AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಪ್‌ನಿಂದ ಶಿಪ್‌ವರೆಗೆ ಎಲ್ಲವೂ ನಿಮ್ಮ ಕೈಗಳಲ್ಲೇ ತಯಾರಾಗಲಿದೆ: ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ

“ಚಿಪ್‌ನಿಂದ ಶಿಪ್‌ವರೆಗೆ ಎಲ್ಲವೂ ನಿಮ್ಮ ಕೈಗಳಲ್ಲೇ ತಯಾರಾಗಲಿದೆ”: ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ

ಅಕ್ಷಯ್​ ಪಲ್ಲಮಜಲು​​
|

Updated on:Aug 08, 2026 | 5:34 PM

Share

ಪ್ರಧಾನಿ ಮೋದಿ ಐಐಟಿ ದೆಹಲಿಯಲ್ಲಿ ಮಾತನಾಡಿ, ಭಾರತದ ಯುವಶಕ್ತಿಯನ್ನು 'ಚಿಪ್‌ನಿಂದ ಶಿಪ್‌ವರೆಗೆ' ತಂತ್ರಜ್ಞಾನ ಮತ್ತು ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಶ್ಲಾಘಿಸಿದರು. ಯುವ ಆವಿಷ್ಕಾರಕರು ಚಿಪ್‌ಗಳು, ಹಡಗುಗಳು ಮತ್ತು ಯುದ್ಧನೌಕೆಗಳ ತಯಾರಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ದೇಶವು ಸೆಮಿಕಂಡಕ್ಟರ್ ರಂಗದಲ್ಲಿ ಮುನ್ನಡೆಯುತ್ತಿದ್ದು, ಭಾರತೀಯ ಯುವಕರ ಸಾಮರ್ಥ್ಯದಿಂದ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂದು ತಿಳಿಸಿದರು.

ದೆಹಲಿ, ಆ.8: “ಚಿಪ್‌ನಿಂದ ಹಿಡಿದು ಶಿಪ್‌ವರೆಗೆ (Chip to Ship) ಎಲ್ಲವೂ ಇಲ್ಲೇ, ನಿಮ್ಮದೇ ಕೈಗಳಿಂದ ತಯಾರಾಗಲಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವಶಕ್ತಿ ಹಾಗೂ ತಂತ್ರಜ್ಞರನ್ನು ಉದ್ದೇಶಿಸಿ ಅತ್ಯಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಐಐಟಿ ನವದೆಹಲಿಯ ವಾರ್ಷಿಕ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಯುವಜನತೆ ಮಾಡುತ್ತಿರುವ ಅಭೂತಪೂರ್ವ ಆವಿಷ್ಕಾರಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸಣ್ಣ ಕಂಪ್ಯೂಟರ್ ಚಿಪ್‌ನಿಂದ ಹಿಡಿದು ಬೃಹತ್ ಹಡಗುಗಳು ಮತ್ತು ಯುದ್ಧನೌಕೆಗಳವರೆಗೆ ಪ್ರತಿಯೊಂದನ್ನೂ ಭಾರತೀಯ ಯುವಕರೇ ಸ್ವತಃ ತಯಾರಿಸುವ ದಿನಗಳು ಬಂದಿವೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು. ದೇಶದ ಯುವ ಪೀಳಿಗೆ ಸಂಪೂರ್ಣ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ತಂತ್ರಜ್ಞಾನ ಹಾಗೂ ಸೆಮಿಕಂಡಕ್ಟರ್ ರಂಗದಲ್ಲಿ ದೇಶವು ಸ್ವಾವಲಂಬನೆಯತ್ತ ಧಾವಿಸುತ್ತಿದ್ದು, ಯುವ ಆವಿಷ್ಕಾರಕರು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಎತ್ತಿಹಿಡಿಯುತ್ತಿದ್ದಾರೆ ಎಂದು ಪ್ರಶಂಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Aug 08, 2026 05:31 PM

Follow Us