ ಓದಿ: ಬ್ಯಾಂಕ್‌ಗೆ ಯಾವುದೇ ಕೆಲಸಕ್ಕೆ ಹೋದರೂ ಈ 3 ದಾಖಲೆಗಳು ನಿಮ್ಮ ಕೈಯಲ್ಲಿರಲಿ: ಕೆಲಸ ಕಾರ್ಯ ಸುಲಭ

ಈ ಮೂರೂ ಪ್ರಮುಖ ಸಂಸ್ಥೆಗಳ ಪರಿಷ್ಕೃತ ಮುನ್ಸೂಚನೆಯು, ಭಾರತವು ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗಳಿಸಿಕೊಂಡಿರುವುದನ್ನು ಸ್ಪಷ್ಟಪಡಿಸಿದೆ. ಇದಕ್ಕೆ ಇಂಬು ಕೊಡುವಂತೆ, ಭಾರತದ ಆರ್ಥಿಕ ಬೆಳವಣಿಗೆಯು ಎಲ್ಲರ ನಿರೀಕ್ಷೆಗಳನ್ನು ಮೀರಿ ಆಗುತ್ತಿದೆ. ಶೇ. 7ರ ಆಸುಪಾಸಿನ ದರದಲ್ಲಿ ಜಿಡಿಪಿ ವೃದ್ಧಿಸುತ್ತಾ ಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಯಶವಂತರಾಯಗೌಡ ಖಡಕ್ ಮಾತು
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಯಶವಂತರಾಯಗೌಡ ಖಡಕ್ ಮಾತು
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ವಿರುದ್ಧ ದೂರು: ಅಸಲಿ ವಿಷಯ ಇಲ್ಲಿದೆ
ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ
ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ರಾಷ್ಟ್ರೀಯ ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗದಗ: ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಡಿಸಿ, ಎಡಿಸಿ ಕಾರು ಜಪ್ತಿ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ಗೌರವಯುತವಾಗಿ ನೋಡಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: ಸಚಿವ ಶಿವಲಿಂಗೇಗೌಡ
ವಾಯುಭಾರ ಕುಸಿತದ ಎಫೆಕ್ಟ್​​: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ
ವಾಯುಭಾರ ಕುಸಿತದ ಎಫೆಕ್ಟ್​​: ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭರ್ಜರಿ ಮಳೆ
ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!
ಕಿಗ್ಗಾ ಬಳಿ ಇರುವ ಋಷ್ಯಶೃಂಗೇಶ್ವರ ಸ್ವಾಮಿಯ ಶಕ್ತಿ, ಐತಿಹ್ಯವೇ ಅತಿ ರೋಚಕ!
ಉಪ್ಪಿನ ಪ್ಯಾಕೆಟ್​​ ಮೇಲೂ ಇನ್ನು 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಸ್ಟಿಕರ್
ಉಪ್ಪಿನ ಪ್ಯಾಕೆಟ್​​ ಮೇಲೂ ಇನ್ನು 'ಆರೋಗ್ಯಕ್ಕೆ ಹಾನಿಕಾರಕ' ಎಂಬ ಸ್ಟಿಕರ್
ರೌಡಿಶೀಟರ್‌ಗಳ ಜೊತೆ ರಾತ್ರಿಯಿಡೀ ಎಣ್ಣೆ ಪಾರ್ಟಿ
ರೌಡಿಶೀಟರ್‌ಗಳ ಜೊತೆ ರಾತ್ರಿಯಿಡೀ ಎಣ್ಣೆ ಪಾರ್ಟಿ