AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಫಿನಾಲೆ ಹೊಸ್ತಿಲಲ್ಲಿ ಯಶಸ್ ಆಟಕ್ಕೆ ಭರ್ಜರಿ ಮೈಲೇಜ್; ಬಿಗ್ ಬಾಸ್ ಕಡೆಯಿಂದಲೇ ಮೆಚ್ಚುಗೆ

ಬಿಗ್ ಬಾಸ್ ಶೋ 80 ದಿನ ಪೂರೈಸಿ ಫಿನಾಲೆ ಸಮೀಪಿಸುತ್ತಿದೆ. ಆರಂಭದಲ್ಲಿ ಡಲ್ ಆಗಿದ್ದ ಯಶಸ್, ಮಂಜು ಜಗಳದ ಬಳಿಕ ಆಟ ಬದಲಿಸಿದರು. ಗುಳ್ಳೆನರಿ ಟಾಸ್ಕ್ ಯಶಸ್ವಿಯಾಗಿ ಮುಗಿಸಿ ಬಿಗ್ ಬಾಸ್ ಮೆಚ್ಚುಗೆ ಪಡೆದರು. ಈ ತಿರುವು ಫಿನಾಲೆ ಹಾದಿಯಲ್ಲಿ ಯಶಸ್ ಆಟಕ್ಕೆ ದೊಡ್ಡ ಮೈಲೇಜ್ ಮತ್ತು ಲಾಭ ತಂದುಕೊಟ್ಟಿದೆ.

ಬಿಗ್ ಬಾಸ್ ಫಿನಾಲೆ ಹೊಸ್ತಿಲಲ್ಲಿ ಯಶಸ್ ಆಟಕ್ಕೆ ಭರ್ಜರಿ ಮೈಲೇಜ್; ಬಿಗ್ ಬಾಸ್ ಕಡೆಯಿಂದಲೇ ಮೆಚ್ಚುಗೆ
ಯಶಸ್
ರಾಜೇಶ್ ದುಗ್ಗುಮನೆ
|

Updated on: Nov 27, 2026 | 7:02 AM

Share

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ಬದಲಾಯಿತು ಯಶಸ್ ಆಟದ ಹಾದಿ
  • ಗುಳ್ಳೆನರಿಯಂತೆ ಆಡಿ ಟಾಸ್ಕ್ ಗೆದ್ದ ಯಶಸ್
  • ಫಿನಾಲೆ ಹೊಸ್ತಿಲಲ್ಲಿ ಬಿಗ್ ಬಾಸ್ ಮೆಚ್ಚುಗೆ

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟ ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಶೋ ಆರಂಭವಾಗಿ ಈಗಾಗಲೇ 80ಕ್ಕೂ ಹೆಚ್ಚು ದಿನಗಳು ಕಳೆದಿದ್ದು, ಫಿನಾಲೆಗೆ ಕೆಲವೇ ವಾರಗಳು ಬಾಕಿ ಇವೆ. ಇಂತಹ ನಿರ್ಣಾಯಕ ಹಂತದಲ್ಲಿ ಸಿಗುವ ಸಣ್ಣ ಮೈಲೇಜ್ ಕೂಡ ಸ್ಪರ್ಧಿಗಳಿಗೆ ದೊಡ್ಡ ಮಟ್ಟದ ಲಾಭ ತಂದುಕೊಡುತ್ತದೆ. ಇದೀಗ ಅಂತಹದ್ದೇ ಒಂದು ಸುವರ್ಣಾವಕಾಶ ಯಶಸ್ ಪಾಲಿಗೆ ಒದಗಿಬಂದಿದೆ.

ಆರಂಭದ ದಿನಗಳಲ್ಲಿ ಯಶಸ್ ಮನೆಯೊಳಗೆ ತುಂಬಾನೇ ಡಲ್ ಆಗಿ ಕಾಣಿಸಿಕೊಂಡಿದ್ದರು. ಕೇವಲ ಹುಡುಗಿಯರ ಜೊತೆಗಷ್ಟೇ ಬೆರೆಯುತ್ತಾ, ಆಟದಲ್ಲಿ ಅಷ್ಟಾಗಿ ಸಕ್ರಿಯವಾಗಿರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದರಿಂದ ಅವರು ಒಂದು ತಿಂಗಳೊಳಗೆ ಮನೆಯಿಂದ ಹೊರ ಹೋಗುತ್ತಾರೆ ಎನ್ನುವ ಮಾತು ಕೇಳಿ ಬಂತು. ಆದರೆ ದಿನ ಕಳೆದಂತೆ ಮನೆಯ ವಾತಾವರಣದ ಜೊತೆಗೆ ಯಶಸ್ ಆಟವೂ ಬದಲಾಯಿತು.

ಮಂಜು ಜಗಳದ ಬಳಿಕ ಬದಲಾದ ಆಟ

ಮನೆಯೊಳಗೆ ಮಂಜು ಮತ್ತು ಯಶಸ್ ನಡುವೆ ನಡೆದ ಜಗಳ ಎಲ್ಲವನ್ನೂ ಬದಲಿಸಿಬಿಟ್ಟಿತು. ಆ ಜಗಳದಲ್ಲಿ ಮಂಜು ಕೆಟ್ಟ ಶಬ್ದಗಳಿಂದ ಯಶಸ್ ಹಾಗೂ ಅವರ ಕುಟುಂಬವನ್ನು ನಿಂದಿಸಿದ್ದರು. ಆದರೆ, ಇದಕ್ಕೆ ಯಶಸ್ ಒಂದೇ ಒಂದು ಮಾತು ಕೂಡ ತಿರುಗಿ ಕೆಟ್ಟ ಪದ ಬಳಕೆ ಮಾಡಿರಲಿಲ್ಲ. ಇದರಿಂದ ಅವರು ಪ್ರಶಂಸೆ ಪಡೆದರು. ಈ ಘಟನೆಯ ಬಳಿಕ ಯಶಸ್ ಆಟದ ವೈಖರಿಯೇ ಸಂಪೂರ್ಣ ಬದಲಾಯಿತು. ಅಲ್ಲಿಂದ ನಿಧಾನವಾಗಿ ಏರುಗತಿಯಲ್ಲಿ ಸಾಗಿದ ಯಶಸ್, ಕಳೆದ ಎರಡು ವಾರಗಳಿಂದ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಆಟವಾಡುತ್ತಾ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಗುಳ್ಳೆನರಿ ಟಾಸ್ಕ್‌ನಲ್ಲಿ ಭರ್ಜರಿ ಪ್ರದರ್ಶನ

ಈ ವಾರ ಬಿಗ್ ಬಾಸ್ ನೀಡಿದ್ದ ‘ಗುಳ್ಳೆನರಿ’ ಟಾಸ್ಕ್‌ನಲ್ಲಿ ಯಶಸ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಗುಳ್ಳೆನರಿಯಾಗಿ ಯಾರಿಗೂ ಅನುಮಾನ ಬಾರದಂತೆ, ಯಾರ ಕೈಗೂ ಸಿಕ್ಕಿಬೀಳದಂತೆ ಚಾಣಾಕ್ಷತನದಿಂದ ಆಟವಾಡಿದ್ದಾರೆ. ಮನೆಯವರೆಲ್ಲರೂ ಸುತ್ತಮುತ್ತ ಇದ್ದರೂ, ಯಾರಿಗೂ ತಿಳಿಯದಂತೆ ಬಿಗ್ ಬಾಸ್ ಕೊಟ್ಟ ರಹಸ್ಯ ಟಾಸ್ಕ್ ಅನ್ನು ಯಶಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಗಗನ್ 8 ವರ್ಷಗಳ ಹಿಂದಿನ ನೋವಿನ ಸೀಕ್ರೆಟ್ ಬಯಲು; ಬಿಗ್ ಬಾಸ್​​ನಲ್ಲಿ ದೊಡ್ಡ ಸತ್ಯ ರಿವೀಲ್

ಬಿಗ್ ಬಾಸ್ ಕಡೆಯಿಂದಲೂ ಮೆಚ್ಚುಗೆ

ಯಶಸ್ ಅವರ ಈ ಚತುರ ಆಟಕ್ಕೆ ಸ್ವತಃ ಬಿಗ್ ಬಾಸ್ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ‘ಈ ವಾರ ಅತ್ಯುತ್ತಮವಾಗಿ ಆಡಿದ್ದೀರಿ’ ಎಂದು ಬಿಗ್ ಬಾಸ್ ಬಹಿರಂಗವಾಗಿಯೇ ಯಶಸ್ ಅವರನ್ನು ಹೊಗಳಿದ್ದಾರೆ. ಈ ವಾರ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುವ ಸಾಧ್ಯತೆಯೂ ಇದೆ. ಫಿನಾಲೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಯಶಸ್ ಆಡಿದ ಈ ಅದ್ಭುತ ಆಟ ಮತ್ತು ಸಿಕ್ಕಿರುವ ಈ ಮೆಚ್ಚುಗೆ, ಟಾಪ್ ಐದರ ಹಂತಕ್ಕೆ ಸಾಗಲು ಅವರಿಗೆ ಸಾಕಷ್ಟು ಸಹಕಾರಿಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ:ಕೊರಳಲ್ಲಿ ಅರಿಶಿಣ ಕೊಂಬು ಪತ್ತೆ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಆಶಾ ಕಾರ್ಯಕರ್ತೆಯರ 2ನೇ ಸುತ್ತಿನ ಸಭೆಯೂ ವಿಫಲ: ಶುಕ್ರವಾರದ ಸಭೆಯತ್ತ ಚಿತ್ತ
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್