ಭಾರತದ ಜನರೇ ನೆಹರೂ, ಇಂದಿರಾ ಗಾಂಧಿಗೆ ಸಮಸ್ಯೆಯಾಗಿದ್ದರು; ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ಲೋಕಸಭಾ ಅಧಿವೇಶನದಲ್ಲಿ ನಿನ್ನೆ ಪ್ರಧಾನಿ ಮೋದಿಯವರಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ಇಂದು ರಾಜ್ಯಸಭಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರ ಭಾಷಣವನ್ನು ವಿರೋಧಿಸಿ ವಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಬಳಿಕ ಸಭಾತ್ಯಾಗ ನಡೆಸಿ, ಸಂಸತ್ ಹೊರಗೆ ಪ್ರತಿಭಟನೆ ಮುಂದುವರೆಸಿದರು.

ನವದೆಹಲಿ, ಫೆಬ್ರವರಿ 5: ಇಂದು ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿಯ ಹೆಸರನ್ನು ಕೂಡ ಪ್ರಸ್ತಾಪಿಸಿದ ಮೋದಿ, “ಅವರಿಬ್ಬರಿಗೂ ಭಾರತೀಯರು ಸಮಸ್ಯೆಯಾಗಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಒಪ್ಪಂದ ಎಂದರೆ ಬೋಫೋರ್ಸ್ ಎಂಬಂತಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ವಿಷನ್, ಐಡಿಯಾ, ಪ್ಲಾನ್ ಇರಲಿಲ್ಲ” ಎಂದು ಕಿಡಿಕಾರಿದ್ದಾರೆ.
“ಕಾಂಗ್ರೆಸ್ 2014ರಲ್ಲಿ ಒಂದು ಅವ್ಯವಸ್ಥೆಯನ್ನು ಬಿಟ್ಟು ಹೋಗಿತ್ತು. ಅದನ್ನು ಸ್ವಚ್ಛಗೊಳಿಸಲು ನಮ್ಮ ಸರ್ಕಾರ ಸಾಕಷ್ಟು ಪ್ರಯತ್ನ ಮಾಡಬೇಕಾಯಿತು. ಕಾಂಗ್ರೆಸ್ನಿಂದಾಗಿ ಜಗತ್ತು ಭಾರತದ ಬಗ್ಗೆ ಒಂದು ನಿರ್ದಿಷ್ಟ ಇಮೇಜ್ ಅನ್ನು ಹೊಂದಿತ್ತು. ಅದನ್ನು ಬದಲಾಯಿಸಲು ನನಗೆ ಬಹಳ ಸಮಯ ಬೇಕಾಯಿತು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಮುಂತಾದ ಎಡಪಕ್ಷಗಳು ಕೇಂದ್ರ ಮತ್ತು ರಾಜ್ಯಗಳಲ್ಲಿ ದಶಕಗಳಿಂದ ಆಡಳಿತ ನಡೆಸಿದ್ದರೂ ಅವು ಮುಖ್ಯವಾಗಿ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿವೆ. ಈಗಲೂ ಜನರು ಅವುಗಳ ಬಗ್ಗೆ ಮಾತನಾಡುವಾಗ ಅವರು ವ್ಯಾಪಾರ ಒಪ್ಪಂದಗಳ ಬಗ್ಗೆ ಮಾತನಾಡುವುದಿಲ್ಲ. ಅವರು ಬೋಫೋರ್ಸ್‌ನಂತಹ ಒಪ್ಪಂದಗಳ ಬಗ್ಗೆಯೇ ಮಾತನಾಡುತ್ತಾರೆ” ಎಂದು ಮೋದಿ ಲೇವಡಿ ಮಾಡಿದರು.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ, ಸಂಸತ್ ಹೊರಗೆ ಪ್ರತಿಭಟನೆ
“ಕಾಂಗ್ರೆಸ್ ನಾಯಕರು ಭಾರತದ ಜನಸಂಖ್ಯೆಯನ್ನು ಶಕ್ತಿಯ ಬದಲು ಸಮಸ್ಯೆಯಾಗಿ ನೋಡುತ್ತಿದ್ದರು. ಜವಾಹರಲಾಲ್ ನೆಹರು ಅವರು ಭಾರತದ ಆಗಿನ 35 ಕೋಟಿ ಜನಸಂಖ್ಯೆಯನ್ನು ಒಂದು ಪ್ರಮುಖ ಸವಾಲು ಎಂದು ವಿವರಿಸಿದ್ದರು. ಇಂದಿರಾ ಗಾಂಧಿ ಇರಾನ್ ಭೇಟಿಯ ಸಮಯದಲ್ಲಿ ಭಾರತದ ಸಮಸ್ಯೆ 57 ಕೋಟಿ ಜನರಿಗೆ ಏರಿಕೆಯಾಗಿದೆ ಎಂದು ಒಮ್ಮೆ ಹೇಳಿದ್ದರು. ತನ್ನ ದೇಶದ ಜನಸಂಖ್ಯೆಯು ಒಂದು ಹೊರೆಯಾಗಿದೆ ಎಂಬ ಕಲ್ಪನೆಯನ್ನು ಅವರು ಬಿತ್ತರಿಸಿದರು. ಆದರೆ, ನಾವು ನಮ್ಮ ದೇಶದ ಜನರು ಯಾವಾಗಲೂ ಭಾರತದ ದೊಡ್ಡ ಶಕ್ತಿ ಎಂದು ಪ್ರತಿಪಾದಿಸಿದೆವು” ಎಂದು ಮೋದಿ ಹೇಳಿದರು.
In Rajya Sabha, PM Modi says, “A significant part of our energy is being spent on correcting the mistakes of the past. It takes great effort to erase the image that was created in the minds of the world during that period, they left things in such a damaged state. That is why we… pic.twitter.com/shzU9Kq181
— ANI (@ANI) February 5, 2026
“ದೇಶದ ಜನರು ನಮಗೆ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಾರೆ. ನಮ್ಮ ಹೆಚ್ಚಿನ ಶಕ್ತಿಯನ್ನು ಕಾಂಗ್ರೆಸ್ ಪಕ್ಷದ ತಪ್ಪುಗಳನ್ನು ಸರಿಪಡಿಸಲು ಬಳಸಲಾಗುತ್ತಿದೆ. ಇಂದು ದೇಶವು ನೀತಿಯತ್ತ ಸಾಗುತ್ತಿದೆ. ಭಾರತವು ಸುಧಾರಣಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುತ್ತಿದೆ. ಇಂದು ಜಗತ್ತು ನಮ್ಮ ಉದ್ಯಮಿಗಳನ್ನು ಸಮಾನತೆಯಿಂದ ನೋಡುತ್ತಿದೆ” ಎಂದು ಪ್ರಧಾನಿ ಹೇಳಿದ್ದಾರೆ.
In Rajya Sabha, PM Modi says, “Today, India is a trusted partner of several nations and we are playing our role towards welfare of the world. Today, the entire world speaks of Global South but as the main character of that discussion, today India has emerged as a strong voice of… pic.twitter.com/gcOG2mECDs
— ANI (@ANI) February 5, 2026
ಇದನ್ನೂ ಓದಿ: ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಜಾಗತಿಕ ಶಕ್ತಿಯಾಗುತ್ತಿರುವ ಭಾರತ: ನರೇಂದ್ರ ಮೋದಿ ಹೇಳಿಕೆ
“ಕಾಂಗ್ರೆಸ್ ಆಳ್ವಿಕೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಕುಸಿತದ ಅಂಚಿನಲ್ಲಿತ್ತು. ನಾನು ಹೊಸ ಜವಾಬ್ದಾರಿಗಳನ್ನು ವಹಿಸಿಕೊಂಡಾಗ ಅವರಿಗೆ ದೇಶದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ನಾನು ಅರಿತುಕೊಂಡೆ. ಎನ್‌ಪಿಎಗಳಿಗೆ ಏನಾಗುತ್ತದೆ ಎಂಬುದರ ಕುರಿತು ಚರ್ಚೆಗಳು ನಡೆದವು. ಸವಾಲು ದೊಡ್ಡದಾಗಿತ್ತು. ಆದರೆ ನಾವು ಬುದ್ಧಿವಂತಿಕೆಯಿಂದ ವರ್ತಿಸಿದೆವು. ನಾವು ಧೈರ್ಯದಿಂದ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ದುರ್ಬಲವಾಗಿದ್ದ ಸರ್ಕಾರಿ ಬ್ಯಾಂಕ್‌ಗಳನ್ನು ನಾವು ವಿಲೀನಗೊಳಿಸಿದ್ದೇವೆ” ಎಂದು ಮೋದಿ ಹೇಳಿದ್ದಾರೆ.
VIDEO | Delhi: Addressing the Rajya Sabha, Prime Minister Narendra Modi said, “…Our respected Sadanand ji (Rajya Sabha MP Sadanand Master), Master, had both his legs amputated due to political hatred. In the prime of his youth, both his legs were cut off, and he has been… pic.twitter.com/vH4TbAI66s
— Press Trust of India (@PTI_News) February 5, 2026
“ಮುದ್ರಾ ಯೋಜನೆಯಡಿಯಲ್ಲಿ ನಾವು ದೇಶದ ಯುವಕರಿಗೆ 30 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಸಾಲವನ್ನು ನೀಡಿದ್ದೇವೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರು ಸೇರಿದ್ದಾರೆ. ಮಹಿಳೆಯರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವ ಕನಸು ಕಾಣುತ್ತಿದ್ದಾರೆ. ನಾವು ಅವರಿಗೆ ನೇರ ಆರ್ಥಿಕ ಸಹಾಯವನ್ನು ಒದಗಿಸಿದ್ದೇವೆ” ಎಂದಿದ್ದಾರೆ.
VIDEO | Delhi: Referring to LoP Rahul Gandhi’s ‘traitor friend’ remark, Prime Minister Narendra Modi said, “Yesterday’s incident took place in this very House, where the Congress party’s so-called political mastermind, the ‘yuvraj,’ labelled a respected Member of Parliament… pic.twitter.com/BY1SnwPAiZ
— Press Trust of India (@PTI_News) February 5, 2026
“ಕಾಂಗ್ರೆಸ್ ನಮ್ಮ ರೈತರನ್ನೂ ಬಿಡಲಿಲ್ಲ. ಈ ದೇಶದಲ್ಲಿ 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ 100 ಮಿಲಿಯನ್ ರೈತರಿದ್ದಾರೆ. ಅವರನ್ನು ಎಂದಿಗೂ ನೋಡಿಕೊಳ್ಳಲಿಲ್ಲ. ಅವರಿಗೆ ಈ ರೈತರ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ. ನಾವು ಸಣ್ಣ ರೈತರ ಬಗ್ಗೆ ಬಹಳ ಸಹಾನುಭೂತಿಯನ್ನು ಹೊಂದಿದ್ದೇವೆ. ಅವರಿಗಾಗಿ ನಾವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪರಿಚಯಿಸಿದ್ದೇವೆ. ಇಲ್ಲಿಯವರೆಗೆ, ಈ ರೈತರ ಖಾತೆಗಳಿಗೆ 4 ಲಕ್ಷ ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಈ ಯೋಜನೆಯು ರೈತರಿಗೆ ಹೊಸ ಕನಸುಗಳನ್ನು ಕಾಣುವ ಅವಕಾಶವನ್ನು ನೀಡಿದೆ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Thu, 5 February 26
