AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್​​ಕುಮಾರ್

ಪುನೀತ್ ರಾಜ್ಕುಮಾರ್ ಅವರ ಜನ್ಮದಿನದಂದು, ಅಭಿಮಾನಿಗಳು ಅವರನ್ನು ವಿಶೇಷವಾಗಿ ಸ್ಮರಿಸುತ್ತಿದ್ದಾರೆ. ಕೇವಲ ನಟನಾಗಿರದೆ, ಉದ್ಯಮದಲ್ಲಿಯೂ ಆಸಕ್ತಿ ಹೊಂದಿದ್ದ ಪುನೀತ್, ತಮ್ಮ 'ಪಿಆರ್‌ಕೆ' ಸಂಸ್ಥೆಯ ಮೂಲಕ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ವೀರಪ್ಪನ್‌ನಿಂದ ಡಾ. ರಾಜ್‌ಕುಮಾರ್ ಅಪಹರಣಗೊಂಡಾಗ, ಪುನೀತ್‌ನವರ ಗ್ರಾನೈಟ್ ವ್ಯವಹಾರವೇ ಕಾರಣ ಎಂಬ ವದಂತಿ ಹಬ್ಬಿತ್ತು. ಈ ಆರೋಪಗಳಿಗೆ ಪುನೀತ್ ಸ್ವತಃ ಸ್ಪಷ್ಟನೆ ನೀಡಿ, ತಮ್ಮ ವ್ಯವಹಾರ ಕಾನೂನುಬದ್ಧವಾಗಿತ್ತು ಎಂದು ಹೇಳಿದ್ದರು.

ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್​​ಕುಮಾರ್
ಪುನೀತ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 16, 2026 | 7:54 AM

Share

ನಟ ಪುನೀತ್ ರಾಜ್ಕುಮಾರ್ ಅವರಿಗೆ (Puneeth Rajkumar) ಮಾರ್ಚ್ 17 ಜನ್ಮದಿನ. ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅವರನ್ನು ಕಳೆದುಕೊಂಡು ಕೆಲವು ವರ್ಷಗಳು ಕಳೆದಿವೆ. ಆದಾಗ್ಯೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಅಭಿಮಾನಿಗಳಿಂದ ಆಗಾಗ ಆಗುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಅವರ ವಹಲವು ವಿಷಯಗಳು ಚರ್ಚೆ ಆಗುತ್ತಿವೆ. ಅದೇ ರೀತಿ ಅವರು ಅಕ್ರಮವಾಗಿ ಗ್ರ್ಯಾನೇಟ್ ಬಿಸ್ನೆಸ್ ಮಾಡುತ್ತಿದ್ದರು ಎಂಬ ಆರೋಪ ಇತ್ತು. ಈ ವಿಷಯವಾಗಿ ಅವರು ಮಾತನಾಡಿದ್ದರು. ಈ ಕಾರಣಕ್ಕೆ ಅವರ ತಂದೆ ರಾಜ್ಕುಮಾರ್ ಅವರನ್ನು ಬಂಧಿಸಲಾಗಿತ್ತು ಎನ್ನುವ ಆರೋಪ ಇತ್ತು. ಇದಕ್ಕೆ ಪುನೀತ್ ಅವರು ಸ್ಪಷ್ಟನೆ ಕೊಟ್ಟಿದ್ದರು.

ಪುನೀತ್ ರಾಜ್ಕುಮಾರ್ ಅವರು ಕೇವಲ ನಟಾಗಿರಲಿಲ್ಲ. ಅವರಿಗೆ ನಟನೆಗಿಂತ ಹೆಚ್ಚು ಉದ್ಯಮದ ಕಡೆಗಳಲ್ಲಿ ಆಸಕ್ತಿ ಇತ್ತು. ಈ ಕಾರಣದಿಂದ ಉದ್ಯಮದ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ಅವರ‘ಪಿಆರ್ಕೆ’ ನಿರ್ಮಾಣ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ಅವರ ಬಗ್ಗೆ ಕೇಳಿಬಂದ ಗಂಭೀರ ಆರೋಪದ ಬಗ್ಗೆ ಪುನೀತ್ ಮಾತನಾಡಿದ್ದರು.

‘ನಮ್ಮ ತಂದೆಯವರು ವೀರಪ್ಪನ್ ಅವರಿಂದ ಕಿಡ್ನ್ಯಾಪ್ ಆದಾಗ ಅನೇಕ ಚರ್ಚೆಗಳು ನಡೆದವು. ನಾನು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದೆ. ಅದಕ್ಕಾಗಿ ನಮ್ಮ ತಂದೆಯನ್ನು ವೀರಪ್ಪನ್ ಹಿಡಿದುಕೊಂಡು ಹೋದರು ಎಂಬ ಸುದ್ದಿ ಹರಿದಾಡಿತ್ತು. ಈ ರೀತಿಯ ಹಲವಾರು ಸುದ್ದಿ ಬಂತು’ ಎಂದು ಪುನೀತ್ ರಾಜ್ಕುಮಾರ್ ಹೇಳಿದ್ದರು.

‘ನಾನು ಗ್ರಾನೈಟ್ ಬಿಸ್ನೆಸ್ ಮಾಡಲು ಮುಂದಾಗಿದ್ದೆ ಎಂಬುದು ಅನೇಕರಿಗೆ ತಿಳಿದೇ ಇಲ್ಲ. ಆಗ ಇದು ಅಕ್ರಮ ಗ್ರಾನೈಟ್ ಬಿಸ್ನೆಸ್ ಎಂದು ನನ್ನ ಫೋಟೋ ಪೇಪರ್ನಲ್ಲಿ ಬಂದಿತ್ತು. ಈ ರೀತಿಯಲ್ಲ ಏಕೆ ಹಾಕುತ್ತಾರೆ ಎಂಬುದು ನನ್ನ ಪ್ರಶ್ನೆ ಆಗಿತ್ತು. ನನ್ನ ಬಿಸ್ನೆಸ್ ಅದು. ಅದು ಅಕ್ರಮವೇ ಆಗಿದ್ದರೆ ಕಾನೂನು ನೋಡಿಕೊಳ್ಳುತ್ತಿತ್ತು. ಹೊರಗಡೆ ಇದ್ದವರು ಕಮೆಂಟ್ ಮಾಡೋದೇಕೆ ಎಂದು ನನ್ನ ಮನಸ್ಸಿಗೆ ಅನಿಸಿತ್ತು’ ಎಂದಿದ್ದರು ಅವರು.

‘ಯಾರೋ ಹೀಗೆ ಹೇಳಿದ್ರೂ ತೊಂದರೆ ಇಲ್ಲ. ಆದರೆ, ತಂದೆ ಅಪಹರಣ ಆದಾಗ ಅನೇಕರು ಇದನ್ನು ಲಿಂಕ್ ಮಾಡಿದಾಗ ಸಾಕಷ್ಟು ಬೇಸರ ಆಯಿತು. ನಾನು ಬಿಸ್ನೆಸ್ ಮಾಡ್ತಾ ಇದ್ದಿದ್ದು ಕನಕಪುರದಲ್ಲಿ. ನನಗೇನು ಬುದ್ಧಿ ಇಲ್ವ? ಕುಟುಂಬದವರಿಗೆ ಸತ್ಯ ಏನು ಎಂಬುದು ಗೊತ್ತಿತ್ತು’ ಎಂದಿದ್ದರು ಪುನೀತ್ ರಾಜ್ಕುಮಾರ್. ಈ ರೀತಿಯ ಸುದ್ದಿಯಿಂದ ರಾಜ್ಕುಮಾರ್ ಬೇಸರಗೊಂಡಿದ್ದರು. ಪುನೀತ್ಗೆ ಇದೆಲ್ಲ ನಿಲ್ಲಿಸುವಂತೆ ಕೋರಿಕೊಂಡಿದ್ದರು.

ಇದನ್ನೂ ಓದಿ: ‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ

ಪುನೀತ್ ರಾಜ್ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಅವರು ನಿಧನ ಹೊಂದಿದರು. ಅವರಿಗೆ 46 ವರ್ಷ ವಯಸ್ಸು ಆಗಿತ್ತು. ಹೃದಯಾಘಾತದಿಂದ ಅಪ್ಪು ನಿಧನ ಹೊಂದಿದರು. ಅವರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರಿಲ್ಲ ಎನ್ನುವ ನೋವು ಎಲ್ಲರನ್ನೂ ಈಗಲೂ ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಕುಮಾರಸ್ವಾಮಿ
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ