‘ಪ್ರೇಮದ ಊರಲಿ’ ಶ್ರೀರಾಮ್ ಹೇಳಿಕೆಗೆ ಬೇರೆಯದೇ ಅರ್ಥ; ಸ್ಪಷ್ಟನೆ ಕೊಟ್ಟ ನಟ
'ಪ್ರೇಮದ ಊರಲಿ' ಸಿನಿಮಾ ಗೆಲುವಿನ ಬಳಿಕ ನಟ ಶ್ರೀರಾಮ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಆದರೆ ತಾನು ಯಾರಾರಿಗೂ ಟಾಂಗ್ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಡಾ. ರಾಜ್‌ಕುಮಾರ್ ಮೇಲಿನ ಅಭಿಮಾನದಿಂದ ಆ ಮಾತುಗಳನ್ನಾಡಿದ್ದೇನೆ ಎಂದು ತಿಳಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ.

‘ಪ್ರೇಮದ ಊರಲಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಮೂಲಕ ನಟ ಶ್ರೀರಾಮ್ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಈ ಯಶಸ್ಸಿನ ಬಳಿಕ ಶ್ರೀರಾಮ್ ಸುತ್ತ ವಿವಾದ ಒಂದು ಸುತ್ತಿಕೊಂಡಿದೆ. ಇತ್ತೀಚೆಗೆ ಅವರು ನೀಡಿದ ಹೇಳಿಕೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ, ಅಸಲಿಗೆ ಆ ರೀತಿ ಏನು ಇಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಶ್ರೀರಾಮ್ ‘ಪ್ರೇಮದ ಊರಲಿ’ ಗೆಲುವು ಜನರದ್ದು ಎಂದರು. ‘ಒಂದು ಸಿನಿಮಾ ಗೆದ್ದರೆ ಸಾಲದು, ಹಲವು ಸಿನಿಮಾ ಗೆಲ್ಲಬೇಕು. ನಾವು ಬಂದು ಚಿತ್ರರಂಗ ಎತ್ತಿ ನಿಲ್ಲಿಸಿದ್ದೇವೆ ಎಂಬುದು ತಪ್ಪು. ಅಣ್ಣಾವ್ರ ಕಾಲದಿಂದ ಚಿತ್ರರಂಗ ದೊಡ್ಡ ಹೆಸರು ಮಾಡಿದೆ. ನಾವು ಚಿಕ್ಕದಾಗಿ ಅಳಿಲುಸೇವೆ ಮಾಡುತ್ತಿದ್ದೇವೆ’ ಎಂದು ಶ್ರೀ ರಾಮ್ ಹೇಳಿದ್ದರು. ಸಾಮಾನ್ಯವಾಗಿ ಯಶಸ್ಸು ಸಿಕ್ಕಾಗ ಪ್ರತಿಯೊಬ್ಬರೂ ಸರಳತೆಯಿಂದ ಮಾತನಾಡುತ್ತಾರೆ. ಶ್ರೀರಾಮ್ ಕೂಡ ತಮ್ಮ ಸಿನಿಮಾದ ಯಶಸ್ಸನ್ನು ತಲೆಗೆ ಏರಿಸಿಕೊಳ್ಳದೆ, ಡಾ. ರಾಜ್‌ಕುಮಾರ್ ಅವರಂತಹ ದಿಗ್ಗಜರ ಕೊಡುಗೆಯನ್ನು ಸ್ಮರಿಸಿ ಈ ಮಾತುಗಳನ್ನು ಆಡಿದ್ದರು.
I don’t understand the controversy surrounding this video.
Which part of it is wrong? Which part of it isn’t a fact?
ಯಾರೊಬ್ಬರಿಂದ ಮಾತ್ರ ಚಿತ್ರರಂಗ ಬೆಳೆಯುವುದಿಲ್ಲ ಹಾಗಂತ ತಿಳ್ಕೊಂಡ್ರೆ ಅದು ಮೂರ್ಖತನ
ಮೀಸೆ ತಿರುವಿ ಮೆರೆದೋರೆಲ್ಲ ಏನಾದರು ಅಂತ ಅಣ್ಣಾವ್ರು ಆವತ್ತೇ ಹೇಳಿದ್ದಾರೆ…
Always be grounded! https://t.co/zUtEYK2d6H
— ಅಲ್ಪಸಂಖ್ಯಾತ (@alpasankhyata) November 10, 2026
ಆದರೆ, ಆಗದೇ ಇದ್ದ ಕೆಲವರು ಇದನ್ನು ತಿರುಚಿದ್ದಾರೆ. ಶ್ರೀರಾಮ್ ಅವರು ಬೇರೆಯವರಿಗೆ ಟಾಂಗ್ ಕೊಟ್ಟಿದ್ದಾರೆ ಎಂಬಿತ್ಯಾದಿ ರೀತಿಯಲ್ಲಿ ಬಿಂಬಿಸಲು ಮುಂದಾಗಿದ್ದಾರೆ. ಈ ವಿಷಯ ಶ್ರೀರಾಮ್ ಅವರಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಅಲ್ಲಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಪೂರ್ಣ ವಿಡಿಯೋ ಹಂಚಿಕೊಂಡಿರುವ ಅವರು, ‘ದಯಮಾಡಿ ಒಮ್ಮೆ ಪೂರ್ತಿ ವಿಡಿಯೋ ನೋಡಿ’ ಎಂದು ಕೋರಿದ್ದಾರೆ.
View this post on Instagram
@alpasankhyata He clarified…. https://t.co/R15RkkznCr
— GodisGreat (@Godisgreat01431) November 10, 2026
ಇದನ್ನೂ ಓದಿ: ‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ ಮನೋಜ್
ಅಲ್ಲದೆ, ತಪ್ಪಾಗಿ ಹೆಡ್ಲೈನ್ ಕೊಟ್ಟಿದ್ದ ವಿಡಿಯೋಗೆ ಕಮೆಂಟ್ ಮಾಡಿರುವ ಅವರು, ‘ಯಾರು ಯಾರಿಗೂ ಟಾಂಗ್ ಕೊಟ್ಟಿಲ್ಲ, ಕೊಡಲೂಬಾರದು. ಅದು ಕೇವಲ ನನ್ನ ಬಗ್ಗೆ ಹಾಗೂ ನನ್ನ ಚಿತ್ರದ ಬಗ್ಗೆ ಇದ್ದ ವಿಷಯ ಅಷ್ಟೇ. ಇದು ಪೂರ್ತಿ ವಿಡಿಯೋ ಅಲ್ಲ. ಅಣ್ಣಾವ್ರ ಬಗ್ಗೆ ಇರುವ ಪುಟ್ಟ ಅಭಿಮಾನದ ಮಾತು ಬಿಟ್ಟರೆ ಬೇರೆ ಯಾವುದೇ ಅರ್ಥ ಇಲ್ಲ. ಆದರೂ ಈ ವಿಡಿಯೋ ತುಣುಕು ತಪ್ಪಾಗಿ ಕಂಡಿದ್ದರೆ ಕ್ಷಮೆ ಇರಲಿ’ ಎಂದು ಅವರು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




