Parliament

Parliament

ಭಾರತದ ಸಂಸತ್ತು ಕಾನೂನುಗಳನ್ನು ರೂಪಿಸುವ ಮತ್ತು ಸರ್ಕಾರದ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿರುವ ಸರ್ವೋಚ್ಚ ಶಾಸಕಾಂಗ ಸಂಸ್ಥೆಯಾಗಿದೆ. ಎರಡು ಸದನಗಳನ್ನು ಒಳಗೊಂಡಿರುತ್ತದೆ – ಲೋಕಸಭೆ ಮತ್ತು ರಾಜ್ಯಸಭೆ. ಭಾರತದ ಸಂಸತ್ತು ದೇಶದ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.ಜನರಿಂದ ನೇರವಾಗಿ ಆಯ್ಕೆಯಾದ ಸದಸ್ಯರನ್ನು ಹೊಂದಿರುವ ಲೋಕಸಭೆಯು ಪ್ರಾಥಮಿಕ ಶಾಸಕಾಂಗ ಭವನವಾಗಿದ್ದು, ರಾಜ್ಯಸಭೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುತ್ತದೆ. ಎರಡೂ ಸದನಗಳಲ್ಲಿ ಸಂಸದರು ವಿವಿಧ ಪ್ರದೇಶಗಳು ಮತ್ತು ಸಮುದಾಯಗಳಿಂದ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಮೂಲಕ ವ್ಯಾಪಕ ಶ್ರೇಣಿಯ ಸಮಸ್ಯೆಗಳ ಕುರಿತು ಉದ್ದೇಶಪೂರ್ವಕವಾಗಿ, ಚರ್ಚೆ ಮತ್ತು ಕಾನೂನುಗಳನ್ನು ಅಂಗೀಕರಿಸುತ್ತಾರೆ.ಭಾರತದ ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಪ್ರಧಾನ ಮಂತ್ರಿಗಳು ಮಂತ್ರಿ ಮಂಡಳಿಯೊಂದಿಗೆ ಜವಾಬ್ದಾರರಾಗಿರುತ್ತಾರೆ. ಸಂಸತ್ತಿನ ಅಧಿವೇಶನಗಳು, ಚರ್ಚೆಗಳು ಮತ್ತು ಶಾಸಕಾಂಗ ಚಟುವಟಿಕೆಗಳು ಭಾರತದ ಪ್ರಜಾಸತ್ತಾತ್ಮಕ ಆಡಳಿತದ ಅಗತ್ಯ ಅಂಶಗಳಾಗಿವೆ.

ಇನ್ನೂ ಹೆಚ್ಚು ಓದಿ

Rajya Sabha Bypolls: 12 ರಾಜ್ಯಸಭಾ ಸದಸ್ಯರ ಅವಿರೋಧ ಆಯ್ಕೆ; ಬಹುಮತದ ಗಡಿ ಮುಟ್ಟಿದ ಎನ್‌ಡಿಎ

ರಾಜ್ಯಸಭೆಯು 245 ಸ್ಥಾನಗಳನ್ನು ಹೊಂದಿದೆ. ಆದರೂ ಪ್ರಸ್ತುತ 8 ಹುದ್ದೆಗಳು ಖಾಲಿ ಇವೆ. ಜಮ್ಮು ಮತ್ತು ಕಾಶ್ಮೀರದಿಂದ 4 ಮತ್ತು 4 ನಾಮನಿರ್ದೇಶಿತ ಸ್ಥಾನಗಳು ಖಾಲಿ ಇವೆ. ರಾಜ್ಯಸಭೆಯ ಪ್ರಸ್ತುತ ಬಲ 237ರೊಂದಿಗೆ ಬಹುಮತಕ್ಕೆ 119 ಸ್ಥಾನಗಳು ಬೇಕಾಗುತ್ತವೆ.

ಉಪ ರಾಷ್ಟ್ರಪತಿ ಸ್ಥಾನದಿಂದ ಜಗದೀಪ್ ಧಂಖರ್ ವಜಾಗೊಳಿಸಲು ವಿರೋಧ ಪಕ್ಷ ನೋಟಿಸ್ ಸಲ್ಲಿಸುವ ಸಾಧ್ಯತೆ

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರನ್ನು ಪ್ರತಿಪಕ್ಷಗಳ ವಿರುದ್ಧ ಪಕ್ಷಪಾತಿ ಎಂದು ಪದೇ ಪದೇ ಆರೋಪಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್, ಅವರನ್ನು ಭಾರತದ ಉಪ ರಾಷ್ಟ್ರಪತಿ ಸ್ಥಾನದಿಂದ ತೆಗೆದುಹಾಕಲು ನೋಟಿಸ್ ಸಲ್ಲಿಸುವ ಸಾಧ್ಯತೆಯಿದೆ.

ನಾಮಿನಿ ಸಂಖ್ಯೆ ಹೆಚ್ಚಳ ಸೇರಿ ಬ್ಯಾಂಕಿಂಗ್ ಕಾನೂನುಗಳಲ್ಲಿ ತರಲಾಗುತ್ತಿರುವ ಕೆಲ ಬದಲಾವಣೆಗಳಿವು…

Banking laws (Amendment) Bill 2024: ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಇಂದು ಲೋಕಸಭೆಯಲ್ಲಿ ಮಸೂದೆ ಮಂಡನೆ ಆಗುತ್ತಿದೆ. ಬ್ಯಾಂಕ್ ಖಾತೆಗೆ ಹೆಸರಿಸಬಹುದಾದ ನಾಮಿನಿಗಳ ಸಂಖ್ಯೆಯನ್ನು ಒಂದರಿಂದ ನಾಲ್ಕಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ. ಸಬ್​ಸ್ಟಾನ್ಷಿಯಲ್ ಇಂಟರೆಸ್ಟ್ ಎಂದು ನಿರ್ದೇಶಕರನ್ನು ವ್ಯಾಖ್ಯಾನಿಸಲು ನಿಯಮ ಬದಲಾವಣೆ ಮಾಡಲಾಗಿದೆ. ಷೇರು ಮಾಲಕತ್ವ ಐದು ಲಕ್ಷ ರೂನಿಂದ ಎರಡು ಕೋಟಿ ರೂಗೆ ಏರಿಸಲಾಗಿದೆ.

ಲೋಕಸಭೆಯಲ್ಲಿ ವಕ್ಫ್ ಮಸೂದೆ ಚರ್ಚೆ ವೇಳೆ ರಾಹುಲ್ ಗಾಂಧಿ ನಿದ್ರೆ; ಲೇವಡಿ ಮಾಡಿದ ಬಿಜೆಪಿ ನಾಯಕರು

1995ರ ವಕ್ಫ್ ಕಾಯಿದೆಗೆ ತಿದ್ದುಪಡಿ ತರುವ ವಕ್ಫ್ (ತಿದ್ದುಪಡಿ) ಮಸೂದೆ, 2024ರ ಚರ್ಚೆಯ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರು ನಿದ್ರೆಗೆ ಜಾರಿದ ವಿರೋಧ ಪಕ್ಷದ ಸಂಸದರನ್ನು ಹೇಗೆ ಅಪಹಾಸ್ಯ ಮಾಡಿದ್ದಾರೆ ಎಂಬುದನ್ನು ತೋರಿಸುವ ವೀಡಿಯೊಗಳು ವೈರಲ್ ಆಗಿವೆ.

‘ಭಾರತೀಯ ಜಮೀನ್ ಪಾರ್ಟಿ’; ಸದನದಲ್ಲಿ ವಕ್ಫ್ ಮಸೂದೆ ಮಂಡನೆಗೆ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಂದು ಲೋಕಸಭೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಪರಿಚಯಿಸಿದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಅಧಿವೇಶನದಲ್ಲಿ ಮೋದಿ ಸರ್ಕಾರ ವಕ್ಫ್ ಮಸೂದೆಯನ್ನು ಮಂಡನೆ ಮಾಡಿದೆ.

ಹಾಲಿ, ಮಾಜಿ ಶಾಸಕರು ಮತ್ತು ರಾಜಕಾರಣಿಗಳ ವಿರುದ್ಧ 132 ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲು

Money Laundering Cases: ಹಾಲಿ ಮತ್ತು ಮಾಜಿ ಶಾಸಕರು, ರಾಜಕಾರಣಿಗಳ ವಿರುದ್ಧ 132 ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಭಾಗವಾಗಿ ಜಾರಿ ನಿರ್ದೇಶನಾಲಯದ ಅಂಕಿಅಂಶಗಳ ಮಾಹಿತಿ ನೀಡಿದ್ದಾರೆ.

ವಯನಾಡ್ ದುರಂತದ ಬಗ್ಗೆ ರಾಹುಲ್ ಗಾಂಧಿ ಇದುವರೆಗೂ ಏಕೆ ಪ್ರಸ್ತಾಪಿಸಿಲ್ಲ?; ತೇಜಸ್ವಿ ಸೂರ್ಯ ವಾಗ್ದಾಳಿ

ಕರ್ನಾಟಕದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೇರಳದ ವಯನಾಡು ದುರಂತದಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ. ತಾವು ವಯನಾಡಿನ ಸಂಸದರಾಗಿದ್ದ ಅವಧಿಯಲ್ಲಿ ಸದನದಲ್ಲಿ ಇದುವರೆಗೂ ಒಮ್ಮೆಯೂ ರಾಹುಲ್ ಗಾಂಧಿ ಏಕೆ ಈ ಬಗ್ಗೆ ಪ್ರಸ್ತಾಪಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

Ashwini Vaishnaw: ರೈಲ್ವೆ ನಮ್ಮ ಆದ್ಯತೆಯೇ ಹೊರತು ರೀಲ್ಸ್ ಅಲ್ಲ; ವಿಪಕ್ಷಗಳ ವಿರುದ್ಧ ಸಿಡಿದೆದ್ದ ಸಚಿವ ಅಶ್ವಿನಿ ವೈಷ್ಣವ್

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಪ್ರತಿಪಕ್ಷಗಳು 'ರೀಲ್ ಮಿನಿಸ್ಟರ್' ಎಂದು ಟೀಕಿಸಿದ್ದವು. ಈ ಹಿನ್ನೆಲೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿರುವ ಅಶ್ವಿನಿ ವೈಷ್ಣವ್, ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆಯೇ ಹೊರತು ರೀಲ್ಸ್ ಮಾಡುತ್ತಾ ಕೂರುವುದಿಲ್ಲ ಎಂದು ಟೀಕಿಸಿದ್ದಾರೆ.

Rahul Gandhi: ನೀವು ಅವಮಾನಿಸುತ್ತಲೇ ಇರಿ, ನಾನು ಹೋರಾಡುತ್ತೇನೆ; ಜಾತಿ ಕುರಿತು ಅನುರಾಗ್ ಠಾಕೂರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಲೋಕಸಭೆಯಲ್ಲಿ ಇಂದು ನಡೆದ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ತಮ್ಮನ್ನು ನಿಂದಿಸಿ, ಅವಮಾನಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಜಾತಿ ಗಣತಿಯ ಕುರಿತಾಗಿ ಲೋಕಸಭಾ ಅಧಿವೇಶನದಲ್ಲಿ ಇಂದು ಅನುರಾಗ್ ಠಾಕೂರ್ ಮತ್ತು ರಾಹುಲ್ ಗಾಂಧಿ ನಡುವೆ ತೀವ್ರ ಚರ್ಚೆ ನಡೆದಿದೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ತಡೆಯಲು ತೆಗೆದುಕೊಂಡ ಕ್ರಮದ ಬಗ್ಗೆ ಲೋಕಸಭೆಯಲ್ಲಿ ಗೃಹ ಸಚಿವಾಲಯ ಸ್ಪಷ್ಟನೆ

ಲೋಕಸಭೆಯಲ್ಲಿ ಗೃಹ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 11 ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ 14 ಭದ್ರತಾ ಸಿಬ್ಬಂದಿ ಮತ್ತು 14 ನಾಗರಿಕರು ಸಾವನ್ನಪ್ಪಿದ್ದಾರೆ.