ಸೌಂದರ್ಯಾ ಹಾಗೂ ಜಗದೀಶ್ ಮಧ್ಯೆ ಭರ್ಜರಿ ಕಿತ್ತಾಟ; 2 ದಿನ ಊಟ ಕೊಡಬೇಡಿ ಎಂದ ಕ್ಯಾಪ್ಟನ್
ಬಿಗ್ ಬಾಸ್ ಮನೆಯಲ್ಲಿ ಈ ವಾರ ಸೌಂದರ್ಯಾ ಕ್ಯಾಪ್ಟನ್ ಆಗಿದ್ದಾರೆ. ಅಡುಗೆ ಮನೆ ಸ್ಲ್ಯಾಬ್ ಕ್ಲೀನ್ ಮಾಡುವ ವಿಚಾರಕ್ಕೆ ಕ್ಯಾಪ್ಟನ್ ಸೌಂದರ್ಯಾ ಮತ್ತು ಜಗದೀಶ್ ಮಧ್ಯೆ ಜೋರು ಕಿತ್ತಾಟ ನಡೆದಿದೆ. ಕೆಲಸ ಮಾಡಲು ನಿರಾಕರಿಸಿದ ಜಗದೀಶ್‌ಗೆ ಎರಡು ದಿನ ಊಟ ಕೊಡಬೇಡಿ ಎಂದು ಸೌಂದರ್ಯಾ ಖಡಕ್ ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶಗಳು
- ಸ್ಲ್ಯಾಬ್ ಕ್ಲೀನ್ ಮಾಡುವ ವಿಚಾರಕ್ಕೆ ಶುರುವಾಯ್ತು ಮಹಾಯುದ್ಧ
- ತಾರಕಕ್ಕೇರಿದ ವಾಗ್ವಾದ
- ಜಗದೀಶ್‌ಗೆ ಎರಡು ದಿನ ಊಟ ಬಂದ್
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಮತ್ತೊಂದು ಹೈವೋಲ್ಟೇಜ್ ಜಗಳಕ್ಕೆ ವೇದಿಕೆ ಸಜ್ಜಾಗಿದೆ. ಈ ವಾರ ಸೌಂದರ್ಯಾ ಮನೆಯ ಕ್ಯಾಪ್ಟನ್ ಆಗಿದ್ದಾರೆ ಅನ್ನೋದು ಹೊಸ ಪ್ರೋಮೋ ಮೂಲಕ ಸ್ಪಷ್ಟವಾಗುತ್ತಿದೆ. ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸೌಂದರ್ಯಾ ಮತ್ತು ಜಗದೀಶ್ ನಡುವೆ ದೊಡ್ಡ ಮಟ್ಟದ ಕಿತ್ತಾಟ ಶುರುವಾಗಿದೆ.
ಅಡುಗೆ ಮನೆಯ ಸ್ಲ್ಯಾಬ್ ಕ್ಲೀನ್ ಮಾಡುವ ವಿಚಾರಕ್ಕೆ ಈ ಗಲಾಟೆ ಆರಂಭವಾಗಿದೆ. ಕ್ಯಾಪ್ಟನ್ ಸೌಂದರ್ಯಾ ಅವರು ಜಗದೀಶ್‌ಗೆ ಸ್ಲ್ಯಾಬ್ ಕ್ಲೀನ್ ಮಾಡುವಂತೆ ಕೆಲಸ ಹೇಳಿದ್ದಾರೆ. ಆದರೆ ಚಪಾತಿ ಒತ್ತುತ್ತಿರುವುದರಿಂದ ತನ್ನಿಂದ ಕ್ಲೀನ್ ಮಾಡಲು ಆಗುವುದಿಲ್ಲ ಎಂದು ಜಗದೀಶ್ ನೇರವಾಗಿ ನಿರಾಕರಿಸಿದ್ದಾರೆ. ಇದು ಸೌಂದರ್ಯಾ ಅವರ ಕೋಪಕ್ಕೆ ಕಾರಣವಾಗಿದೆ.
ಬೇರೆಯವರು ಕ್ಯಾಪ್ಟನ್ ಆಗಿದ್ದಾಗ ಮಾತ್ರ ಚಮಚಗಿರಿ ಮಾಡುತ್ತೀರಾ ಎಂದು ಸೌಂದರ್ಯಾ ಜಗದೀಶ್ ವಿರುದ್ಧ ಕಿಡಿಕಾರಿದ್ದಾರೆ. ಇದರಿಂದ ಕೆರಳಿದ ಜಗದೀಶ್ ಕೂಡ ಸೌಂದರ್ಯಾ ವಿರುದ್ಧ ಏರುಧ್ವನಿಯಲ್ಲಿ ಕೂಗಾಡಿದ್ದಾರೆ. ಇಬ್ಬರ ನಡುವೆ ಏಕವಚನದಲ್ಲೇ ‘ಮುಚ್ಚು ಬಾಯಿ’ ಎನ್ನುವಷ್ಟರ ಮಟ್ಟಿಗೆ ವಾಗ್ವಾದ ತಾರಕಕ್ಕೇರಿದೆ.
View this post on Instagram
ಪರಿಸ್ಥಿತಿ ಕೈಮೀರುತ್ತಿದ್ದಂತೆ ಕ್ಯಾಪ್ಟನ್ ಸೌಂದರ್ಯಾ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ತಾನು ಬೇರೆಯವರ ಕೈಯಲ್ಲಿ ಸ್ಲ್ಯಾಬ್ ಕ್ಲೀನ್ ಮಾಡಿಸುವುದಾಗಿ ಹೇಳಿರುವ ಅವರು, ಜಗದೀಶ್‌ಗೆ ಶಿಕ್ಷೆ ನೀಡಿದ್ದಾರೆ. ಜಗದೀಶ್ ಅವರಿಗೆ ಮುಂದಿನ ಎರಡು ದಿನಗಳ ಕಾಲ ಯಾರೂ ಊಟ ಕೊಡಬೇಡಿ ಎಂದು ಸೌಂದರ್ಯಾ ಖಡಕ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ಹೊಸ್ತಿಲಲ್ಲಿ ಯಶಸ್ ಆಟಕ್ಕೆ ಭರ್ಜರಿ ಮೈಲೇಜ್; ಬಿಗ್ ಬಾಸ್ ಕಡೆಯಿಂದಲೇ ಮೆಚ್ಚುಗೆ
ಕ್ಯಾಪ್ಟನ್ ಆದೇಶಕ್ಕೆ ಜಗದೀಶ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇಂದಿನ ಸಂಚಿಕೆಯಲ್ಲಿ ಈ ಜಗಳ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




