ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಪಾಪರಾಜಿಗಳ ಅತಿರೇಕದ ವರ್ತನೆ ಬಗ್ಗೆ ಕನ್ನಡ ಚಿತ್ರರಂಗ ಸಿಟ್ಟಾಗಿದೆ. ನಟಿಯರ ದೇಹದ ಭಾಗಗಳನ್ನು ಅಸಭ್ಯ ಕೋನದಿಂದ ಚಿತ್ರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕುವವರಿಗೆ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಹಲವು ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದಾರೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಪಾಪರಾಜಿಗಳ ವರ್ತನೆ ವಿರುದ್ಧ ಕನ್ನಡ ಚಿತ್ರರಂಗ (Kannada Film Industry) ಗರಂ ಆಗಿದೆ. ನಟಿಯರ ದೇಹದ ಭಾಗಗಳನ್ನು ಅಸಭ್ಯ ರೀತಿಯಲ್ಲಿ ಚಿತ್ರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವವರಿಗೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದಾರೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಕಲಾವಿದರನ್ನು ಗೌರವದಿಂದ ಕಾಣಬೇಕು. ಚೌಕಟ್ಟನ್ನು ಮೀರಿ ಯಾರೂ ಹೊರಗೆ ಬರಬಾರದು. ಸೋಶಿಯಲ್ ಮೀಡಿಯಾ ಅತಿರೇಕಕ್ಕೆ ಹೋಗುತ್ತಿದೆ. ಪ್ರತಿಯೊಬ್ಬರಿಗೂ ಮಾನ, ಮರ್ಯಾದೆ, ಗೌರವ ಇರುತ್ತದೆ. ಅದನ್ನು ಅವರು ಗಳಿಸಿರುತ್ತಾರೆ, ಕೊಂಡುಕೊಂಡಿರಲ್ಲ. ಅದನ್ನು ಗಳಿಸಲು ಪರಿಶ್ರಮ, ತ್ಯಾಗ ಇರುತ್ತದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಎಸ್. ನಾರಾಯಣ್ (S Narayan) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್ಡಿಕೆ
ಕಬ್ಬು ಬೆಳೆಗೆ ಎಂಎಸ್ಪಿ ನಿಗದಿ ಬಗ್ಗೆ ರೈತರಿಗೆ ಗುಡ್ನ್ಯೂಸ್ ಕೊಟ್ಟ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ದಸರಾ, ದೀಪಾವಳಿ ಹಿನ್ನೆಲೆ: ಸ್ವೀಟ್ ಶಾಪ್ಗಳ ಮೇಲೆ ದಾಳಿ ಮುಂದುವರಿಕೆ

