AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರ ಅರ್ಥಿಕ ವಿಷಯಕ್ಕೆ ದಾಂಪತ್ಯದಲ್ಲಿ ಕಲಹ…

ನವೆಂಬರ್ 27 ರ ದಿನ ಭವಿಷ್ಯ: ಇಂದು ಕೆಲವು ರಾಶಿಯವರಿಗೆ ಆರ್ಥಿಕ ವಿಚಾರಗಳಿಂದ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಕುಟುಂಬದ ವ್ಯವಹಾರದಲ್ಲಿ ಮಹತ್ವದ ತಿರುವು ಸಿಗಬಹುದು. ಮಿಥುನ ರಾಶಿಯವರು ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಸಿಂಹ ರಾಶಿಯವರಿಗೆ ಸಾಲ ತೀರಿಸುವ ಯೋಜನೆ ಕೈಗೂಡುವ ಸೂಚನೆಗಳಿವೆ. ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ.

ದಿನ ಭವಿಷ್ಯ: ಇಂದು ಈ ರಾಶಿಯವರ ಅರ್ಥಿಕ ವಿಷಯಕ್ಕೆ ದಾಂಪತ್ಯದಲ್ಲಿ ಕಲಹ...
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 27, 2026 | 3:00 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಶುಕ್ರವಾರದಂದು ಕಷ್ಟದಿಂದ ಉದ್ದೇಶ ಸಾಫಲ್ಯ, ಉದ್ಯೋಗ ಅನ್ವೇಷಣೆ, ಶತ್ರುಭೀತಿ, ಕೃತಜ್ಞತೆ, ಬಾಂಧವ್ಯದಲ್ಲಿ ಪೂರ್ವಾಗ್ರಹ, ಹುಡುಕಾಟದ ನಿರ್ಧಾರ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನುರಾಧಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಶಿವ, ಕರಣ: ವಣಿಜ, ಸೂರ್ಯೋದಯ – 06 – 25 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:42 – 12:07, ಯಮಗಂಡ ಕಾಲ 14:58 – 16:24, ಗುಳಿಕ ಕಾಲ 07:51 – 09:16

ಮೇಷ ರಾಶಿ

ಸಂಬಂಧಗಳಲ್ಲಿ ನಂಬಿಕೆಯ ವಾತಾವರಣ ನಿರ್ಮಿಸಲು ಅವಕಾಶ. ಇಂದು ಕೌಂಟುಬಿಕ ವ್ಯವಹಾರದಲ್ಲಿ ಮಹತ್ತ್ವದ ತಿರುವು ಸಿಗುವ ಸಂಭವವಿದೆ. ಕಠಿಣ ಪರಿಶ್ರಮದಿಂದ ನಿಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಅಂತರ್ಮುಖತೆಯಿಂದ ಕುಟುಂಬದಲ್ಲಿ ಆತಂಕ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಿರಿ. ನಿಮ್ಮ ಯಶಸ್ಸೇ ನಿಮಗೆ ಮುಳುವಾಗಬಹುದು.

ವೃಷಭ ರಾಶಿ

ನ್ಯಾಯಸಮ್ಮತವಾದ ದಾರಿಯಲ್ಲಿ ಇದ್ದರೂ ನಿಮಗೆ ನೋವು ತಪ್ಪದು. ಆಶಾವಾದದಲ್ಲಿಯೇ ನಿಮ್ಮ ಇಂದಿನ ದಿನವನ್ನು ಕಳೆಯುವಿರಿ. ಯೋಜಿತ ಉದ್ಯಮದಲ್ಲಿ ಪಾಲುದಾರರನ್ನು ಸೇರಿಸಿಕೊಂಡು ಮುಂದುವರಿಯಿರಿ. ಸಾಮಾಜಿಕ ಕಾರ್ಯಗಳಿಗೆ ಒತ್ತಡಗಳು ಇರಲಿದೆ. ಸೃಜನಶೀಲತೆಯ ಫಲ ಕೆಲಸದಲ್ಲಿ ಚೆನ್ನಾಗಿ ಕಾಣುತ್ತದೆ. ಮಾತನಾಡಿ ತಪ್ಪಿನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಅಪರಿಚಿತ ಸ್ಥಳಗಳಿಗೆ ಹೋಗುವ ಸಂದರ್ಭವು ಬರಬಹುದು.

ಮಿಥುನ ರಾಶಿ

ಯಾರನ್ನಾದರೂ ಹಿಡಿದುಕೊಂಡು ನಿಮಗೆ ಆಗಬೇಕಾದ ಕೆಲಸವನ್ನು ಮಾಡುವಿರಿ. ನಿಮಗೆ ಇಂದು ತುರ್ತು ಆರ್ಥಿಕ ಸ್ಥಿತಿಯನ್ನು ಎದರಿಸಲು ಕಷ್ಟವಾಗುವುದು. ಪ್ರತಿಕೂಲವನ್ನು ಎದುರಿಸುವುದು ಕಷ್ಟವಾಗುವುದು. ರಾಜಕೀಯ ವ್ಯಕ್ತಿಗಳಿಂದ ಕೆಲಸಮಾಡಿಸಿಕೊಳ್ಳಲಿದ್ದೀರಿ. ಭವಿಷ್ಯದ ಕನಸು ಸಾಕಾರಗೊಳ್ಳುವುದು ಸುಲಭವಲ್ಲ. ಕೆಲಸದ ಮೇಲೆ ಅಧಿಕ ಗಮನ ಹರಿಸುವ ದಿನ. ಗುರಿಗಳನ್ನು ಸಾಧಿಸಲು ಸೂಕ್ತ ಕಾಲ.

ಕರ್ಕಾಟಕ ರಾಶಿ

ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಹಾಕಬಹುದು. ಇಂದು ಸಾಲಬಾಧೆಯು ನಿಮಗೆ ಅತಿಯಾದಂತೆ ಭಾಸವಾಗುವುದು. ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಲು ನಿಮಗೆ ಕಷ್ಟವೆನಿಸುವುದು. ಉದ್ವೇಗಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ಮುಖಂಡರಿಗೆ ಮಾತಿನ‌ ಕಾರಣದಿಂದ ಮುಖಭಂಗವಾಗಬಹುದು.

ಸಿಂಹ ರಾಶಿ

ಬೇಗ ಸಾಲವನ್ನು ತೀರಿಸಲು ನಿಮ್ಮ ಯೋಜನೆ ಕಾರ್ಯರೂಪಕ್ಕೆ ಬರುವುದು. ನಿಮ್ಮ ಗುರಿಯನ್ನು ತಲುಪಲು ಸಮಯ ಹಿಡಿಯುವುದು. ಎಂದುಕೊಂಡ ಕಾರ್ಯವು ಮುಗಿದು ಸಂಭ್ರಮದಲ್ಲಿ ಇರುವಿರಿ. ತಾಯಿಯ ಪ್ರೀತಿಗೆ ಸೋಲುವಿರಿ. ನೂತನ ಗೃಹವನ್ನು ಖರೀದಿ ಮಾಡುವ ಅವಕಾಶವು ಬರಬಹುದು. ದಿನವು ಭಾವನಾತ್ಮಕವಾಗಿ ಸ್ವಲ್ಪ ಉತ್ಕಟವಾಗಿರಬಹುದು. ಆದರೆ ಅದೇ ಭಾವನೆ ನಿಮ್ಮ ಕೆಲಸದಲ್ಲಿ ಹೊಸ ದೃಷ್ಟಿಕೋನ ತರುತ್ತದೆ.

ಕನ್ಯಾ ರಾಶಿ

ದುಡಿಮೆಯಲ್ಲಿ ಸಿಕ್ಕಷ್ಟು ಅಲ್ಲ, ದಕ್ಕಿದಷ್ಟು ನಿಮ್ಮದೇ. ಸಂಘರ್ಷಗಳಿಗೆ ಸುಖಾಂತ್ಯವನ್ನು ಮಾಡಿದ್ದರೆ ಮತ್ತೇನಾದರೂ ಆದೀತು. ಮಾನಸಿಕ ವಿಶ್ರಾಂತಿ ಇಲ್ಲ ಎಂದು ಅನ್ನಿಸಬಹುದು. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವಾಹನದಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕಾದೀತು. ಶಾಂತಿ ಮತ್ತು ಸಮತೋಲನ ಮುಖ್ಯ ಪಾತ್ರವಹಿಸುವ ದಿನ. ನಿಮ್ಮ ಮಾತು, ವರ್ತನೆ, ನಿರ್ಧಾರಗಳು ಸಮರ್ಪಕವಾಗಿ ನಡೆಯದು.

ತುಲಾ ರಾಶಿ

ಇಂದಿನ ಸಮಯವನ್ನು ವ್ಯರ್ಥ ಮಾಡದೇ ನಿಮ್ಮದೇ ಸಮಯಸಾರಿಣಿಯನ್ನು ರೂಪಿಸಿಕೊಳ್ಳಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ಕಛೇರಿಯ ನಿಯಮಗಳು ನಿಮಗೆ ಹೊಂದಿಕೆಯಾಗದು. ಈಗಲೇ ಅಧ್ಯಯನ ವಿಧಾನವನ್ನು ಬದಲಿಸಿಕೊಳ್ಳಿ. ಹಣದ ಹಿಂದೆ ಎಷ್ಟೇ ಬಿದ್ದರೂ ಸಿಕ್ಕುವಷ್ಟು ಮಾತ್ರ ಸಿಗುವುದು. ನಿರುಪಯುಕ್ತ ವಸ್ತುಗಳನ್ನು ಇಂದು ನೀವು ಬೇರೆಯವರಿಗೆ ಕೊಡುವಿರಿ.

ವೃಶ್ಚಿಕ ರಾಶಿ

ಅಧಿಕ ಸಂಪಾದನೆಯು ನಿಮ್ಮ ಮಾರ್ಗವನ್ನು ತಪ್ಪಿಸುವುದು. ಸಮಯಕ್ಕೆ ಸರಿಯಾಗಿ ನಿಮ್ಮ ಬುದ್ಧಿಯು ಸ್ಫುರಿಸುವುದು. ಇಂದು ನಿಮ್ಮ ಬಲವಂತದ ಪ್ರೇಮ ತಪ್ಪಿಹೋಗುವುದು. ಬಂಧುಗಳ ಎದುರು ಮಾತನ್ನು ಹರಿಬಿಡಬೇಡಿ. ಒಬ್ಬರೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು.

ಧನು ರಾಶಿ

ವಾತಾವರಣದ ಬದಲಾವಣೆಯಿಂದ ಸ್ವಾಸ್ಥ್ಯವು ಹಾಳಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗುವುದಷ್ಟೇ ಅಲ್ಲ, ಆರ್ಥಿಕ ಸಹಾಯವನ್ನೂ ನೀವು ಮಾಡಬೇಕಾಗುವುದು. ಅತಿಯಾದ ಪ್ರಯಾಣದಿಂದ ನೀವು ದುರ್ಬಲರಾಗುವಿರಿ. ಗೊಂದಲವನ್ನು ಮಾಡಿಕೊಳ್ಳದೇ ಕೆಲಸವನ್ನು ಸರಳ ಮಾಡಿಕೊಳ್ಳಿ. ಬಿಡುವಿನ ಸಮಯವನ್ನು ಅಧಿಕ ಸಂಪಾದನೆಗಾಗಿ ಬಳಸಿಕೊಳ್ಳುವಿರಿ.

ಮಕರ ರಾಶಿ

ಕುಟುಂಬದಲ್ಲಿ ಸಲ್ಲದ ಮಾತುಗಳು ಬರಬಹುದು. ಅದನ್ನು ತೆಗೆದುಕೊಂಡು ಹೋಗುವುದು ನಿಮ್ಮದೇ ಕಾರ್ಯವಾಗಬಹುದು. ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಹಣವನ್ನು ಉಳಿಸಿಕೊಳ್ಳಲು ನಿಮ್ಮ ಪ್ರಯತ್ನವು ಫಲಕೊಡುವುದು. ಇಂದಿನ ನಿಮ್ಮ ವರ್ತನೆಯು ಗಾಂಭೀರ್ಯದಿಂದ ಇರಲಿದೆ.

ಕುಂಭ ರಾಶಿ

ಹಣಕಾಸಿನಲ್ಲಿ ಸ್ಥಿರತೆ ಕಾಣದು. ಸಂಬಂಧಗಳಲ್ಲಿ ಪ್ರಾಮಾಣಿಕತೆ ಹೆಚ್ಚುತ್ತದೆ. ಮನ ಬಂದಂತೆ ವರ್ತಿಸಲು ನೀವು ಇಂದು ಸ್ವತಂತ್ರರಲ್ಲ. ನಿಮ್ಮ ಕಾರ್ಯದ ಅನುಭವದ ಮೇಲೆ ಉತ್ತಮ ಸ್ಥಾನವು ಪ್ರಾಪ್ತವಾಗುವುದು. ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ಮನೋರಂಜನೆಯಲ್ಲಿ ನಿಮ್ಮ ಹೆಚ್ಚಿನ ಸಮಯವನ್ನು ಕಳೆಯಬೇಕಾದೀತು. ಕೆಲಸಗಳಲ್ಲಿ ಚೈತನ್ಯವೂ ಹೆಚ್ಚಲಿದೆ.

ಮೀನ ರಾಶಿ

ಅತಿಯಾದ ಆತ್ಮವಿಶ್ವಾಸಕ್ಕೆ ಜಾಗ್ರತೆ ಅವಶ್ಯಕ. ಭೂ ಉತ್ಪನ್ನಗಳ ಮಾರಾಟವನ್ನು ಹೆಚ್ಚು ಮಾಡುವಿರಿ ಮತ್ತು ಅಧಿಕ‌ಲಾಭವೂ ಆಗುವುದು. ನಿಮ್ಮ ಉದ್ಯಮಕ್ಕೆ ಮನೆಯಿಂದ ಪ್ರೋತ್ಸಾಹ ಸಹಾಯಗಳು ಸಿಗದಿದ್ದರೂ ಬಂಧುಗಳಿಂದ ಸಿಗುವುದು. ನಿಮ್ಮ ಕೆಲಸಕ್ಕೆ ಬೇಕಾದ ಸಹಕಾರ ಮತ್ತು ಧೈರ್ಯ ದೊರೆಯುತ್ತದೆ. ಸಂಬಂಧಗಳನ್ನು ಬಳಸಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ನಿಮಗೆ ಯಾರ ಜೊತೆಗೂ ಗುರುತಿಸಿಕೊಳ್ಳುಬುದು ಇಷ್ಟವಾಗದು.

– ಲೋಹಿತ್ ಹೆಬ್ಬಾರ್-8762924271 (what’s app only)

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More