Premada Oorali
Premada Oorali – ‘ಪ್ರೇಮದ ಊರಲಿ’ ಸೆಪ್ಟೆಂಬರ್ 25, 2026ರಂದು ತೆರೆಗೆ ಬಂದಿರುವ ಒಂದು ಭಾವನಾತ್ಮಕ ಕನ್ನಡ ರೋಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ ಚಿತ್ರವಾಗಿದೆ. ಗ್ರಾಮೀಣ ಹಿನ್ನೆಲೆಯ ಪ್ರೇಮಕಥೆಯ ಜೊತೆಗೆ ಕುಟುಂಬ, ಸ್ನೇಹ ಹಾಗೂ ಮೌಲ್ಯಗಳ ಸುಂದರ ನಿರೂಪಣೆ ಈ ಸಿನಿಮಾದಲ್ಲಿದೆ. ಮನೋಜ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಶ್ರೀ ರಾಮ್ ಮತ್ತು ತಪಸ್ವಿನಿ ಪೂಣಚ್ಚ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ರಂಗಾಯಣ ರಘು, ರಮಿಕಾ ಶಿವು ಹಾಗೂ ಗೋವಿಂದೇಗೌಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರಿಂದ ಸಿಕ್ಕ ಅತ್ಯುತ್ತಮ ಮೌಖಿಕ ಪ್ರಚಾರದಿಂದಾಗಿ ಸಣ್ಣ ಬಜೆಟ್‌ನ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಿನದಿಂದ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡುತ್ತಾ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ.
ಇನ್ನೂ ಹೆಚ್ಚು ಓದಿ‘ಪ್ರೇಮದ ಊರಲಿ’ ಸಿನಿಮಾ ಗೆಲುವಿನ ಬಗ್ಗೆ ನಟ ಶ್ರೀ ರಾಮ್ ಮಾತು
ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿರುವ 'ಪ್ರೇಮದ ಊರಲಿ' ಚಿತ್ರದ ಯಶಸ್ಸಿನ ಬಗ್ಗೆ ನಟ ಶ್ರೀರಾಮ್ ಟಿವಿ9 ಜೊತೆ ಮಾತನಾಡಿದ್ದಾರೆ. ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡುವ ಚಿತ್ರವೇ ನಿಜವಾದ ದೊಡ್ಡ ಸಿನಿಮಾ ಮತ್ತು ಸ್ಮಾರ್ಟ್ ಪ್ರಚಾರವೇ ಈ ಗೆಲುವಿಗೆ ಕಾರಣ ಎಂದು ಅವರು ಹಂಚಿಕೊಂಡಿದ್ದಾರೆ.
- Rajesh Duggumane
- Updated on: Oct 1, 2026
- 3:16 pm
ಪ್ರೇಮದ ಕಥೆಗೆ ಪ್ರೇಕ್ಷಕರು ಫಿದಾ: ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ‘ಪ್ರೇಮದ ಊರಲಿ’ ಸಿನಿಮಾ
ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಆರು ದಿನಗಳಲ್ಲಿ ₹5.37 ಕೋಟಿ ಗಳಿಸಿ ಭಾರಿ ಯಶಸ್ಸು ಕಂಡಿದೆ. ದೈನಂದಿನ ಗಳಿಕೆಯಲ್ಲಿ ನಿರಂತರ ಏರಿಕೆ ಕಾಣುತ್ತಿರುವ ಈ ಚಿತ್ರವು, ಬರುವ ರಜಾದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಲಾಭ ಗಳಿಸುವ ನಿರೀಕ್ಷೆಯಲ್ಲಿದೆ.
- Rajesh Duggumane
- Updated on: Oct 1, 2026
- 1:17 pm
‘ಪ್ರೇಮದ ಊರಲಿ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಛಾವಣಿ ಕುಸಿತ
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮದಿಂದ ಅವಘಡ ಸಂಭವಿಸಿದೆ. ಬೆಂಗಳೂರಿನ ಪೀಣ್ಯದಲ್ಲಿ ಇರುವ ‘ಭಾರತಿ’ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನದ ವೇಳೆ ಮೇಲ್ಛಾವಣಿ ಕುಸಿದು ಬಿದ್ದಿದೆ. ‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರಿಗೆ ಪೆಟ್ಟಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
- Mangala RR
- Updated on: Oct 1, 2026
- 1:18 pm
‘ಪ್ರೇಮದ ಊರಲಿ’ ಸಿನಿಮಾಗೆ ಸಿಕ್ತು ಉತ್ತಮ ಪ್ರತಿಕ್ರಿಯೆ; ಏರಿಕೆ ಕಂಡ ಶೋಗಳ ಸಂಖ್ಯೆ
ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ, ರಂಗಾಯಣ ರಘು ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಪ್ರೇಮದ ಊರಲಿ’ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಆದ್ದರಿಂದ ಈ ಚಿತ್ರಕ್ಕೆ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಫ್ಯಾಮಿಲಿ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಅನೇಕ ಕಡೆಗಳಲ್ಲಿ ಹೌಸ್ಫುಲ್ ಆಗುತ್ತಿದೆ.
- Madan Kumar
- Updated on: Oct 1, 2026
- 1:19 pm
ಚಿತ್ರ ವಿಮರ್ಶೆ: ಹಳ್ಳಿಯ ಪ್ರೇಮಕಥೆ ಇರುವ ಭಾವುಕ ಸಿನಿಮಾ ‘ಪ್ರೇಮದ ಊರಲಿ’
ಶ್ರೀರಾಮ್, ರಂಗಾಯಣ ರಘು, ತಪಸ್ವಿನಿ ಪೂಣಚ್ಚ, ರಮಿಕಾ ಶಿವು, ಇಳಾ ವಿಟ್ಲಾ ಮುಂತಾದವರು ‘ಪ್ರೇಮದ ಊರಲಿ’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸೆಪ್ಟೆಂಬರ್ 25ರಂದು ಈ ಸಿನಿಮಾ ರಿಲೀಸ್ ಆಗಿದೆ. ಕೌಟುಂಬಿಕ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಭಾವುಕ ಕಥೆಯನ್ನು ಈ ಸಿನಿಮಾ ಹೊಂದಿದೆ.
- Madan Kumar
- Updated on: Oct 1, 2026
- 1:20 pm