AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ಅಪಪ್ರಚಾರದಿಂದ ಗೆಲ್ಲುವುದು ಕಷ್ಟ

Daily Horoscope Mach 05: ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ ಗುರುವಾರ ಆಪತ್ತಿನ ಸೂಚನೆ, ಭೋಗದ ವಸ್ತುಗಳ ಖರೀದಿ, ಲಾಭಕ್ಕೆ ಪ್ರಯತ್ನ, ಪ್ರೀತಿಗೆ ಉಡುಗೊರೆ, ಅಪಪ್ರಚಾರ, ನಿರ್ಲಕ್ಷ್ಯಕ್ಕೆ ಬೇಸರ, ಉದ್ಯೋಗದಲ್ಲಿ ತೃಪ್ತಿ ಈ ಎಲ್ಲವೂ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಅಪಪ್ರಚಾರದಿಂದ ಗೆಲ್ಲುವುದು ಕಷ್ಟ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Mar 05, 2026 | 12:55 AM

Share

ಮೇಷ ರಾಶಿ:

ನಿಮ್ಮ ಕೋಪವನ್ನು ಮಾತಿನಿಂದ ಹೊರಹಾಕಲಾರಿರಿ. ಇಂದು ನಿಮ್ಮ ಮಾತುಗಳಿಗೆ ತೂಕವು ಕಡಿಮೆ ಆಗಬಹುದು. ಸ್ಥಾನಕ್ಕಾಗಿ ನೀವು ಎದುರುನೋಡುತ್ತಿದ್ದರೆ ನಿಮಗೆ ಅದು ಸಿಗಬಹುದು. ಕಷ್ಟದ ಸಮಯದಲ್ಲಿ ಆಪ್ತರು ನಿಮ್ಮನ್ನು ಬೆಂಬಲಿಸುತ್ತಾರೆ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ನಿಮ್ಮನ್ನು ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವಿರಿ. ಹೊಸ ವಸ್ತುಗಳು ಖರೀದಿಯಿಂದ ತೃಪ್ತಿ ಸಿಗುವುದು.

ವೃಷಭ ರಾಶಿ:

ಯಾರ ಮಾತೂ ನಿಮಗೆ ಸಾಂತ್ವನವನ್ನು ನೀಡದು. ಹಿರಿಯರ ಮೂಲಕ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ಹಿಂದೆ ಬಾಕಿ ಇರುವ ಹಣವನ್ನು ವಸೂಲಿ ಮಾಡಲಾಗುತ್ತದೆ. ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ಇಂದಿನ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ಯಾರದೋ ಸುದ್ದಿಯನ್ನು ಮತ್ಯಾರಿಗೋ ಹೇಳುತ್ತ ಸಮಯವನ್ನು ಕಳೆಯುವಿರಿ. ಕಲಾವಿದರು ಸನ್ಮಾನಕ್ಕೆ ಭಾಜರಾಗುವರು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ.

ಮಿಥುನ ರಾಶಿ:

ಹೂಡಿಕೆಗಳತ್ತ ಸರಿಯಾಗಿ ಗಮನ ಹರಿಸಿ. ಆರ್ಥಿಕ ನೆರವು ಸಾಕಾಗುವುದಿಲ್ಲ. ನಿಮ್ಮ ಆದ್ಯತೆಗಳನ್ನು ಮೃದುವಾಗಿ ವ್ಯಕ್ತಪಡಿಸಿ. ಕೆಲಸಗಳು ಆತುರದಿಂದ ನಡೆಯುತ್ತಿವೆ. ಸಂಗತಿಯನ್ನು ಹಣಕ್ಕಾಗಿ ಪೀಡಿಸುವಿರಿ.ಇಷ್ಟವಿಲ್ಲದ ಕಡೆ ಬಲವಂತವಾಗಿ ಹೋಗುವಿರಿ. ಆಪ್ತರು ನೀಡಿದ ವಸ್ತುವನ್ನು ಕಳೆದುಕೊಳ್ಳುವಿರಿ. ಅತಿಥಿಗಳ ಆಗಮನದಿಂದ ಸಂತೋಷವಾಗುವುದು. ನಿಮ್ಮ ಬಲದ ಪ್ರದರ್ಶನವನ್ನು ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ವಿಚಾರಕ್ಕೂ ಕಲಹ ಮಾಡಿಕೊಳ್ಳುವಿರಿ. ಹೂಡಿಕೆಯ ಬಗ್ಗೆ ಸರಿಯಾದ ನಿರ್ಧಾರವಿರಲಿ.

ಕರ್ಕಾಟಕ ರಾಶಿ:

ನಿರೀಕ್ಷೆಗಳು ನಿಜವಾಗುತ್ತವೆ. ಕೆಲಸಗಳು ಸ್ಥಿರವಾಗಿ ಪೂರ್ಣಗೊಳ್ಳುತ್ತವೆ. ದಾಖಲೆಗಳಲ್ಲಿನ ಬದಲಾವಣೆಗಳು ಅನುಕೂಲಕರವಾಗಿರುತ್ತವೆ. ಎಲ್ಲರೊಂದಿಗೆ ಮಿತವಾಗಿ ಮಾತನಾಡಿ. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ನಿಮ್ಮ ಮೌನವು ಅಸಹಾಯಕತೆಯನ್ನು ತೋರಿಸಬಹುದು. ನಿಮ್ಮ ಕಾರ್ಯದಲ್ಲಿ ಉದ್ದೇಶವು ಸ್ಪಷ್ಟವಾಗಿ ಇರಲಿ. ಕೆಲಸವು ಪೂರ್ಣವಾಗದೇ ಒದ್ದಾಡಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುವಿರಿ.

ಸಿಂಹ ರಾಶಿ:

ಪ್ರೀತಿಪಾತ್ರರ ಆಗಮನವು ಸಂತೋಷವನ್ನು ತರುತ್ತದೆ. ಅವಕಾಶಗಳನ್ನು ತಕ್ಷಣವೇ ಬಳಸಿಕೊಳ್ಳಿ. ನಿಮ್ಮ ಮಾತನ್ನು ನಿಯಂತ್ರಿಸಿ. ಅಸಹಜ ವರ್ತನೆಯ ಬಗ್ಗೆ ನೀವು ಏನನ್ನೂ ಹೇಳುವುದು ಬೇಡ. ಮಕ್ಕಳಿಂದ ನಿಮಗೆ ಆರ್ಥಿಕ ನೆರವು ಸಿಗುವುದು. ನೀವು ಇಂದು ವಿದ್ಯುತ್ ಉಪಕರಣದ ಮಾರಟಗಾರರಾಇದ್ದರೆ ಅಧಿಕ ಲಾಭವು ಸಿಗುವುದು. ಸಾರ್ವಜನಿಕವಾಗಿ ಹೆಚ್ಚು ಪ್ರಭಾವ ಉಳ್ಳವರಾಗಿದ್ದು ಗೌರವವು ಸಿಗಲಿದೆ. ಬೆಳವಣಿಗೆಗೆ ಅವಕಾಶಗಳು ಸಿಕ್ಕರೂ ಅದು ನಿಮಗೆ ಸರಿಯಾಗದು.

ಕನ್ಯಾ ರಾಶಿ:

ನೀವು ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುತ್ತೀರಿ. ಕೈಗೊಂಡ ಕೆಲಸಗಳು ಸಕ್ರಿಯವಾಗಿ ಮುಂದುವರಿಯುತ್ತವೆ. ಸಂಬಂಧಿಕರು ಮತ್ತು ಸ್ನೇಹಿತರ ಭೇಟಿ ಸಾಧ್ಯತೆ. ನಿಮ್ಮ ಬಗ್ಗೆ ಯಾವುದನ್ನೂ ಹೇಳಿಕೊಳ್ಳದೇ ಮಾಡುವ ಕಾರ್ಯದ ಕಡೆ ಗಮನ ಇರಲಿ. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿವಾರಿಸಬಹುದು. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಕೆಲವು ಭಾಗವನ್ನು ನೀವು ದಾನ ಮಾಡುವಿರಿ.

ತುಲಾ ರಾಶಿ:

ನಿಮ್ಮ ಅಮೂಲ್ಯ ದಾಖಲೆಗಳ ವಿಚಾರದಲ್ಲಿ ಜಾಗರೂಕರಾಗಿರಿ. ಟೀಕೆಗಳನ್ನು ನಿರ್ಲಕ್ಷಿಸಿ. ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೀರಿ. ನಿಮಗೆ ಬೇಡದ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ಯಾರಿಂದಲೋ ಪ್ರೇರಿತರಾಗಿ ಆಸ್ತಿಯನ್ನು ಪಡೆಯುವ ಹುನ್ನಾರ ನಡೆಸುವಿರಿ. ಕೆಲಸಗಳಲ್ಲಿ ನೀವು ಜಯವನ್ನು ಸಾಧಿಸಬಹುದು. ಸೊಂಟದ ನೋವು ಅಧಿಕವಾಗಿ ಕಾಡಬಹುದು. ಸಂಗಾತಿಯ ಮೇಲೆ ಯಾರದೋ ಕಾರಣಕ್ಕೆ ಮುನಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ:

ನಿಮ್ಮ ಆಲೋಚನೆಗಳಲ್ಲಿ ಬದಲಾವಣೆ ಉಂಟಾಗಲಿದೆ. ನಿಮ್ಮ ವೃತ್ತಿಯಲ್ಲಿ ಭವಿಷ್ಯವನ್ನು ಹೆಚ್ಚಿಸಲು ನಿಮ್ಮ ಪರಿಣತಿಯನ್ನು ಬಳಸಿ. ಇಂದು ನಿಮ್ಮ ಮಾರ್ಗದರ್ಶನವನ್ನು ಕೇಳಿಕೊಂಡು ಬರಬಹುದು. ಇಂದಿನ ನಿಮ್ಮ ಕೆಲಸಗಳು ಬಹಳ ವಿಳಂಬವಾಗುದು. ಶಿಸ್ತಿನ ವ್ಯವಹಾರವನ್ನು ಬಿಡದೇ ಮುಂದುವರಿಸುವಿರಿ. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳಿ. ಹೊಸ ವಸ್ತುವಿಗೆ ಧನವನ್ನು ವ್ಯಯಮಾಡುವುದು ಬೇಡ.

ಧನು ರಾಶಿ:

ಮೇಲಾಧಿಕಾರಿಗಳಿಗೆ ನಿಮ್ಮ ಮೇಲೆ ಕೆಲವು ತಪ್ಪುಕಲ್ಪನೆ ಇರಬಹುದು. ಯಾವುದೇ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಸೂಕ್ತವಲ್ಲ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯವು ಅರಿವಿಗೆ ಬರಬಹುದು. ಬೇಡದ ಆಲೋಚನೆಯನ್ನು ದೂರಮಾಡಿಕೊಳ್ಳಿ. ಉದ್ಯೋಗವನ್ನು ಬಿಡುವ ಸಂದರ್ಭವೂ ಬರಬಹುದು. ಮನೋ ವ್ಯಥೆಯನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ಸಂಬಂಧಗಳಲ್ಲಿ ವಿಷಮತೆ ಕಾಣಿಸಿಕೊಂಡೀತು. ನಿಮ್ಮ ಗುರಿಯನ್ನು ತಲುಪಲು ಬೇರೆ ಮಾರ್ಗವನ್ನೂ ಅನುಸರಿಸುವಿರಿ.

ಮಕರ ರಾಶಿ:

ಸರಿಯಾದ ಹೊಂದಾಣಿಕೆಯನ್ನು ಮಾಡಿಕೊಳ್ಳುವಿರಿ. ಆತ್ಮೀಯ ಸಂಬಂಧವು ಕಾರಣಾಂತರಗಳಿಂದ ಕಡಿತವಾಗಿದ್ದು ನೀವು ಪುನಃ ಸ್ಥಾಪಿಸಿಕೊಂಡು ಎಂದಿನಂತೆ ನೆಮ್ಮದಿಯಿಂದ ಇರುವಿರಿ. ಯಾರಾದರೂ ರಾಜಕೀಯ ವ್ಯಕ್ತಿಗಳ ಸಂಪರ್ಕವನ್ನು ನೀವು ಮಾಡುವಿರಿ. ದೈವದ ಮೇಲೆ ಭಕ್ತಿ ಉಂಟಾದೀತು. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಂಡು ಕೂಗಾಡಬಹುದು. ನಿಮ್ಮ ಅಭಿಪ್ರಾಯವನ್ನು ಹೇಳಬೇಕಾದಲ್ಲಿ ಹೇಳುವ ರೀತಿಯಲ್ಲಿ ಹೇಳಿ.

ಕುಂಭ ರಾಶಿ:

ಪ್ರೀತಿಪಾತ್ರರಿಗೆ ಆರ್ಥಿಕ ನೆರವು ನೀಡುತ್ತೀರಿ. ನಿಮ್ಮ ಒಳಗೊಳ್ಳುವಿಕೆಯಿಂದ ಸಮಸ್ಯೆ ಸಕಾರಾತ್ಮಕವಾಗುತ್ತದೆ. ಸ್ನೇಹ ಸಂಬಂಧ ಬಲಗೊಳ್ಳುತ್ತವೆ. ಸಂಗಾತಿಯ ಬೇಸರವನ್ನು ಮಾತುಗಳಿಂದ ಸರಿಮಾಡುವಿರಿ. ಅಮೂಲ್ಯ ವಸ್ತುವಿನ ಲಾಭದಿಂದ ಸಂತಸವಾಗಲಿದೆ. ಬಹಳ ದಿನಗಳಿಂದ ನಡೆಯುತ್ತಿದ್ದ ನ್ಯಾಯಾಲಯದ ವ್ಯವಹಾರವನ್ನು ಮುಕ್ತಾಯ ಮಾಡಿಕೊಳ್ಳುವಿರಿ. ಮಿತ್ರರೆಂದು ಹೇಳಿಕೊಂಡು ಯಾರಾದರೂ ಬರಬಹುದು. ಸರಿಯಾದ ಮೂಲದಿಂದ ಬಂದ ಸುದ್ದಿ ಮಾತ್ರ ನಂಬಲು ಅರ್ಹವಾಗಿರುವುದು.

ಮೀನ ರಾಶಿ:

ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹೂಡಿಕೆಗಳು ಹೆಚ್ಚಾಗುವುದಿಲ್ಲ. ಬೇಜವಾಬ್ದಾರಿ ನಿರ್ಧಾರಗಳು ಹಾನಿಯನ್ನುಂಟುಮಾಡಬಹುದು. ಅನುಭವಿ ಜನರ ಸಲಹೆಯನ್ನು ಅನುಸರಿಸಿ. ಎದರುರಾಗು ಅಡ್ಡಿ, ಆತಂಕಗಳನ್ನು ನೀವು ಅನಾಯಾಸವಾಗಿ ದೂರ ಸರಿಸುವಿರಿ. ನಿಮ್ಮ ಇಂದಿನ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ. ಇಂದು ಸರ್ಕಾರಿ ಕೆಲಸಕ್ಕೆ ಓಡಾಟ ಮಾಡುವಿರಿ. ನಿಮಗೆ ಕೆಲಸದಲ್ಲಿ ಅನೇಕ ಗೊಂದಲಗಳು ಇರಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಶೂಲಿ, ಕರಣ : ಗರಜ, ಸೂರ್ಯೋದಯ – 06 – 39 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:05 – 15:34, ಯಮಗಂಡ ಕಾಲ 06:40 – 08:09, ಗುಳಿಕ ಕಾಲ 09:38 – 11:07

-ಲೋಹಿತ ಹೆಬ್ಬಾರ್ – 8762924271 (what’s app only)

Follow Us