AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಟ್ರಾವಿಸ್ ಹೆಡ್

Cricket Australia Awards: ಆಗಸ್ಟ್ 7 ರಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಟ್ರಾವಿಸ್ ಹೆಡ್ 2025-26ರ ಆಶಸ್‌ನಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಅಲನ್ ಬಾರ್ಡರ್ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ, ಅವರು ಮಿಚೆಲ್ ಮಾರ್ಷ್ (ವರ್ಷದ ಏಕದಿನ ಆಟಗಾರ) ಮತ್ತು ಟಿಮ್ ಡೇವಿಡ್ (ವರ್ಷದ ಟಿ20 ಆಟಗಾರ) ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಪೃಥ್ವಿಶಂಕರ
|

Updated on: Aug 07, 2026 | 10:51 PM

Share
ಆಗಸ್ಟ್ 7 ರಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವಾರ್ಷಿಕ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ 2025-26 ರ ಆಶಸ್‌ನಲ್ಲಿ ಆರಂಭಿಕ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಹೆಡ್, ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾದ ಕ್ರಿಕೆಟ್‌ನ ಉನ್ನತ ಪುರುಷರ ಪ್ರಶಸ್ತಿಯಾದ ಅಲನ್ ಬಾರ್ಡರ್ ಪದಕವನ್ನು ಗೆದ್ದಿದ್ದಾರೆ.

1 / 5
ಸತತ ಎರಡನೇ ಬಾರಿಗೆ ಈ ಪದಕ ಗೆಲ್ಲುವ ಮೂಲಕ ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್ ಮತ್ತು ಅಲೆಕ್ಸ್ ಕ್ಯಾರಿ ಅವರನ್ನು ಹಿಂದಿಕ್ಕಿದ್ದಾರೆ. ಇದೀಗ ಹೆಡ್, ಒಂದಕ್ಕಿಂತ ಹೆಚ್ಚು ಬಾರಿ ಅಲನ್ ಬಾರ್ಡರ್ ಪದಕವನ್ನು ಗೆದ್ದ ಆರನೇ ಆಸ್ಟ್ರೇಲಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2 / 5
ಹೆಡ್​ಗೂ ಮೊದಲು ರಿಕಿ ಪಾಂಟಿಂಗ್, ಮೈಕೆಲ್ ಕ್ಲಾರ್ಕ್ ಮತ್ತು ಸ್ಟೀವ್ ಸ್ಮಿತ್ ತಲಾ ನಾಲ್ಕು ಬಾರಿ ಈ ಪದಕವನ್ನು ಗೆದ್ದಿದ್ದರೆ, ಡೇವಿಡ್ ವಾರ್ನರ್ ಮೂರು ಬಾರಿ ಮತ್ತು ಶೇನ್ ವ್ಯಾಟ್ಸನ್ ಎರಡು ಬಾರಿ ಪದಕವನ್ನು ಗೆದ್ದಿದ್ದಾರೆ. ಈಗ, ಹೆಡ್ ಈ ದಿಗ್ಗಜರ ಪಟ್ಟಿಗೆ ಸೇರಿದ್ದಾರೆ.

3 / 5
ಎರಡನೇ ಬಾರಿಗೆ ಅಲನ್ ಬಾರ್ಡರ್ ಪದಕವನ್ನು ಗೆದ್ದಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಹೆಡ್, ‘ಸ್ಟಾರ್ಕ್ ಮತ್ತು ಅಲೆಕ್ಸ್ ಕ್ಯಾರಿ ಕೂಡ ಈ ವರ್ಷ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಈ ಪ್ರಶಸ್ತಿಯನ್ನು ಗೆಲ್ಲಬಹುದೆಂದು ನಾನು ಭಾವಿಸಿದ್ದೆ. ಹಾಗಾಗಿ, ನಾನು ಈ ಪದಕ ರೇಸ್​ನಲ್ಲಿ ಇರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ.

4 / 5
ಟ್ರಾವಿಸ್ ಹೆಡ್ ಹೊರತುಪಡಿಸಿ, ಈ ಬಾರಿ ಆಸ್ಟ್ರೇಲಿಯಾ ಪ್ರಶಸ್ತಿಗಳನ್ನು ಗೆದ್ದ ಇತರ ಆಟಗಾರರಲ್ಲಿ ಮಿಚೆಲ್ ಮಾರ್ಷ್ ಸೇರಿದ್ದಾರೆ. ಏಕದಿನ ಮಾದರಿಯಲ್ಲಿ 60 ರ ಸರಾಸರಿಯಲ್ಲಿ 304 ರನ್ ಗಳಿಸಿದ ಮಾರ್ಷ್​ ವರ್ಷದ ಏಕದಿನ ಆಟಗಾರ ಎನಿಸಿಕೊಂಡಿದ್ದರೆ, ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ ಅದ್ಭುತ ಪ್ರದರ್ಶನ ನೀಡಿದ ಟಿಮ್ ಡೇವಿಡ್, 49.37 ಸರಾಸರಿಯಲ್ಲಿ 395 ರನ್ ಗಳಿಸುವ ಮೂಲಕ ಟಿ20 ವರ್ಷದ ಆಟಗಾರ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

5 / 5
Follow Us