AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TNPL 2026: 40 ಎಸೆತಗಳಲ್ಲಿ ಅತಿ ವೇಗದ ಶತಕ; 9 ವರ್ಷಗಳ ಹಳೆಯ ದಾಖಲೆ ಉಡೀಸ್

TNPL 2026:ಟಿಎನ್‌ಪಿಎಲ್ 10ನೇ ಸೀಸನ್‌ನ ರೋಚಕ ಪಂದ್ಯದಲ್ಲಿ ಮಧುರೈ ಪ್ಯಾಂಥರ್ಸ್ ಕೋವೈ ಕಿಂಗ್ಸ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತು. ಎನ್.ಎಸ್. ಚತುರ್ವೇದ್ ಕೇವಲ 40 ಎಸೆತಗಳಲ್ಲಿ ಸಿಡಿಸಿದ ಸ್ಫೋಟಕ ಶತಕ (121 ರನ್) ತಂಡಕ್ಕೆ 239 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ನೆರವಾಯಿತು. ಇದು ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯಾಗಿದೆ.

TNPL 2026: 40 ಎಸೆತಗಳಲ್ಲಿ ಅತಿ ವೇಗದ ಶತಕ; 9 ವರ್ಷಗಳ ಹಳೆಯ ದಾಖಲೆ ಉಡೀಸ್
N.s. Chaturved
ಪೃಥ್ವಿಶಂಕರ
|

Updated on:Aug 08, 2026 | 10:57 PM

Share

ತಮಿಳುನಾಡಿನ ಟಿ20 ಲೀಗ್ ಟಿಎನ್‌ಪಿಎಲ್‌ನ (TNPL 2026) 10ನೇ ಸೀಸನ್ ಆಗಸ್ಟ್ 4 ರಿಂದ ಆರಂಭವಾಗಿದೆ. ಇಂದು ಟೂರ್ನಿಯ 7ನೇ ಪಂದ್ಯದಲ್ಲಿ ಕೋವೈ ಕಿಂಗ್ಸ್ ಮತ್ತು ಮಧುರೈ ಪ್ಯಾಂಥರ್ಸ್ (Kovai Kings vs Madurai Panthers) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಒಟ್ಟು 479 ರನ್‌ಗಳು ದಾಖಲಾದವು. ರನ್‌ಗಳ ಮಳೆಗೆ ಸಾಕ್ಷಿಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೋವೈ ಕಿಂಗ್ಸ್ 239 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಮಧುರೈ ಪ್ಯಾಂಥರ್ಸ್ ತಂಡ ಎನ್.ಎಸ್. ಚತುರ್ವೇದ್ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.

4 ವಿಕೆಟ್‌ಗಳ ನಷ್ಟಕ್ಕೆ 239 ರನ್

ದಿಂಡಿಗಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋವೈ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 239 ರನ್ ಗಳಿಸಿತು. ತಂಡದ ಪರ ಬಾಲಸುಬ್ರಮಣ್ಯಂ ಸಚಿನ್ 43 ಎಸೆತಗಳಲ್ಲಿ 84 ರನ್ ಗಳಿಸಿದರೆ, ಆಂಡ್ರೆ ಸಿದ್ಧಾರ್ಥ್ ಕೇವಲ 42 ಎಸೆತಗಳಲ್ಲಿ 87 ರನ್ ಗಳಿಸಿ ಅಜೇಯರಾಗಿ ಆಡಿದರು. ಈ ಅವಧಿಯಲ್ಲಿ ಕೋವೈ 13 ಸಿಕ್ಸರ್‌ಗಳನ್ನು ಬಾರಿಸಿತು. ಇತ್ತ ಬೌಲಿಂಗ್‌ನಲ್ಲಿ ಮಿಂಚಿದ ಗುರ್ಜಪ್ನೀತ್ ಸಿಂಗ್ 2 ವಿಕೆಟ್‌ಗಳನ್ನು ಪಡೆದರು.

40 ಎಸೆತಗಳಲ್ಲಿ ಶತಕ ಸಿಡಿಸಿದ ಚತುರ್ವೇದ್

239 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಮಧುರೈ ಪ್ಯಾಂಥರ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿಯೇ ಮೊದಲ ವಿಕೆಟ್ ಪತನವಾಯಿತು. ಆದರೆ ಮೂರನೇ ಕ್ರಮಾಂಕದಲ್ಲಿ ಬಂದ 35 ವರ್ಷದ ಬ್ಯಾಟ್ಸ್‌ಮನ್ ಎನ್.ಎಸ್. ಚತುರ್ವೇದ್ ಸ್ಫೋಟಕ ಬ್ಯಾಟಿಂಗ್‌ ಮಾಡುವ ಮೂಲಕ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ನಂತರ 40 ಎಸೆತಗಳಲ್ಲಿ ಶತಕ ಸಿಡಿಸಿದರು.

TNPL ನಲ್ಲಿ ವೇಗದ ಶತಕ

13 ನೇ ಓವರ್‌ನಲ್ಲಿ ಅವರು ಔಟಾದಾಗ, ತಂಡದ ಸ್ಕೋರ್ 169 ರನ್‌ಗಳಾಗಿತ್ತು. ಅದರಲ್ಲಿ ಚತುರ್ವೇದ್ ಒಬ್ಬರೇ 121 ರನ್‌ ಕಲೆಹಾಕಿದ್ದರು. ಇದರ ಫಲವಾಗಿ ಮಧುರೈ ಪ್ಯಾಂಥರ್ಸ್ ತಂಡವು ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು, ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ನಿರ್ಮಿಸಿತು. ತಂಡದ ಪರ ಅಬ್ಬರಿಸಿದ ಚತುರ್ವೇದ್ 47 ಎಸೆತಗಳಲ್ಲಿ 15 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳು ಸೇರಿದಂತೆ 121 ರನ್‌ ಬಾರಿಸಿದರು. ಹಾಗೆಯೇ TNPL ನಲ್ಲಿ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಚತುರ್ವೇದ್​ಗೆ ಮೊದಲು, ಈ ದಾಖಲೆ 2017 ರಲ್ಲಿ 46 ಎಸೆತಗಳಲ್ಲಿ ಶತಕ ಬಾರಿಸಿದ್ದ ರೋಹಿತ್ ಅವರ ಹೆಸರಿನಲ್ಲಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:56 pm, Sat, 8 August 26

Follow Us
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ
ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು?
ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು?
ನೂತನ ಸಚಿವ ಕೆ.ಎಸ್. ಬಸವಂತಪ್ಪ ಅಭಯ
ನೂತನ ಸಚಿವ ಕೆ.ಎಸ್. ಬಸವಂತಪ್ಪ ಅಭಯ
‘ಟಾಕ್ಸಿಕ್’ ಟ್ರೈಲರ್​​ಗೆ ಕ್ಷಣಗಣನೆ, ಹೇಗಿದೆ ಸಿದ್ಧತೆ: ವಿಡಿಯೋ ನೋಡಿ
‘ಟಾಕ್ಸಿಕ್’ ಟ್ರೈಲರ್​​ಗೆ ಕ್ಷಣಗಣನೆ, ಹೇಗಿದೆ ಸಿದ್ಧತೆ: ವಿಡಿಯೋ ನೋಡಿ