AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು

ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು

TV9 Web
| Edited By: |

Updated on: Jul 29, 2026 | 8:16 PM

Share

ಮುಖ್ಯಾಂಶಗಳು

  • ಯಾದಗಿರಿಯ ಹಲವು ಕಡೆ ಸುರಿದ ಭಾರೀ ಮಳೆ‌
  • ಮಳೆರಾಯನ ಆಗಮನಕ್ಕೆ ರೈತರ ಮೊಗದಲ್ಲಿ ಮಂದಹಾಸ
  • ಮಳೆ ಅಬ್ಬರಕ್ಕೆ ನಗರದ ಕೆಲವೆಡೆ ರಸ್ತೆಗಳು ಜಲಾವೃತ

ಯಾದಗಿರಿ ಜಿಲ್ಲೆಯಲ್ಲಿ ಕಳೆದ ಒಂದೂವರೆ ಗಂಟೆಯಿಂದ ಭಾರೀ ಮಳೆ ಸುರಿದಿದೆ. ಬರದಿಂದ ತತ್ತರಿಸಿದ್ದ ರೈತರಿಗೆ ಇದು ದೊಡ್ಡ ನಿರಾಳತೆ ತಂದಿದೆ, ಅವರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಒಣಗುವ ಹಂತದಲ್ಲಿದ್ದ ಬೆಳೆಗಳಿಗೆ ಜೀವಕಳೆ ಬಂದಿದೆ. ಆದರೆ, ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಾರ್ವಜನಿಕರಿಗೆ ತೊಂದರೆಯಾಗಿದೆ.

ಯಾದಗಿರಿ, ಜುಲೈ 29: ಯಾದಗಿರಿ ನಗರ ಸೇರಿದಂತೆ ಹಲವು ಕಡೆ ಒಂದೂವರೆ ಗಂಟೆ ಮಳೆ ಅಬ್ಬರಿಸಿದೆ. ಆ ಮೂಲಕ ಬರದಿಂದ ಬಳಲಿ ಬೆಂಡಾಗಿದ್ದ ರೈತರಿಗೆ ಕೊಂಚ ನಿರಾಳತೆ ಮೂಡಿದೆ. ಒಣಗುವ ಹಂತಕ್ಕೆ ಬಂದಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದ್ದು, ಇತ್ತ ರೈತರ ಮೊಗದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ದಾನೆ. ಇನ್ನು ಮಳೆ ಅಬ್ಬರದಿಂದ ನಗರದ ಕೆಲ ಕಡೆ ರಸ್ತೆಗಳು ಜಲಾವೃತಗೊಂಡವು. ಯಾದಗಿರಿಯ ಕೇಂದ್ರ ಬಸ್ ನಿಲ್ದಾಣದ ಬಳಿ, ರೈಲ್ವೆ ನಿಲ್ದಾಣ ಹಾಗೂ ಗಾಂಧಿ ಸರ್ಕಲ್​ನಲ್ಲಿ ರಸ್ತೆಗಳು ಕರೆಯಂತಾಗಿದ್ದವು. ಮಳೆ ಹೊಡೆತದಿಂದ ವಾಹನ ಸವಾರರ ಪರದಾಡಿದರು. ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿದ್ದರೆ, ಇತ್ತ ರೈತಾಪಿ ವರ್ಗಕ್ಕೆ ಸಂತಸ ಮನೆ ಮಾಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us