- TV9 Kannada Photo gallery Bigg Boss Kannada fame Spandana Somanna announces marriage with Varun Muniraju
ನಾವು ಮದುವೆ ಆಗುತ್ತಿದ್ದೇವೆ: ಭಾವಿ ಪತಿ ಜೊತೆ ಗುಡ್ ನ್ಯೂಸ್ ನೀಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಅವರು ವರುಣ್ ಜೊತೆ ಮದುವೆ ಆಗಲಿದ್ದಾರೆ. ಭಾವಿ ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಸಿಹಿ ಸುದ್ದಿ ತಿಳಿಸಿದ ಸ್ಪಂದನಾ ಸೋಮಣ್ಣ ಮತ್ತು ವರುಣ್ ಅವರಿಗೆ ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
Updated on: Oct 07, 2026 | 7:32 PM

ಕನ್ನಡ ಕಿರುತೆರೆಯ ಖ್ಯಾತ ನಟಿ ಸ್ಪಂದನಾ ಸೋಮಣ್ಣ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಭಾವಿ ಪತಿಯನ್ನು ಅವರು ಪರಿಚಯಿಸಿದ್ದಾರೆ. ಪ್ರಿಯಕರ ವರುಣ್ ಜೊತೆ ಸ್ಪಂದನಾ ಮದುವೆ ನಡೆಯಲಿದೆ.

‘ನಾವು ಮದುವೆಯಾಗುತ್ತಿದೆ! ನಾವಿಬ್ಬರೂ ಕೆಲಸವಿಲ್ಲದೆ, ಹಣವಿಲ್ಲದೆ, ಜೀವನ ನಮ್ಮನ್ನು ಎತ್ತ ಕರೆದುಕೊಂಡು ಹೋಗುತ್ತದೆ ಎಂದು ತಿಳಿಯದೆ ಪರದಾಡುತ್ತಿದ್ದ ಸಮಯದಲ್ಲೂ ಒಬ್ಬರಿಗೊಬ್ಬರು ಜೊತೆಯಾಗಿದ್ದ ಆ ದಿನಗಳು ನನಗೆ ಇಂದಿಗೂ ನೆನಪಿವೆ’ ಎಂದು ಸ್ಪಂದನಾ ಹೇಳಿದ್ದಾರೆ.

‘ನನ್ನ ಆಡಿಷನ್‌ಗಳಿಗೆ ನೀನು ನನ್ನ ಜೊತೆ ಬಂದೆ, ಹೊಸ ವಿಷಯಗಳನ್ನು ಪ್ರಯತ್ನಿಸಲು ನನ್ನನ್ನು ಪ್ರೋತ್ಸಾಹಿಸಿದೆ ಮತ್ತು ನನ್ನ ಮೇಲೆಯೇ ನನಗೆ ಅನುಮಾನ ಬಂದಾಗಲೂ ನನ್ನನ್ನು ಪ್ರತಿಯೊಂದು ಹಂತದಲ್ಲೂ ನಂಬಿದೆ. ಇಷ್ಟು ವರ್ಷಗಳಲ್ಲಿ ನೀನು ನನ್ನ ಶಕ್ತಿ ಮತ್ತು ಅತಿ ದೊಡ್ಡ ಬೆಂಬಲವಾಗಿದ್ದೀಯ’ ಎಂದಿದ್ದಾರೆ ಸ್ಪಂದನಾ.

‘ನಾವಿಬ್ಬರೂ ಜೊತೆಯಾಗಿ ಹಂಚಿಕೊಂಡ ಹಾಗೂ ಬೆಳೆದು ಬಂದ ಈ ಸುಂದರ ಪಯಣದ ನಂತರ, ನಿನ್ನನ್ನು ನನ್ನ ಗಂಡ ಎಂದು ಕರೆಯಲು ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಜೀವನದಲ್ಲಿ ನಾನು ಅತ್ಯಂತ ಸುಲಭವಾಗಿ ಒಪ್ಪಿದ ನಿರ್ಧಾರ ಇದಾಗಿದೆ’ ಎಂದು ಸ್ಪಂದನಾ ಹೇಳಿದ್ದಾರೆ.

‘ನನಗಾಗಿ ಯಾವಾಗಲೂ ಜೊತೆಯಲ್ಲಿ ಇದ್ದಿದ್ದಕ್ಕೆ, ನನ್ನನ್ನು ನಂಬಿದ್ದಕ್ಕೆ ಮತ್ತು ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ನಮ್ಮ ಮುಂದಿನ ಅಧ್ಯಾಯಕ್ಕೆ ಹಾಗೂ ಎಂದೆಂದಿಗೂ ಜೊತೆಯಾಗಿರುವ ಈ ಪಯಣಕ್ಕೆ ಶುಭವಾಗಲಿ’ ಎಂದು ಸ್ಪಂದನಾ ಅವರು ಪೋಸ್ಟ್ ಮಾಡಿದ್ದಾರೆ.

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
Read More



