AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇಷ 2016: ಪ್ರಮೋದ್ ಶೆಟ್ಟಿ ಹೊಸ ಸಿನಿಮಾ ಮಾರ್ಚ್ 6ರಂದು ತೆರೆಗೆ

ಪೊಲೀಸ್ ಇಲಾಖೆಯ ಕಥೆ ಹೊಂದಿರುವ ‘ಶೇಷ 2016’ ಸಿನಿಮಾಗೆ ಪ್ರದೀಪ್ ಅರಸೀಕೆರೆ ಅವರ ನಿರ್ದೇಶನವಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳಿಗೆ ಬೇಡಿಕೆ ಬಂದಿದೆ ಎಂಬುದು ವಿಶೇಷ. ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಸಿದ್ಧವಾಗಿದ್ದು, ಇನ್ನುಳಿದ ಭಾಷೆಗಳಿಗೆ ಡಬ್ ಆಗಲಿದೆ.

ಶೇಷ 2016: ಪ್ರಮೋದ್ ಶೆಟ್ಟಿ ಹೊಸ ಸಿನಿಮಾ ಮಾರ್ಚ್ 6ರಂದು ತೆರೆಗೆ
Shesha 2016 Movie Team
ಮದನ್​ ಕುಮಾರ್​
|

Updated on: Feb 16, 2026 | 7:45 PM

Share

ಪ್ರಮೋದ್ ಶೆಟ್ಟಿ (Pramod Shetty) ಅವರಿಗೆ ಪೊಲೀಸ್ ಪಾತ್ರಗಳು ಹೆಚ್ಚಾಗಿ ಇರುತ್ತವೆ. ‘ಶೇಷ 2016’ (Shesha 2016) ಸಿನಿಮಾದಲ್ಲಿ ಕೂಡ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 6ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನವೇ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. ಒಟಿಟಿ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಪಡೆದುಕೊಂಡಿವೆ. ಈ ಖುಷಿಯ ವಿಷಯ ತಿಳಿಸಲು ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಲಾಯಿತು.

‘ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್’ ಮೂಲಕ ಉಮೇಶ್ ಗೌಡ , ಮಂಜುವಾಣಿ ವಿ.ಎಸ್. ಮತ್ತು ವೀಣಾ ಎಸ್. ಅವರು ‘ಶೇಷ 2016’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರದೀಪ್ ಅರಸೀಕೆರೆ ಅವರು ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಜಾನ್ ಕೈಪ್ಪಲ್ಲಿ, ಸಿದ್ಲಿಂಗು ಶ್ರೀಧರ್, ದೇವರಾಜ್, ಸಾಯಿ ಭೈರವ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರ್.ಎಸ್. ಆನಂದ್ ಕುಮಾರ್ ಅವರ ಛಾಯಾಗ್ರಹಣವಿದೆ.

ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕಥೆ ಆದ್ದರಿಂದ ‘ಶೇಷ 2016’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಎಸಿಪಿ ಗಣೇಶ್ ಮತ್ತು ಮೋಹನ್ ಕುಮಾರ್ ದಾನಪ್ಪ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ‘ಜನರಲ್ಲಿ ಜಾಗೃತಿ ಮೂಡಿಸುವ ಸಮಾಜಕ್ಕೆ ಉತ್ತಮ ಚಿತ್ರಗಳನ್ನು ಕೊಡುವ ಕೆಲಸ ಆಗಬೇಕು’ ಎಂದು ಎಸಿಪಿ ಗಣೇಶ್ ಅವರು ಹೇಳಿದರು. ‘ಕನ್ನಡದ ಉತ್ತಮ , ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾ ನೋಡಿ ಪ್ರೋತ್ಸಾಹಿಸಿ’ ಎಂದು ಮೋಹನ್ ಕುಮಾರ್ ದಾನಪ್ಪ ಅವರು ಹೇಳಿದರು.

ಒಟಿಟಿ ರೈಟ್ಸ್ ಮಾರಾಟ ಆಗಿದ್ದಕ್ಕೆ ಪ್ರಮೋದ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. ‘ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಮಲಯಾಳಂ ಡಬ್ ಕೂಡ ನಾನೇ ಮಾಡಿದ್ದೇನೆ. ಇದು ಸ್ಟೇಷನ್ ಸುತ್ತ ನಡೆಯುವ ಘಟನೆ. ಒಂದು ರೀತಿ ಬೆಲ್ ಬಾಟಮ್ ಸಿನಿಮಾ ರೀತಿಯ ಫೀಲ್ ಕೊಡುತ್ತದೆ’ ಎಂದು ಪ್ರಮೋದ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ರಿಷಬ್ ಶೆಟ್ಟಿ​ ಹೀಗೆ ಇರೋದು ಏಕೆ? ವಿವರಿಸಿದ ಪ್ರಮೋದ್ ಶೆಟ್ಟಿ

ನಿರ್ದೇಶಕ ಪ್ರದೀಪ್ ಅರಸೀಕೆರೆ ಅವರು ಮಾತನಾಡಿ, ‘2016ರ ಕಾಲದ ಘಟ್ಟದಲ್ಲಿ ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ನಡೆಯುವಂತಹ ಕಾಲ್ಪನಿಕ ಘಟನೆಗಳ ಸುತ್ತ ಹೆಣೆದ ಕಥೆ ಈ ಸಿನಿಮಾದಲ್ಲಿ ಇದೆ. ಹಗಲು ರಾತ್ರಿ ಎನ್ನದೇ ಸುಮಾರು 35 ದಿನ ಶೂಟಿಂಗ್ ಮಾಡಿದ್ದೇವೆ. ಮಾರ್ಚ್ 6ರಂದು ನಮ್ಮ ಸಿನಿಮಾ ಬಿಡುಗಡೆ ಆಗುತ್ತದೆ’ ಎಂದು ಹೇಳಿದರು. ಇದು ಅವರ ಮೊದಲ ಸಿನಿಮಾ. ಕರ್ನಾಟಕ ಮತ್ತು ಕೇರಳದ ಹಲವು ಭಾಗಗಳಲ್ಲಿ ಪ್ರಚಾರ ಮಾಡಲು ನಿರ್ಮಾಪಕ ಉಮೇಶ್ ಗೌಡ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್
ಭಾರತದ ವಿರುದ್ಧ ಸೋಲು; ಪಾಕಿಸ್ತಾನದಲ್ಲಿ ಟಿವಿಗಳು ಪುಡಿಪುಡಿ
ಭಾರತದ ವಿರುದ್ಧ ಸೋಲು; ಪಾಕಿಸ್ತಾನದಲ್ಲಿ ಟಿವಿಗಳು ಪುಡಿಪುಡಿ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್
ನಾಪತ್ತೆಯಾದ ಮಹಿಳೆ ಪರಪುರುಷನ ಮನೆಯಲ್ಲಿ ಪತ್ತೆ: ಇಲ್ಲಿದೆ Exclusive ದೃಶ್ಯ
ನಾಪತ್ತೆಯಾದ ಮಹಿಳೆ ಪರಪುರುಷನ ಮನೆಯಲ್ಲಿ ಪತ್ತೆ: ಇಲ್ಲಿದೆ Exclusive ದೃಶ್ಯ
ರಿಂಕು ಸಿಂಗ್ ಕೈಯಲ್ಲಿ ಬೌಲಿಂಗ್ ಮಾಡಿಸಿ ನಮ್ಮ ಮರ್ಯಾದೆಯನ್ನೇ ತೆಗೆದುಬಿಟ್ರು
ರಿಂಕು ಸಿಂಗ್ ಕೈಯಲ್ಲಿ ಬೌಲಿಂಗ್ ಮಾಡಿಸಿ ನಮ್ಮ ಮರ್ಯಾದೆಯನ್ನೇ ತೆಗೆದುಬಿಟ್ರು