AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವಿದೇಶದಿಂದ ಬಂದು ಅಜ್ಜಿಗೆ ಸರ್ಪ್ರೈಸ್ ಕೊಟ್ಟ ಮೊಮ್ಮಗಳು, ಕಣ್ಣೀರು ಹಾಕಿದ ವೃದ್ಧೆ

ಅಜ್ಜ ಅಜ್ಜಿಯಂದಿರಿಗೆ ಮೊಮ್ಮಕ್ಕಳೇ ಪ್ರಪಂಚ. ಮನೆಗೆ ಬಂದ ಮೊಮ್ಮಕ್ಕಳು ಸಂಭ್ರಮಿಸುವ ಜೀವ ಅದು. ಇದೀಗ ಐದು ವರ್ಷಗಳ ಬಳಿಕ ವಿದೇಶಿದಿಂದ ಮೊಮ್ಮಗಳು ಬಂದಳೆಂದು ತಿಳಿದು ಅಜ್ಜಿಗೆ ಖುಷಿಯಾಗಿದೆ. ಮೊಮ್ಮಗಳನ್ನು ಅಪ್ಪಿಕೊಂಡು ಭಾವುಕರಾದ ವೃದ್ಧೆಯ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.

Video: ವಿದೇಶದಿಂದ ಬಂದು ಅಜ್ಜಿಗೆ ಸರ್ಪ್ರೈಸ್ ಕೊಟ್ಟ ಮೊಮ್ಮಗಳು, ಕಣ್ಣೀರು ಹಾಕಿದ ವೃದ್ಧೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 26, 2026 | 8:15 PM

Share

ಈಗಿನ ಕಾಲದಲ್ಲಿ ಅಪ್ಪ ಅಮ್ಮನ ನೆರಳಲ್ಲಿ ಬೆಳೆಯುವ ಮಕ್ಕಳಿಗೆ ಅಜ್ಜ ಅಜ್ಜಿಯಂದಿರ (grandparents) ಪ್ರೀತಿ ಹೇಗಿರುತ್ತೆ ಎಂಬುದೇ ತಿಳಿದಿಲ್ಲ. ಆದರೆ ಇಲ್ಲೊಬ್ಬಳು ಮೊಮ್ಮಗಳು ಅಜ್ಜಿಗೆ ಸರ್ಪ್ರೈಸ್ ನೀಡಿದ್ದಾಳೆ. ಐದು ವರ್ಷಗಳ ಬಳಿಕ ವಿದೇಶದಿಂದ ಬಂದು ಅಜ್ಜಿಯ ಮುಂದೆ ನಿಂತಿದ್ದಾಳೆ. ಮೊಮ್ಮಗಳನ್ನು ಕಂಡೊಡನೆ ಅಪ್ಪಿಕೊಂಡು ವೃದ್ಧೆ ಕಣ್ಣೀರು ಹಾಕಿದ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

ಮೊಮ್ಮಗಳನ್ನು ಕಂಡು ವೃದ್ಧೆ ಭಾವುಕ

ಶ್ರುತ್ವ ದೇಸಾಯಿ (Shrutva Desai) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಅಜ್ಜಿ ಬೆಡ್ ಮೇಲೆ ಮಲಗಿರುವುದನ್ನು ಕಾಣಬಹುದು. ಐದು ವರ್ಷಗಳ ಬಳಿಕ ವಿದೇಶದಿಂದ ಬಂದ ಮೊಮ್ಮಗಳು ಮಲಗಿದ್ದ ಅಜ್ಜಿಯ ಬಳಿ ಹೋಗಿದ್ದಾಳೆ. ಹಿರಿಜೀವವನ್ನು ಎಬ್ಬಿಸಿ ತನ್ನ ಗುರುತು ಸಿಕ್ಕಿತೆ ಎಂದು ಕೇಳಿದ್ದಾಳೆ. ಪ್ರಾರಂಭದಲ್ಲಿ ಅಜ್ಜಿಗೆ ಯಾರೆಂದು ತಿಳಿಯಲಿಲ್ಲ. ಆ ಬಳಿಕ ತನ್ನ ಮೊಮ್ಮಗಳು ಬಂದಿದ್ದಾಳೆಂದು ತಿಳಿದು ಖುಷಿಯಲ್ಲಿ ಆಕೆಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Shrutva ♡ (@shrutva_desai)

ಇದನ್ನೂ ಓದಿ: ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಿದ ವೃದ್ಧ ಆಟೋ ಡ್ರೈವರ್, ತಾತನ ಟ್ಯಾಲೆಂಟ್‌ಗೆ ನೆಟ್ಟಿಗರು ಫಿದಾ

ಈ ವಿಡಿಯೋ ಇದುವರಗೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಎಲ್ಲರಿಗೂ ಅಜ್ಜ ಅಜ್ಜಿಯ ಪ್ರೀತಿ ಪಡೆಯುವ ಅದೃಷ್ಟ ಇರಲ್ಲ ಎಂದಿದ್ದಾರೆ. ಇನ್ನೊಬ್ಬರು, ನನ್ನ ಅಜ್ಜಿಯು ಹೀಗೆಯೇ, ಹೆಚ್ಚು ಪ್ರೀತಿ ಮಾಡ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನನ್ನ ಅಜ್ಜಿಗೂ ಹೀಗೆಯೇ ನಾನು ಯಾರೆಂದು ನೆನಪಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಬೆಳಗಾವಿ ಜಿಲ್ಲಾ ಕೋರ್ಟ್​ಗೆ ಬಾಂಬ್ ಬೆದರಿಕೆ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್
ರಸ್ತೆ ಕಾಮಗಾರಿ ಕಳಪೆ: ಅಧಿಕಾರಿಗಳು, ಗುತ್ತಿಗೆದಾರನಿಗೆ ಶಾಸಕರಿಂದ ಕ್ಲಾಸ್​​
ರಸ್ತೆ ಕಾಮಗಾರಿ ಕಳಪೆ: ಅಧಿಕಾರಿಗಳು, ಗುತ್ತಿಗೆದಾರನಿಗೆ ಶಾಸಕರಿಂದ ಕ್ಲಾಸ್​​
ಜಮೀರ್ ಮಾತಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೊಟ್ಟ ಪ್ರತಿಕ್ರಿಯೆ ಏನು?
ಜಮೀರ್ ಮಾತಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೊಟ್ಟ ಪ್ರತಿಕ್ರಿಯೆ ಏನು?