AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್ ಅಧಿವೇಶನ ಪುನರಾರಂಭ; ನವೆಂಬರ್ 30ರಿಂದ ಲೋಕಸಭೆ, ಡಿಸೆಂಬರ್ 2ಕ್ಕೆ ರಾಜ್ಯಸಭೆ ಕಲಾಪ ಶುರು

ಅಗತ್ಯ ಸರ್ಕಾರಿ ಕಲಾಪಗಳನ್ನು ನಡೆಸಲು ನವೆಂಬರ್ ೩೦ರಿಂದ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಈ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನವೆಂಬರ್ 30ರ (ಸೋಮವಾರ) ಲೋಕಸಭೆಯನ್ನು ಮತ್ತು ಡಿಸೆಂಬರ್ 2ರ (ಬುಧವಾರ) ರಾಜ್ಯಸಭೆಯನ್ನು ಪುನರಾರಂಭಿಸುವಂತೆ ಕ್ರಮವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಸರ್ಕಾರ ಮನವಿ ಮಾಡಿದೆ.

ಸಂಸತ್ ಅಧಿವೇಶನ ಪುನರಾರಂಭ; ನವೆಂಬರ್ 30ರಿಂದ ಲೋಕಸಭೆ, ಡಿಸೆಂಬರ್ 2ಕ್ಕೆ ರಾಜ್ಯಸಭೆ ಕಲಾಪ ಶುರು
ಸಂಸತ್ ಅಧಿವೇಶನ Image Credit source: PTI
ಸುಷ್ಮಾ ಚಕ್ರೆ
|

Updated on:Nov 26, 2026 | 8:08 PM

Share

ನವದೆಹಲಿ, ನವೆಂಬರ್ 26: ಕಲಾಪಕ್ಕೆ ವಿಪಕ್ಷಗಳು ಅಡ್ಡಿಪಡಿಸಿದ್ದರಿಂದ ಸಂಸತ್​ನ ಲೋಕಸಭೆ ಮತ್ತು ರಾಜ್ಯಸಭೆ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದೀಗ ಮತ್ತೊಮ್ಮೆ ಸಂಸತ್ ವಿಶೇಷ ಅಧಿವೇಶನ ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಅಗತ್ಯ ಸರ್ಕಾರಿ ಕಲಾಪಗಳನ್ನು ಕೈಗೆತ್ತಿಕೊಳ್ಳುವ ಸಲುವಾಗಿ ನವೆಂಬರ್ 30ರಂದು ಲೋಕಸಭೆಯನ್ನು ಮತ್ತು ಡಿಸೆಂಬರ್ 2ರಂದು ರಾಜ್ಯಸಭೆಯನ್ನು ಪುನರಾರಂಭಿಸಲಾಗುವುದು.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಈ ಕಲಾಪಗಳು ಸಂಸತ್ತಿನ ಮುಂಗಾರು ಅಧಿವೇಶನದ ಮುಂದುವರಿದ ಭಾಗವಾಗಿರಲಿವೆ ಮತ್ತು ನಿಗದಿತ ಕಲಾಪಗಳ ಅಗತ್ಯತೆಗೆ ಅನುಗುಣವಾಗಿ ಡಿಸೆಂಬರ್ 3ರಂದು ಮುಕ್ತಾಯಗೊಳ್ಳಬಹುದು ಎಂದು ತಿಳಿಸಿದ್ದಾರೆ. ಕ್ಷೇತ್ರ ಪುನರ್​ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ವಿಧೇಯಕ ಕುರಿತ ಮಹತ್ವದ ಬೆಳವಣಿಗೆಗಳು ಹಾಗೂ ಊಹಾಪೋಹಗಳ ನಡುವೆ ಈ ನಿರ್ಧಾರ ಹೊರಬಿದ್ದಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಜಾರಿಗೆ ವಿಶೇಷ ಸಂಸತ್ ಅಧಿವೇಶನಕ್ಕೆ ಕೇಂದ್ರ ಸಿದ್ಧತೆ, ಮಸೂದೆ ಗೆಲ್ಲುವ ವಿಶ್ವಾಸ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು (ಗುರುವಾರ) ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ನವೆಂಬರ್ 30ರಂದು (ಸೋಮವಾರ) ಲೋಕಸಭೆ ಮತ್ತು ಡಿಸೆಂಬರ್ 2ರಂದು (ಬುಧವಾರ) ರಾಜ್ಯಸಭೆಯನ್ನು ಪುನರಾರಂಭಿಸುವಂತೆ ಕ್ರಮವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಕೋರಿಕೆ ಸಲ್ಲಿಸಲಾಗಿದೆ. ಕಲಾಪಗಳ ಅಗತ್ಯತೆಗೆ ಅನುಗುಣವಾಗಿ ಉಭಯ ಸದನಗಳ ಕಲಾಪಗಳು ಡಿಸೆಂಬರ್ 3ರಂದು ಮುಕ್ತಾಯಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ಕ್ಷೇತ್ರ ಪುನರ್​ವಿಂಗಡಣೆ ವಿಧೇಯಕವನ್ನು ಅಂಗೀಕರಿಸಲು ಸರ್ಕಾರ ನಡೆಸಿದ್ದ ಪ್ರಯತ್ನ ವಿಫಲವಾಗಿತ್ತು. ಈಗ ಮತ್ತೆ ಸಂಸತ್ತಿನ ಸಭೆ ಕರೆದಿರುವುದು ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಅಥವಾ ಶಾಸನದ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಮಹಿಳಾ ಮೀಸಲಾತಿ ಕಾಯ್ದೆಯನ್ನು (ನಾರಿ ಶಕ್ತಿ ವಂದನ್ ಅಧಿನಿಯಮ) ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯಿಂದ ಪ್ರತ್ಯೇಕವಾಗಿ ಇಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, ಪ್ರಸ್ತುತ ಇರುವ ರಾಜ್ಯವಾರು ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಉಳಿಸುವುದು, ಪ್ರಸಕ್ತ 543 ಸ್ಥಾನಗಳಲ್ಲಿ ಮಹಿಳೆಯರಿಗೆ 182 ಸ್ಥಾನಗಳನ್ನು ತಕ್ಷಣವೇ ಮೀಸಲಿಡುವುದು ಸೇರಿದಂತೆ ಹಲವು ಷರತ್ತುಗಳನ್ನು ಮುಂದಿಟ್ಟಿದೆ. ಅಲ್ಲದೆ, ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಪಡೆಯಲು ಸರ್ಕಾರಕ್ಕೆ ಎನ್‌ಡಿಎ ಹೊರತಾದ ಪಕ್ಷಗಳ ಬೆಂಬಲವೂ ಬೇಕಾಗಿದ್ದು, ವಿರೋಧ ಪಕ್ಷಗಳು ಸರ್ವಪಕ್ಷ ಸಭೆಗೆ ಒತ್ತಾಯಿಸಿವೆ.

ಇದನ್ನೂ ಓದಿ: ಡಿಸೆಂಬರ್ ಮೊದಲ ವಾರದಲ್ಲಿ ಸಂಸತ್ ಚಳಿಗಾಲದ ಅಧಿವೇಶನ ಸಾಧ್ಯತೆ; ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆಗೆ ಆದ್ಯತೆ

ಮುಂಗಾರು ಅಧಿವೇಶನದ ದಾಖಲೆಯ ಅವಧಿ:

ಸಂಸತ್ತಿನ ಮುಂಗಾರು ಅಧಿವೇಶನವು ಮುಕ್ತಾಯಗೊಂಡು 105 ದಿನ ಕಳೆದಿದ್ದರೂ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸದನವನ್ನು ಔಪಚಾರಿಕವಾಗಿ ಸಮಾಪ್ತಿಗೊಳಿಸಿರಲಿಲ್ಲ. ಸದನವನ್ನು ಸಮಾಪ್ತಿಗೊಳಿಸದೆ ಇರುವುದರಿಂದ, ಹೊಸ ಅಧಿವೇಶನ ಕರೆಯಲು ಬೇಕಾಗುವ ಕನಿಷ್ಠ 14 ದಿನಗಳ ನೋಟಿಸ್ ಬದಲಿಗೆ, ಅಸ್ತಿತ್ವದಲ್ಲಿರುವ ಅಧಿವೇಶನದಲ್ಲೇ ಕನಿಷ್ಠ 2 ದಿನಗಳ ಮುಂಚಿತ ನೋಟಿಸ್ ನೀಡಿ ಸಭೆಯನ್ನು ಪುನಃ ಕರೆಯಲು ಸರ್ಕಾರಕ್ಕೆ ಸಾಧ್ಯವಾಗಿದೆ. ವಿರೋಧ ಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟು, ಕ್ಷೇತ್ರ ಪುನರ್ವಿಂಗಡಣೆ ವಿಧೇಯಕಕ್ಕೆ ಬಹುಮತ ಕ್ರೋಢೀಕರಿಸಲು ಸರ್ಕಾರ ಸಮಯ ತೆಗೆದುಕೊಂಡಿದೆ ಎಂದು ಆರೋಪಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:50 pm, Thu, 26 November 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಹಿರಿಯೂರು ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ತಿರುಪತಿ ದೇವಸ್ಥಾನಕ್ಕೆ 121 ಕೆಜಿ ಚಿನ್ನ ನೀಡಿದ ಉದ್ಯಮಿ;ಆಭರಣ ಹೇಗಿದೆ ನೋಡಿ
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಕಳ್ಳಾಟವಾಡುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಶಾಕ್
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬೆಂಗಳೂರಲ್ಲಿ 24/7 ಹೋಟೆಲ್‌ಗಳ ಓಪನ್​​​ ಬೇಡಿಕೆಗೆ ಸಿಎಂ ಸ್ಪಂದನೆ
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಬ್ರಹ್ಮರಕೂಟ್ಲು ಟೋಲ್‌ ಬ್ಯಾರಿಯರ್ ಕಿತ್ತಿದ SDPI ಕಾರ್ಯಕರ್ತರು
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಸೌಜನ್ಯ ಕೇಸ್​​: ಎಸ್​ಐಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್
ಡಾ.ಶ್ರೀನಿಧಿ ಜೊತೆ ಸರಳ ವಿವಾಹವಾದ ಶಾಸಕ ದರ್ಶನ್ ಧ್ರುವನಾರಾಯಣ್
ರಸ್ತೆ ಕಾಮಗಾರಿ ಕಳಪೆ: ಅಧಿಕಾರಿಗಳು, ಗುತ್ತಿಗೆದಾರನಿಗೆ ಶಾಸಕರಿಂದ ಕ್ಲಾಸ್​​
ರಸ್ತೆ ಕಾಮಗಾರಿ ಕಳಪೆ: ಅಧಿಕಾರಿಗಳು, ಗುತ್ತಿಗೆದಾರನಿಗೆ ಶಾಸಕರಿಂದ ಕ್ಲಾಸ್​​
ಜಮೀರ್ ಮಾತಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೊಟ್ಟ ಪ್ರತಿಕ್ರಿಯೆ ಏನು?
ಜಮೀರ್ ಮಾತಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೊಟ್ಟ ಪ್ರತಿಕ್ರಿಯೆ ಏನು?
ಗುಳ್ಳೆ ನರಿ ಕೈಯಲ್ಲೇ ಗುಳ್ಳೆ ನರಿ ಹುಡುಕೋ ಕೆಲಸ; ಸಂಕಷ್ಟದಲ್ಲಿ ಯಶಸ್
ಗುಳ್ಳೆ ನರಿ ಕೈಯಲ್ಲೇ ಗುಳ್ಳೆ ನರಿ ಹುಡುಕೋ ಕೆಲಸ; ಸಂಕಷ್ಟದಲ್ಲಿ ಯಶಸ್