‘ಪ್ರೇಮದ ಊರಲಿ’ ಒಟಿಟಿ ರಿಲೀಸ್ ಇನ್ನೂ ಆಗಿಲ್ಲ ಯಾಕೆ? ಉತ್ತರಿಸಿದ ನಿರ್ದೇಶಕ ಮನೋಜ್
ಚಿತ್ರಮಂದಿರಗಳಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆ ಆಗಿ ಒಂದೂವರೆ ತಿಂಗಳು ಕಳೆದಿದೆ. ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿಲ್ಲ. ಯಾಕೆ ತಡವಾಗುತ್ತಿದೆ ಎಂಬುದಕ್ಕೆ ನಿರ್ದೇಶಕ ಮನೋಜ್ ಕುಮಾರ್ ಅವರು ಟಿವಿ9 ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.
ಚಿತ್ರಮಂದಿರಗಳಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆ ಆಗಿ ಒಂದೂವರೆ ತಿಂಗಳು ಕಳೆದಿದೆ. ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿಲ್ಲ. ಯಾಕೆ ತಡವಾಗುತ್ತಿದೆ ಎಂಬುದಕ್ಕೆ ನಿರ್ದೇಶಕ ಮನೋಜ್ ಕುಮಾರ್ ಅವರು ಟಿವಿ9 ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ. ‘ಒಟಿಟಿ ಬಗ್ಗೆ ಮಾತುಕಥೆ ನಡೆಯುತ್ತಿದೆ. ಅದೇ ರೀತಿ, ಚಿತ್ರಮಂದಿರದಲ್ಲೂ ಜನರು ಸಿನಿಮಾ ನೋಡುತ್ತಿದ್ದಾರೆ. ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಬೇಕಾದ ಸಿನಿಮಾ ಇದು. ದೂರದ ಊರುಗಳಿಂದ ಕುಟುಂಬ ಸಮೇತರಾಗಿ ಬಂದ ಜನರು ಟಿಕೆಟ್ ಸಿಗದೇ 2 ದಿನ ಕಾದು ವಾಪಸ್ ಹೋದವರು ಇದ್ದಾರೆ. ಯಾಕೆಂದರೆ, ಎಲ್ಲರಿಗೂ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳೋಕೆ ಆಗಲ್ಲ. ಈಗ ಅವರಿಗೆಲ್ಲ ಟಿಕೆಟ್ ಸಿಗುತ್ತಿದೆ. ಅವರೆಲ್ಲ ಬಂದು ಸಿನಿಮಾ ನೋಡುತ್ತಿದ್ದಾರೆ. ಒಟಿಟಿ ಬಿಡುಗಡೆ ಬಗ್ಗೆ ನಿರ್ಮಾಪಕರೇ ಮಾತನಾಡುತ್ತಾರೆ’ ಎಂದು ಮನೋಜ್ ಕುಮಾರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 08, 2026 08:48 PM
ಹೆಚ್ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ

