OTT platform
ಭಾರತದಲ್ಲಿ ಹಾಗೂ ವಿಶ್ವಾದ್ಯಂತ ಒಟಿಟಿ ಪ್ಲಾಟ್ಫಾರ್ಮ್ಗಳು ಜನಪ್ರಿಯತೆ ಪಡೆದುಕೊಂಡಿದೆ. ಲಾಕ್ಡೌನ್ ಬಳಿಕ ಜನರು ಒಟಿಟಿಯನ್ನು ಹೆಚ್ಚು ಬಳಸಲು ಆರಂಭಿಸಿದರು. ಸಿನಿಮಾ, ಸೀರಿಯಲ್, ಕ್ರೀಡೆ, ಕಾಮಿಡಿ ಶೋ, ನ್ಯೂಸ್ ಸೇರಿದಂತೆ ಅನೇಕ ಕಂಟೆಂಟ್ಗಳನ್ನು ಬಿತ್ತರಿಸುವ ಹಲವು ಜನಪ್ರಿಯ ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿವೆ. ‘ನೆಟ್‌ಫ್ಲಿಕ್ಸ್ ’ ಪ್ರಪಂಚದಾದ್ಯಂತದ ವಿವಿಧ ರೀತಿಯ ಕಂಟೆಂಟ್ ಬಿತ್ತರಿಸುವ ಮೂಲಕ ಹೆಸರುವಾಸಿಯಾಗಿದೆ. ಕೆಲವು ದೊಡ್ಡ ಸಿನಿಮಾಗಳು ಸೇರಿದಂತೆ ಜಾಗತಿಕ ಮತ್ತು ಭಾರತೀಯ ಪೇಕ್ಷಕರು ಮೆಚ್ಚುವಂತಹ ಶೋಗಳ ಪ್ರಸಾರದಿಂದ ‘ಅಮೇಜಾನ್ ಪ್ರೈಂ ವೀಡಿಯೋ’ ಜನಮನ ಗೆದ್ದಿದೆ. ‘ಡಿಸ್ನಿ ಪ್ಲಸ್ ಹಾಟ್‌ಸ್ಟಾರ್’ ಸಿನಿಮಾ ಜೊತೆಗೆ ಕ್ರೀಡೆಗಳ ಪ್ರಸಾರಕ್ಕೆ ಫೇಮಸ್ ಆಗಿದೆ. ವಿವಿಧ ಭಾಷೆಗಳಲ್ಲಿ ವೈವಿಧ್ಯಮಯ ಕಂಟೆಂಟ್ ಪ್ರದರ್ಶನ ಮಾಡುವ ಕಾರಣಕ್ಕೆ ‘ಜೀ5’ ಜನಮನ ಗೆದ್ದಿದೆ. ALTBalaji ಮತ್ತು Voot ಕೂಡ ತಮ್ಮದೇ ಆದ ಭಾರತೀಯ ಕಂಟೆಂಟ್ಗಳ ನಿರ್ಮಾಣ ಮತ್ತು ಪ್ರಸಾರವನ್ನು ಮಾಡುತ್ತಿವೆ. SonyLIV ಒಟಿಟಿ ಕೂಡ ಭಾರತದಲ್ಲಿ ಜನಪ್ರಿಯತೆ ಪಡೆದಿದೆ. ಈ ಪ್ಲಾಟ್ಫಾರ್ಮ್ಗಳು ಭಾರತೀಯ ಪ್ರೇಕ್ಷಕರ ಮನರಂಜನೆಯ ದೊಡ್ಡ ಭಾಗವಾಗಿದೆ.