ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖಾಸಗಿ ಸ್ಟಿಂಗ್ ಅಪರೇಷನ್ ಕುರಿತು ಸಂಪುಟ ಸಚಿವರಿಗೆ ಸ್ಫೋಟಕ ಮಾಹಿತಿ ನೀಡಿ ಅಲರ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು....ನಿನ್ನೆ ಅಕ್ಟೋಬರ್ 06) ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಪಾಠ ಮಾಡಿದ ಡಿಕೆ ಶಿವಕುಮಾರ್, ಖಾಸಗಿ ಸಂಸ್ಥೆಗಳಿಂದ ಸಚಿವರ ಸ್ಟಿಂಗ್ ಆಪರೇಷನ್ ನಡೀತಿದೆ. ನಿಮ್ಮ ನಡೆ , ನುಡಿ ಎಲ್ಲವೂ ಜಾಗೃತವಾಗಿರಬೇಕು ಎಂದು ಸಚಿವರನ್ನ ಎಚ್ಚರಿಸಿದ್ದಾರೆ.
ಬೆಂಗಳೂರು, (ಅಕ್ಟೋಬರ್ 07): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖಾಸಗಿ ಸ್ಟಿಂಗ್ ಅಪರೇಷನ್ ಕುರಿತು ಸಂಪುಟ ಸಚಿವರಿಗೆ ಸ್ಫೋಟಕ ಮಾಹಿತಿ ನೀಡಿ ಅಲರ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು….ನಿನ್ನೆ ಅಕ್ಟೋಬರ್ 06) ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಪಾಠ ಮಾಡಿದ ಡಿಕೆ ಶಿವಕುಮಾರ್, ಖಾಸಗಿ ಸಂಸ್ಥೆಗಳಿಂದ ಸಚಿವರ ಸ್ಟಿಂಗ್ ಆಪರೇಷನ್ ನಡೀತಿದೆ. ನಿಮ್ಮ ನಡೆ , ನುಡಿ ಎಲ್ಲವೂ ಜಾಗೃತವಾಗಿರಬೇಕು ಎಂದು ಸಚಿವರನ್ನ ಎಚ್ಚರಿಸಿದ್ದಾರೆ.
ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಸಿಎಂ ಈ ಬಗ್ಗೆ ಮಾತಾಡಿದ್ದು, ಸರ್ಕಾರಕ್ಕೆ ಕಪ್ಪು ಮಸಿ ಬಳಿಯಲು ನಾನಾ ರೀತಿಯಲ್ಲಿ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಎಲ್ಲರೂ ಹುಷಾರಾಗಿರಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಫೋನ್ನಲ್ಲಿ ಮಾತಾಡುವಾಗ ಹೆಚ್ಚು ಅಲರ್ಟ್ ಆಗಿರುವಂತೆ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಪಿಎಗಳು, ಪಿಎಸ್ ಗಳು, ಆಪ್ತ ಸಿಬ್ಬಂದಿಗಳಿಗೂ ಎಚ್ಚರಿಕೆಯಿಂದಿರುವಂತೆ ಸೂಚಿಸುವಂತೆ ಸಿಎಂ ಸಲಹೆ ನೀಡಿದ್ದಾರೆ. ಸ್ಟಿಂಗ್ ಅಪರೇಷನ್ ಸುಳಿವು ಪಡೆದ ಸಚಿವರು ಈಗ ಫುಲ್ ಅಲರ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಸ್ಟಿಸಿದೆ.

