AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂಟ್ಯೂಬ್​​ ಮೆಂಬರ್​​ಶಿಪ್: ವಿಶ್ವದಾಖಲೆ ಬರೆದ ಸಮಯ್ ರೈನಾ

ಕಮಿಡಿಯನ್ ಸಮಯ್ ರೈನಾ, ಕಳೆದ ವರ್ಷ ‘ಇಂಡಿಯಾ ಗಾಟ್ ಲೇಟೆಂಟ್’ ಕಾರಣಕ್ಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಪೊಲೀಸರಿಂದ ಸತತ ನೊಟೀಸ್, ಬೆದರಿಕೆ, ಸಮಯ್ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಕೆಲವೆಡೆ ಪ್ರತಿಭಟನೆ ಸಹ ನಡೆದಿತ್ತು. ಆದರೆ ಈಗ ಅದೇ ಸಮಯ್ ರೈನಾ ವಿಶ್ವದಾಖಲೆ ಬರೆದಿದ್ದಾರೆ. ಯೂಟ್ಯೂಬ್​​ನಲ್ಲಿ ವಿಶ್ವದ ಯಾರೂ ಮಾಡದಿರುವ ದಾಖಲೆ ಸಮಯ್ ರೈನಾ ಹೆಸರಿಗೆ ಬಂದಿದೆ.

ಯೂಟ್ಯೂಬ್​​ ಮೆಂಬರ್​​ಶಿಪ್: ವಿಶ್ವದಾಖಲೆ ಬರೆದ ಸಮಯ್ ರೈನಾ
Samay Raina
ಮಂಜುನಾಥ ಸಿ.
|

Updated on: Nov 26, 2026 | 8:16 PM

Share

ಮುಖ್ಯಾಂಶಗಳು

  • ವಿಶ್ವದಾಖಲೆ ಬರೆದ ಕಮಿಡಿಯನ್ ಸಮಯ್ ರೈನಾ
  • ಯೂಟ್ಯೂಬ್​​ನಲ್ಲಿ ಅತ್ಯಧಿಕ ಸದಸ್ಯರ ಹೊಂದಿರುವ ಯೂಟ್ಯೂಬರ್
  • 10 ಲಕ್ಷಕ್ಕೂ ಅಧಿಕ ಮೆಂಬರ್ಸ್​

ಕಮಿಡಿಯನ್ ಸಮಯ್ ರೈನಾ, ಕಳೆದ ವರ್ಷ ‘ಇಂಡಿಯಾ ಗಾಟ್ ಲೇಟೆಂಟ್’ ಕಾರಣಕ್ಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಪೊಲೀಸರಿಂದ ಸತತ ನೊಟೀಸ್, ಬೆದರಿಕೆ, ಸಮಯ್ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಕೆಲವೆಡೆ ಪ್ರತಿಭಟನೆ ಸಹ ನಡೆದಿತ್ತು. ಆದರೆ ಈಗ ಅದೇ ಸಮಯ್ ರೈನಾ ವಿಶ್ವದಾಖಲೆ ಬರೆದಿದ್ದಾರೆ. ಯೂಟ್ಯೂಬ್​​ನಲ್ಲಿ ವಿಶ್ವದ ಯಾರೂ ಮಾಡದಿರುವ ದಾಖಲೆ ಸಮಯ್ ರೈನಾ ಹೆಸರಿಗೆ ಬಂದಿದೆ.

ಕಳೆದ ವರ್ಷ ವಿವಾದಗಳ ಕಾರಣದಿಂದ ನಿಂತು ಹೋಗಿದ್ದ ‘ಇಂಡಿಯಾ ಗಾಟ್ ಲೇಟೆಂಟ್’ ಶೋನ ಎರಡನೇ ಸೀಸನ್ ಅನ್ನು ಆರಂಭಿಸಿದ ಸಮಯ್ ರೈನಾ, ಇದೀಗ ವಿಶ್ವದಲ್ಲೇ ಅತಿ ಹೆಚ್ಚು ಯೂಟ್ಯೂಬ್ ಮೆಂಬರ್​​ಗಳನ್ನು ಹೊಂದಿರುವ ಯೂಟ್ಯೂಬರ್ ಎನಿಸಿಕೊಂಡಿದ್ದಾರೆ. ಸಮಯ್ ರೈನಾ ಅವರ ಚಾನೆಲ್​​ಗೆ ಹತ್ತು ಲಕ್ಷಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ದೊಡ್ಡ ಸದಸ್ಯರ ಬಳಕ ವಿಶ್ವದ ಇನ್ಯಾವುದೇ ಯೂಟ್ಯೂಬರ್​​ಗಳಿಗೆ ಇಲ್ಲ.

‘ಗ್ರ್ಯಾಂಡ್‌ಮಾಸ್ಟರ್‌ಗಳೊಂದಿಗೆ ಹಾಸ್ಯಭರಿತ ಮಾತುಕತೆಯಿಂದ ಹಿಡಿದು ‘ಇಂಡಿಯಾಸ್ ಗಾಟ್ ಲೇಟೆಂಟ್’ ಎಂಬ ಸಂಚಲನ ಸೃಷ್ಟಿಸುವವರೆಗೆ, ಸಮಯ್ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಲಕ್ಷಾಂತರ ಜನರ ಅತ್ಯುತ್ತಮ ವರ್ಚುವಲ್ ಹ್ಯಾಂಗ್‌ಔಟ್ ತಾಣವನ್ನಾಗಿ ಪರಿವರ್ತಿಸಿದ್ದಾರೆ’ ಎಂದು ಖುದ್ದು ಯೂಟ್ಯೂಬ್ ಹೇಳಿದೆ.

ಇದನ್ನೂ ಓದಿ:ಸಮಯ್ ರೈನಾಗೆ ಸನ್ಮಾನ ಮಾಡಿದ್ದನ್ನು ಖಂಡಿಸಿದ ಮತ್ತೋರ್ವ ಕಾಮಿಡಿಯನ್

ಮುಂದುವರಿದು, ‘ಸಮಯ್ ಅವರ 10 ಲಕ್ಷ ಚಾನೆಲ್ ಸದಸ್ಯರ ಮೈಲಿಗಲ್ಲು ಪ್ರಸ್ತುತ ಭಾರತದಾದ್ಯಂತ ಕಂಟೆಂಟ್​​ಗೆ ಇರುವ ಬೇಡಿಕೆಯನ್ನು ತೋರಿಸುತ್ತದೆ. ಪ್ರೇಕ್ಷಕರು ಇನ್ನು ಮುಂದೆ ತಮಗೆ ಇಷ್ಟವಾದ ಕ್ರಿಯೇಟರ್‌ಗಳ ಪರವಾಗಿ ವೈಯಕ್ತಿಕ ಮತ್ತು ಅರ್ಥಪೂರ್ಣ ರೀತಿಯಲ್ಲಿ ಬೆಂಬಲ ನೀಡಲು ಯತ್ನಿಸುತ್ತಿದ್ದಾರೆ. ಜೂನ್ 2026 ಒಂದರಲ್ಲೇ, ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಯೂಟ್ಯೂಬ್‌ನಲ್ಲಿ ಕನಿಷ್ಠ ಒಂದು ಚಾನೆಲ್ ಸದಸ್ಯತ್ವವನ್ನು ಖರೀದಿಸಿದ್ದಾರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೆಂಬರ್ ಆಗುವ ಪ್ರಕ್ರಿಯೆ 25% ಹೆಚ್ಚಿದೆ’ ಎಂದಿದೆ ಯೂಟ್ಯೂಬ್.

ಸಮಯ್ ಪ್ರಸ್ತುತ ಯೂಟ್ಯೂಬ್‌ನಲ್ಲಿ 1.24 ಕೋಟಿ ಸಬ್​​ಸ್ಕ್ರೈಬರ್​​ಗಳನ್ನು ಹೊಂದಿದ್ದಾರೆ. ಜೊತೆಗೆ 10 ಲಕ್ಷಕ್ಕೂ ಹೆಚ್ಚು ಮೆಂಬರ್ಸ್​​ಗಳನ್ನು ಹೊಂದಿದ್ದಾರೆ. ಮೆಂಬರ್ಸ್​​ಗಳೆಂದರೆ ಹಣ ಕೊಟ್ಟು ಸಮಯ್ ರೈನಾ ಅವರ ಯೂಟ್ಯೂಬ್ ಚಾನೆಲ್ಲಿಗೆ ಮೆಂಬರ್ ಆಗಿರುತ್ತಾರೆ. ಇವರಿಗಾಗಿಯೇ ಸಮಯ್ ರೈನಾ ಕೆಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ತಿಂಗಳಿಗೆ 59 ರೂಪಾಯಿ, 599 ರೂಪಾಯಿ ಮತ್ತು 1999 ರೂಪಾಯಿ ಹಣ ನೀಡಿ ಸಮಯ್ ರೈನಾ ಅವರ ಚಾನೆಲ್ಲಿನ ಸದಸ್ಯತ್ವವನ್ನು ಪಡೆಯಬಹುದಾಗಿದೆ. ಕೆಲವು ವಿಡಿಯೋಗಳನ್ನು ಸಮಯ್, ಮೆಂಬರ್ಸ್​​ಗಾಗಿ ಮಾತ್ರವೇ ಹಾಕುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್
ರಸ್ತೆ ಕಾಮಗಾರಿ ಕಳಪೆ: ಅಧಿಕಾರಿಗಳು, ಗುತ್ತಿಗೆದಾರನಿಗೆ ಶಾಸಕರಿಂದ ಕ್ಲಾಸ್​​
ರಸ್ತೆ ಕಾಮಗಾರಿ ಕಳಪೆ: ಅಧಿಕಾರಿಗಳು, ಗುತ್ತಿಗೆದಾರನಿಗೆ ಶಾಸಕರಿಂದ ಕ್ಲಾಸ್​​
ಜಮೀರ್ ಮಾತಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೊಟ್ಟ ಪ್ರತಿಕ್ರಿಯೆ ಏನು?
ಜಮೀರ್ ಮಾತಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೊಟ್ಟ ಪ್ರತಿಕ್ರಿಯೆ ಏನು?