AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನ್ 8 ವರ್ಷಗಳ ಹಿಂದಿನ ನೋವಿನ ಸೀಕ್ರೆಟ್ ಬಯಲು; ಬಿಗ್ ಬಾಸ್​​ನಲ್ಲಿ ದೊಡ್ಡ ಸತ್ಯ ರಿವೀಲ್

ಬಿಗ್ ಬಾಸ್ ನೀಡಿದ ವಿಶೇಷ ಸೀಕ್ರೆಟ್ ಟಾಸ್ಕ್ ವೇಳೆ ದೊಡ್ಡ ಟ್ವಿಸ್ಟ್ ಎದುರಾಯಿತು. ಬಜರ್ ಸ್ಪರ್ಧೆಯಲ್ಲಿ ಗೆದ್ದ ಗಾನವಿ, ಗಗನ್ ಅವರ ಎಂಟು ವರ್ಷಗಳ ಹಿಂದಿನ ಕಹಿ ಸತ್ಯವನ್ನು ಬಯಲು ಮಾಡಿದರು. ಗೆಳೆಯನ ಸಾವು ಹಾಗೂ 500 ರೂಪಾಯಿ ನೋಟಿನಲ್ಲಿದ್ದ ಕ್ಷಮೆ ಸಂದೇಶದ ನೋವಿನ ಕಥೆ ಮನೆಯನ್ನು ಭಾವುಕವಾಗಿಸಿತು.

ಗಗನ್ 8 ವರ್ಷಗಳ ಹಿಂದಿನ ನೋವಿನ ಸೀಕ್ರೆಟ್ ಬಯಲು; ಬಿಗ್ ಬಾಸ್​​ನಲ್ಲಿ ದೊಡ್ಡ ಸತ್ಯ ರಿವೀಲ್
ಗಗನ್
ರಾಜೇಶ್ ದುಗ್ಗುಮನೆ
|

Updated on: Nov 26, 2026 | 6:57 AM

Share

ಮುಖ್ಯಾಂಶಗಳು

  • ಬಜರ್ ಗೆದ್ದು ಗಗನ್ ಸೀಕ್ರೆಟ್ ಓಪನ್ ಮಾಡಿದ ಗಾನವಿ
  • ಎಂಟು ವರ್ಷಗಳ ಹಿಂದಿನ ಆ ಕರಾಳ ದಿನ
  • 500 ರೂಪಾಯಿ ನೋಟಿನ ಮೇಲಿದ್ದ ಆ ಕೊನೆಯ ಕ್ಷಮೆ

ಬಿಗ್ ಬಾಸ್ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮನೆಯೊಳಗೆ ಚಿತ್ರ-ವಿಚಿತ್ರ ಟಾಸ್ಕ್‌ಗಳ ಮೂಲಕ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಕ್ ನೀಡುತ್ತಿದ್ದಾರೆ. ನವೆಂಬರ್ 25ರ ಎಪಿಸೋಡ್​​ನಲ್ಲಿ ನೀಡಲಾದ ವಿಶೇಷ ಟಾಸ್ಕ್ ಒಂದರಲ್ಲಿ ಗಗನ್ ವೈಯಕ್ತಿಕ ಜೀವನದ ಕಹಿ ಸತ್ಯವೊಂದು ಎಲ್ಲರ ಮುಂದೆ ಅನಾವರಣಗೊಂಡಿದ್ದು, ಇಡೀ ಮನೆಯನ್ನೇ ಭಾವುಕವಾಗಿಸಿದೆ.

ಸೀಕ್ರೆಟ್ ಟಾಸ್ಕ್ ಮತ್ತು ಬಿಗ್ ಟ್ವಿಸ್ಟ್

ಬಿಗ್ ಬಾಸ್ ಎಲ್ಲಾ ಸ್ಪರ್ಧಿಗಳಿಗೆ ತಮ್ಮ ಜೀವನದ ಯಾವುದಾದರೂ ಒಂದು ರಹಸ್ಯವನ್ನು (ಸೀಕ್ರೆಟ್) ಹಂಚಿಕೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ, ‘ನೀವೆಲ್ಲರೂ ಹೇಳಿದ ಮಾತುಗಳು ಸಂಪೂರ್ಣವಾಗಿ ಸೇಫ್ ಆಗಿರುತ್ತವೆ’ ಎಂದು ಬಿಗ್ ಬಾಸ್ ಭರವಸೆ ಕೂಡ ನೀಡಿದ್ದರು. ಆದರೆ, ಆ ಬಳಿಕ ಆಟಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿತು.

ಸ್ಪರ್ಧಿಗಳಾದ ಗಾನವಿ ಹಾಗೂ ಆಸಿಯಾ ನಡುವೆ ‘ಬಜರ್’ ಒತ್ತುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಪೈಪೋಟಿಯಲ್ಲಿ ಆಸಿಯಾ ಅವರಿಗಿಂತ ವೇಗವಾಗಿ ಬಜರ್ ಒತ್ತಿದ ಗಾನವಿ ಗೆಲುವು ಸಾಧಿಸಿದರು. ಬಜರ್ ಒತ್ತಿದ ಕಾರಣಕ್ಕೆ, ಮನೆಯಲ್ಲಿರುವ ಯಾರದ್ದಾದರೂ ಒಬ್ಬರ ಸೀಕ್ರೆಟ್ ಅನ್ನು ಎಲ್ಲರ ಮುಂದೆ ರಿವೀಲ್ ಮಾಡುವ ವಿಶೇಷ ಅವಕಾಶ ಗಾನವಿಗೆ ಸಿಕ್ಕಿತು. ಈ ವೇಳೆ ಗಾನವಿ, ಸಹಸ್ಪರ್ಧಿ ಗಗನ್ ಅವರ ಸೀಕ್ರೆಟ್ ಅನ್ನು ಬಹಿರಂಗಪಡಿಸುವುದಾಗಿ ನಿರ್ಧರಿಸಿದರು.

8 ವರ್ಷಗಳ ಹಿಂದಿನ ಆ ಕಹಿ ಘಟನೆ ಏನು?

ಗಾನವಿ ಅವರ ಆಯ್ಕೆಯಂತೆ, ಗಗನ್ ಸೀಕ್ರೆಟ್ ರಿವೀಲ್ ಆಯಿತು. ಬಿಗ್ ಬಾಸ್ ವಿಟಿಯನ್ನು ಪ್ಲೇ ಮಾಡಿದರು. ಅವರ 8 ವರ್ಷಗಳ ಹಿಂದಿನ ನೋವಿನ ಕಥೆ ಎಲ್ಲರ ಎದುರು ರಿವೀಲ್ ಆಯಿತು.

ಎಂಟು ವರ್ಷಗಳ ಹಿಂದೆ ಗಗನ್ ತಮ್ಮ ಆತ್ಮೀಯ ಗೆಳೆಯನೊಂದಿಗೆ ಸೇರಿ ಹೊಸದೊಂದು ಬಿಸ್ನೆಸ್ ಆರಂಭಿಸಿದ್ದರು. ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಒಂದು ದಿನ ಏಕಾಏಕಿ ಗಗನ್ ಅವರ ಗೆಳೆಯ ಯಾರಿಗೂ ಹೇಳದೆ ಕಾಣೆಯಾಗಿದ್ದರು. ಹುಡುಕಾಟ ನಡೆಸಿದಾಗ ಆ ಗೆಳೆಯ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು.

500 ರೂಪಾಯಿ ನೋಟಿನಲ್ಲಿದ್ದ ಆ ಕೊನೆಯ ಸಂದೇಶ

ಗೆಳೆಯನ ಸಾವಿನ ಸುದ್ದಿ ಗಗನ್ ಅವರಿಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಅದಕ್ಕಿಂತಲೂ ಹೆಚ್ಚಾಗಿ, ಆ ಗೆಳೆಯ ಸಾಯುವ ಮುನ್ನ 500 ರೂಪಾಯಿ ನೋಟಿನ ಮೇಲೆ ಕ್ಷಮೆ ಕೋರುವ ಮೆಸೇಜ್ ಒಂದನ್ನು ಬರೆದಿಟ್ಟಿದ್ದರು.ಆ ಸಾವಿನ ಹಿಂದಿನ ರಹಸ್ಯ ಇನ್ನುವರೆಗೂ ರಿವೀಲ್ ಆಗಿಲ್ಲ ಎಂದಿದ್ದಾರೆ ಗಗನ್.

ಇದನ್ನೂ ಓದಿ: ‘ಗಾನವಿಯೇ ಗುಳ್ಳೆನರಿ’: ಬಿಗ್ ಬಾಸ್ ಮನೆಯಲ್ಲಿ ಅನುಮಾನ ವ್ಯಕ್ತಪಡಿಸಿದ ಗಗನ್ ಚಿನ್ನಪ್ಪ

ಈ ಘಟನೆ ಗಗನ್ ಅವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು. ಆ ಆಘಾತ ಮತ್ತು ನೋವಿನಿಂದ ಹೊರಬರಲು ಅವರಿಗೆ ಸಾಕಷ್ಟು ಸಮಯ ಬೇಕಾಯಿತಂತೆ. ಗಗನ್ ಅವರ ಈ ಭಾವುಕ ಹಿನ್ನೆಲೆ ಕೇಳಿ ಮನೆಯ ಇತರ ಸ್ಪರ್ಧಿಗಳು ಕೂಡ ಭಾವುಕರಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More