AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೇಮದ ಊರಲಿ’ 140 ಕೋಟಿ ಕಲೆಕ್ಷನ್; ಲಾಭದಲ್ಲಿ ನಟ ಶ್ರೀರಾಮ್​ಗೆ ಸಿಕ್ಕ ಹಣ ಎಷ್ಟು?

ಪ್ರೇಮದ ಊರಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 140 ಕೋಟಿ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಆಗಿದೆ. ಒಟಿಟಿ ಮತ್ತು ಟಿವಿ ಹಕ್ಕಿನಿಂದಲೂ ಭಾರಿ ಮೊತ್ತ ಬಂದಿದೆ. ಲಾಭದಲ್ಲಿ ಶೇರು ಸಿಕ್ತಾ ಎಂಬ ಪ್ರಶ್ನೆಗೆ ನಟ ಶ್ರೀರಾಮ್ ಪ್ರತಿಕ್ರಿಯಿಸಿ, ಜನರ ಪ್ರೀತಿಯೇ ದೊಡ್ಡ ಸಂಪತ್ತು ಹಾಗೂ ನಿರ್ಮಾಪಕರ ಕಷ್ಟಕ್ಕೆ ಪ್ರತಿಫಲ ಸಿಗಲಿ ಎಂದಿದ್ದಾರೆ.

‘ಪ್ರೇಮದ ಊರಲಿ’ 140 ಕೋಟಿ ಕಲೆಕ್ಷನ್; ಲಾಭದಲ್ಲಿ ನಟ ಶ್ರೀರಾಮ್​ಗೆ ಸಿಕ್ಕ ಹಣ ಎಷ್ಟು?
ಪ್ರೇಮದ ಊರಲಿ
ರಾಜೇಶ್ ದುಗ್ಗುಮನೆ
|

Updated on: Nov 27, 2026 | 10:36 AM

Share

ಮುಖ್ಯಾಂಶಗಳು

  • ಬಾಕ್ಸ್ ಆಫೀಸ್‌ನಲ್ಲಿ 140 ಕೋಟಿ ಬಾಚಿದ ‘ಪ್ರೇಮದ ಊರಲಿ’
  • ಲಾಭದ ಶೇರು ಬೇಡ, ಜನರ ಪ್ರೀತಿಯೇ ದೊಡ್ಡ ಲೆಕ್ಕ ಎಂದ ಶ್ರೀರಾಮ್
  • ಕಷ್ಟಪಟ್ಟು ಸಿನಿಮಾ ಮಾಡಿದ ನಿರ್ಮಾಪಕರ ಶ್ರಮ ಸ್ಮರಿಸಿದ ನಾಯಕ

‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡು ಸೂಪರ್ ಹಿಟ್ ಎನಿಸಿಕೊಂಡಿದೆ. ಚಿತ್ರಮಂದಿರಗಳಲ್ಲಿ ಬರೋಬ್ಬರಿ 140 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ಹೊಸ ದಾಖಲೆ ಬರೆದಿದೆ. ಇದರ ಜೊತೆಗೆ ಒಟಿಟಿ ಹಾಗೂ ಟಿವಿ ಪ್ರಸಾರ ಹಕ್ಕುಗಳಿಂದಲೂ ಚಿತ್ರಕ್ಕೆ ದೊಡ್ಡ ಮೊತ್ತದ ಆದಾಯ ಹರಿದುಬಂದಿದೆ. ಇದರಿಂದ ನಿರ್ಮಾಪಕರು ಭರ್ಜರಿ ಲಾಭ ಕಂಡಿದ್ದಾರೆ. ಈ ಲಾಭದ ಬಗ್ಗೆ ನಟ ಶ್ರೀರಾಮ್ ಮಾತನಾಡಿದ್ದಾರೆ.

ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿರುವ ಹಿನ್ನೆಲೆಯಲ್ಲಿ, ನಾಯಕ ನಟ ಶ್ರೀರಾಮ್ ಅವರಿಗೆ ಲಾಭದಲ್ಲಿ ಶೇರು ಸಿಕ್ಕಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ಸಿನಿಮಾಗೆ ಶ್ರೀರಾಮ್ ಅವರಿಗೆ ಸಂಭಾವನೆ (ರೆಮ್ಯುನರೇಷನ್) ರೂಪದಲ್ಲಿ ಫಿಕ್ಸ್ಡ್ ಅಮೌಂಟ್ ಮಾತ್ರ ಸಿಕ್ಕಿತ್ತು ಎನ್ನಲಾಗಿದೆ. ಹೀಗಾಗಿ ಚಿತ್ರದ ಭರ್ಜರಿ ಕಲೆಕ್ಷನ್ ಬಳಿಕ ಅವರಿಗೆ ಹೆಚ್ಚುವರಿ ಪಾಲು ಸಿಕ್ಕಿದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು.

ಈ ಪ್ರಶ್ನೆಗೆ ಶ್ರೀರಾಮ್ ಬಹಳ ಪ್ರಬುದ್ಧವಾಗಿ ಮತ್ತು ಹೃದಯಸ್ಪರ್ಶಿಯಾಗಿ ಉತ್ತರಿಸಿದ್ದಾರೆ. ಲಾಭದ ಶೇರು ಬಗ್ಗೆ ತಾನು ಯೋಚಿಸಿಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಆ ಬಗ್ಗೆ ನಾನು ಯೋಚಿಸಿಲ್ಲ. ಆದರೆ ಜನರ ಪ್ರೀತಿಯಿಂದ ಸಿಕ್ಕ ಲೆಕ್ಕವನ್ನಷ್ಟೇ ನೋಡುತ್ತಿದ್ದೇನೆ. ಅದು ತುಂಬಾ ದೊಡ್ಡ ಮಟ್ಟದಲ್ಲಿ ಸಿಕ್ಕಿದೆ’ ಎಂದು ಅಭಿಮಾನಿಗಳ ಪ್ರೀತಿಯೇ ತಮಗೆ ದೊಡ್ಡ ಸಂಪತ್ತು ಎಂದು ಹೇಳಿದ್ದಾರೆ.

ಚಿತ್ರದ ನಿರ್ಮಾಪಕರ ಕಷ್ಟವನ್ನು ಶ್ರೀರಾಮ್ ಇದೇ ವೇಳೆ ಸ್ಮರಿಸಿದ್ದಾರೆ. ‘ನಿರ್ಮಾಪಕರಿಗೆ ಹಣ ಬಂದು ಅವರು ಅದನ್ನು ಅನುಭವಿಸಲಿ. ಏನೂ ಇಲ್ಲದ ಸಮಯದಲ್ಲಿ ಎಲ್ಲಿಂದಲೋ ಹಣ ತಂದು ಸಿನಿಮಾ ಮಾಡಿದರು. ಆ ಕಷ್ಟ ಅವರಿಗೆ ಮಾತ್ರ ಗೊತ್ತು’ ಎಂದು ನಿರ್ಮಾಪಕರ ಶ್ರಮವನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾ 139.85 ಕೋಟಿ ಕಲೆಕ್ಷನ್; ನಿರ್ಮಾಪಕನಿಗೆ ಸಿಕ್ಕ ಲಾಭವೆಷ್ಟು?

ಶೂಟಿಂಗ್ ಸಮಯದಲ್ಲಿ ಚಿತ್ರತಂಡಕ್ಕೆ ಯಾವುದೇ ರೀತಿಯ ಕೊರತೆಯಾಗದಂತೆ ನಿರ್ಮಾಪಕರು ನೋಡಿಕೊಂಡಿದ್ದರು ಎಂದು ಶ್ರೀರಾಮ್ ತಿಳಿಸಿದ್ದಾರೆ. ಕಷ್ಟಪಟ್ಟು ಸಿನಿಮಾ ನಿರ್ಮಿಸಿದವರಿಗೆ ಈಗ ಸಿಗುತ್ತಿರುವ ಯಶಸ್ಸು ಮತ್ತು ಲಾಭ ಸಲ್ಲಬೇಕು ಎಂಬ ಶ್ರೀರಾಮ್ ಅವರ ಈ ಮಾತುಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಸಿಎಂ ಡಿಕೆಶಿ ಸದಾಶಿವನಗರದ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಂಡ್ಯ ಮಿಮ್ಸ್ ಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋ ಮರೆಮಾಚಿದ ಸಿಬ್ಬಂದಿ
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಮಧ್ಯರಾತ್ರಿಯಲ್ಲೂ ರೇಷನ್ ಅಂಗಡಿ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಇಂದು ರಾಶಿಯವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುತ್ತವೆ
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟ ‘ಪವಿತ್ರ ಬಂಧನ’ದ ದೇವ್
ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟ ‘ಪವಿತ್ರ ಬಂಧನ’ದ ದೇವ್
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ