AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಬತ್ತು, ತೊಂಬತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಗೋಲ್ಡ್ ಸ್ಪಾಟ್ ಡ್ರಿಂಕ್ ಮರಳಿ ಬರುತ್ತಿದೆ ಮಾರುಕಟ್ಟೆಗೆ

80 ಮತ್ತು 90ರ ದಶಕದಲ್ಲಿ ಜನಪ್ರಿಯವಾಗಿದ್ದ ಕಿತ್ತಳೆ ರುಚಿಯ ತಂಪು ಪಾನೀಯ 'ಗೋಲ್ಡ್ ಸ್ಪಾಟ್' ಮರಳಿ ಮಾರುಕಟ್ಟೆಗೆ ಬರುತ್ತಿದೆ. 2000 ಇಸವಿಯಲ್ಲಿ ಇದರ ಉತ್ಪಾದನೆ ನಿಲ್ಲಿಸಿದ್ದ ಕೋಕಾ-ಕೋಲಾ ಕಂಪನಿಯು 26 ವರ್ಷಗಳ ಸುದೀರ್ಘ ವಿರಾಮದ ನಂತರ ಅದನ್ನು ಬಿಡುಗಡೆ ಮಾಡುತ್ತಿದೆ. ಲೋ ಶುಗರ್ ಡ್ರಿಂಕ್ ಆಗಿ ಅದನ್ನು ತರಲಾಗುತ್ತಿದ್ದು, ಇಂದಿನ ಆರೋಗ್ಯಕಾಳಜಿ ಸಮುದಾಯವನ್ನು ಸೆಳೆಯಲು ಸಜ್ಜಾಗಿದೆ.

ಎಂಬತ್ತು, ತೊಂಬತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಗೋಲ್ಡ್ ಸ್ಪಾಟ್ ಡ್ರಿಂಕ್ ಮರಳಿ ಬರುತ್ತಿದೆ ಮಾರುಕಟ್ಟೆಗೆ
ಗೋಲ್ಡ್ ಸ್ಪಾಟ್Image Credit source: X platform
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 24, 2026 | 1:53 PM

Share

ನವದೆಹಲಿ, ನವೆಂಬರ್ 24: ಎಪತ್ತರ ದಶಕದಿಂದ ಹಿಡಿದು ತೊಂಬತ್ತರ ದಶಕದವರೆಗಿನ ಅವಧಿಯಲ್ಲಿ ಬಾಲ್ಯ ಮತ್ತು ಯೌವನ ಕಂಡವರಿಗೆ ಗೋಲ್ಡ್ ಸ್ಪಾಟ್ ಬ್ರ್ಯಾಂಡ್ ಹೆಸರು ಗೊತ್ತಿರಬಹುದು. “ದಿ ಜಿಂಗ್ ಥಿಂಗ್” (The Zing Thing) ಎಂಬ ಘೋಷವಾಕ್ಯದೊಂದಿಗೆ ಮನೆಮಾತಾಗಿದ್ದ ಕಿತ್ತಳೆಹಣ್ಣಿನ ರುಚಿಯ ತಂಪು ಪಾನೀಯ ‘ಗೋಲ್ಡ್ ಸ್ಪಾಟ್’ ಮತ್ತೆ ಭಾರತೀಯ ಮಾರುಕಟ್ಟೆಗೆ ಮರಳಲು ಸಿದ್ಧವಾಗಿದೆ. 26 ವರ್ಷದ ಹಿಂದೆ ಗೋಲ್ಡ್ ಸ್ಪಾಟ್ ಅನ್ನು ಸಮಾಧಿ ಮಾಡಿದ್ದ ಕೋಕಾಕೋಲಾ ಈಗ ಮರುಪರಿಚಯಿಸಲು ಹೊರಟಿದೆ.

1952ರಲ್ಲಿ ಪಾರ್ಲೆ (Parle) ಸಮೂಹದಿಂದ ಪರಿಚಯಿಸಲ್ಪಟ್ಟ ಈ ಬ್ರ್ಯಾಂಡ್ ಅನ್ನು 1993ರಲ್ಲಿ ಕೋಕಾ-ಕೋಲಾ ಕಂಪನಿಯು ಥಮ್ಸ್ ಅಪ್, ಲಿಮ್ಕಾ ಮತ್ತು ಮಾಜಾ ಜೊತೆಗೆ ಸುಮಾರು 40 ಮಿಲಿಯನ್ ಡಾಲರ್‌ಗೆ ಖರೀದಿಸಿತ್ತು. ಆದರೆ, ತನ್ನದೇ ಆದ ‘ಫ್ಯಾಂಟಾ’ (Fanta) ಬ್ರ್ಯಾಂಡ್‌ಗೆ ಮಾರುಕಟ್ಟೆ ವಿಸ್ತರಿಸಲು 2000ನೇ ಇಸವಿಯಲ್ಲಿ ಗೋಲ್ಡ್ ಸ್ಪಾಟ್ ಉತ್ಪಾದನೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: ವಾಟ್ಸಾಪ್ ವೆಬ್ ಬಳಸುತ್ತಿದ್ದೀರಾ? ಸರ್ಕಾರದ ಈ ಅಡ್ವೈಸರಿ ತಪ್ಪದೇ ನೋಡಿ; ಸೈಬರ್ ಕ್ರಿಮಿನಲ್​ಗಳ ಗಾಳಕ್ಕೆ ಬೀಳದಿರಿ

ಕಡಿಮೆ ಸಕ್ಕರೆ ಹೊಂದಿರುವ ಅವತಾರದಲ್ಲಿ ಗೋಲ್ಡ್ ಸ್ಪಾಟ್

ಪ್ರಸ್ತುತ ಗ್ರಾಹಕರ ಆರೋಗ್ಯ ಕಾಳಜಿ ಮತ್ತು ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ, ಕೋಕಾ-ಕೋಲಾ ಕಂಪನಿಯು ಗೋಲ್ಡ್ ಸ್ಪಾಟ್ ಅನ್ನು ‘ಕಡಿಮೆ ಸಕ್ಕರೆ’ ಅಥವಾ ‘ಸಕ್ಕರೆ ರಹಿತ’ (low-sugar or no-sugar) ಪಾನೀಯವಾಗಿ ಮರುಪರಿಚಯಿಸಲು ಯೋಜಿಸಿದೆ.

ಗೋಲ್ಡ್ ಸ್ಪಾಟ್ ಕಂಬ್ಯಾಕ್

ಇದರಿಂದ ಫ್ಯಾಂಟಾದೊಂದಿಗೆ ನೇರ ಪೈಪೋಟಿ ತಪ್ಪಿಸುವುದರ ಜೊತೆಗೆ, ಹಳೆಯ ಬ್ರ್ಯಾಂಡ್‌ಗಳ ಭಾವನಾತ್ಮಕ ಸೆಳೆತವನ್ನು (nostalgia) ಬಳಸಿಕೊಂಡು ರಿಲಯನ್ಸ್‌ನ ‘ಕ್ಯಾಂಪಾ’ (Campa) ಮುಂತಾದ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವುದು ಕಂಪನಿಯ ಉದ್ದೇಶವಾಗಿದೆ.

ಧೋನಿ ಫೋಟೋದಿಂದ ಹೆಚ್ಚಾದ ಕುತೂಹಲ

ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ಅವರ ಮುಂದೆ ಗೋಲ್ಡ್ ಸ್ಪಾಟ್ ಕ್ಯಾನ್‌ಗಳು ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮರುಬಿಡುಗಡೆಯ ಸುದ್ದಿಗೆ ಭಾರಿ ವೇಗ ನೀಡಿದೆ.

ಇದನ್ನೂ ಓದಿ: ನಿಮ್ಮ ಪಿಎಫ್ ಹಣದಿಂದ ಮಾಸಿಕ ಆದಾಯ ಸೃಷ್ಟಿಸಲು ದಾರಿ; ಇಪಿಎಫ್​ಒದ ಹೊಸ ಪ್ಲಾನ್ ಬಗ್ಗೆ ಮಾಹಿತಿ

ಕಂಪನಿಯಿಂದ ಅಧಿಕೃತ ಘೋಷಣೆ ಇನ್ನೂ ಬಾಕಿಯಿದ್ದರೂ, 90ರ ದಶಕದ ಮಕ್ಕಳು ತಮ್ಮ ಬಾಲ್ಯದ ಸವಿನೆನಪುಗಳನ್ನು ಹಂಚಿಕೊಳ್ಳುತ್ತಿದ್ದು, ಹಳೆಯ ರುಚಿಯಂತೆಯೇ ಹೊಸ ಪಾನೀಯವೂ ಇರಲಿ ಎಂದು ಆಶಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Tue, 24 November 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಬಿಜೆಪಿ ಗೆದ್ದರೆ 5 ಗ್ಯಾರಂಟಿಗಳು ವಾಪಸ್‌: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸತ್ತ ಮರಿಯನ್ನೂ ಬಿಟ್ಟುಕೊಡದ ತಾಯಿ ಕೋತಿ: ಮುಂಡರಗಿಯಲ್ಲಿ ಮನಕಲಕುವ ದೃಶ್ಯ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ
ಸಹೋದರನ ಮದುವೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಪವಿತ್ರಾ ಗೌಡ ಅರ್ಜಿ
ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ: ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ
ಸರ್ಕಾರಿ ಕಾರು, ಗನ್‌ಮ್ಯಾನ್ ದುರ್ಬಳಕೆ: ಗದಗ ಡಿಸಿ ವಿರುದ್ಧ ಮತ್ತೊಂದು ಆರೋಪ
ಅಭಿವೃದ್ಧಿ ಬಗ್ಗೆ ಯುವಕನ ಪ್ರಶ್ನೆಗೆ ಶಾಸಕ ಚಂದ್ರಪ್ಪ ಗರಂ: ವಿಡಿಯೋ ವೈರಲ್
ಅಭಿವೃದ್ಧಿ ಬಗ್ಗೆ ಯುವಕನ ಪ್ರಶ್ನೆಗೆ ಶಾಸಕ ಚಂದ್ರಪ್ಪ ಗರಂ: ವಿಡಿಯೋ ವೈರಲ್
ಕಾಶಿಯಿಂದ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಗಂಗೆ! ಕೋಲಾರದ ಅಂತರಗಂಗೆಯ ಮಹಿಮೆ
ಕಾಶಿಯಿಂದ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಗಂಗೆ! ಕೋಲಾರದ ಅಂತರಗಂಗೆಯ ಮಹಿಮೆ
ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಆಟ ಶುರು; ಸ್ಪರ್ಧಿಗಳಿಗೆ ಶುರುವಾಗಿದೆ ಭಯ
ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಆಟ ಶುರು; ಸ್ಪರ್ಧಿಗಳಿಗೆ ಶುರುವಾಗಿದೆ ಭಯ
ಸತ್ರೂ ಸರಿ, ಸರ್ಕಾರ ಸ್ಪಂದಿಸುವ ವರೆಗೂ ಪಟ್ಟುಬಿಡಲ್ಲ: ಆಶಾಗಳ ಖಡಕ್ ನುಡಿ
ಸತ್ರೂ ಸರಿ, ಸರ್ಕಾರ ಸ್ಪಂದಿಸುವ ವರೆಗೂ ಪಟ್ಟುಬಿಡಲ್ಲ: ಆಶಾಗಳ ಖಡಕ್ ನುಡಿ
ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ
ಇಂದು ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ಉತ್ತಮ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ