AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮೃತಧಾರೆ’ ಬೆಸುಗೆಯಿಂದ ದಾಂಪತ್ಯಕ್ಕೆ ಕಾಲಿಟ್ಟ ರಾಣವ್-ರಾಧಾ

ಅಮೃತಧಾರೆ ಧಾರಾವಾಹಿಯಲ್ಲಿ ಭೇಟಿಯಾದ ರಾಣವ್ ಮತ್ತು ರಾಧಾ ಈಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಸೀರಿಯಲ್ ಪಾತ್ರಗಳಿಗಿಂತ ಭಿನ್ನವಾಗಿ ಪರಸ್ಪರ ಇಷ್ಟಪಟ್ಟು ಒಂದಾದ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇದರ ನಡುವೆ ರಾಣವ್ ಕಲರ್ಸ್ ಹೊಸ ಧಾರಾವಾಹಿಯಲ್ಲಿ ನಾಯಕನಾಗುವ ಮಾತು ಕೇಳಿಬರುತ್ತಿದೆ. ರಾಧಾ ಕೂಡ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ನಟಿಸಿದ್ದರು. ಈ ಜೋಡಿಯ ಹೊಸ ಬದುಕಿಗೆ ಸಂಭ್ರಮ.

‘ಅಮೃತಧಾರೆ’ ಬೆಸುಗೆಯಿಂದ ದಾಂಪತ್ಯಕ್ಕೆ ಕಾಲಿಟ್ಟ ರಾಣವ್-ರಾಧಾ
ರಾಣವ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 27, 2026 | 7:43 AM

Share

ಮುಖ್ಯಾಂಶಗಳು

  • ‘ಅಮೃತಧಾರೆ’ ಋಣ ಸ್ಮರಿಸಿದ ರಾಣವ್
  • ಆಮಂತ್ರಣ ಪತ್ರಿಕೆಯಲ್ಲೂ ವಿಶೇಷ ಸಾಲು
  • ಜೆಡಿ ಮತ್ತು ಹಳ್ಳಿ ಹುಡುಗಿ ಪಾತ್ರಕ್ಕಿಂತ ಭಿನ್ನ ನಿಜ ಬದುಕಿನ ಪ್ರೀತಿ

‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದಾಗಿದ್ದ ಜೋಡಿ ಈಗ ನಿಜ ಜೀವನದಲ್ಲೂ ದಾಂಪತ್ಯಕ್ಕೆ ಕಾಲಿಟ್ಟಿದೆ. ರಾಣವ್ ಮತ್ತು ರಾಧಾ ಮದುವೆಯಾಗಿ ಹೊಸ ಬದುಕನ್ನು ಆರಂಭಿಸಿದ್ದಾರೆ. ಮದುವೆ ಸಂಭ್ರಮದ ನಡುವೆ ಮಾತನಾಡಿರುವ ರಾಣವ್ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ‘ಅಮೃತಧಾರೆ’ ಧಾರಾವಾಹಿಗೆ ತಾವು ಚಿರಋಣಿಯಾಗಿರುವುದಾಗಿ ಅವರು ಹೇಳಿದ್ದಾರೆ.

ಮದುವೆ ಆಮಂತ್ರಣ ಪತ್ರಿಕೆಯಲ್ಲೂ ವಿಶೇಷ ಸಾಲುಗಳನ್ನು ಬರೆದಿದ್ದಾಗಿ ರಾಣವ್ ತಿಳಿಸಿದ್ದಾರೆ. ‘ಅಮೃತಧಾರೆ’ ಪ್ರಾಜೆಕ್ಟ್ ಮೂಲಕವೇ ರಾಧಾ ಸಿಕ್ಕಿರುವುದಾಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಉಸಿರಿರುವವರೆಗೂ ಆ ಧಾರಾವಾಹಿಗೆ ಋಣಿಯಾಗಿರುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ನಡೆದು ಬಂದ ಹಾದಿಯನ್ನು ಅವರು ಮರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಧಾರಾವಾಹಿಯ ಪಾತ್ರಗಳಿಗೂ ನಿಜ ಜೀವನಕ್ಕೂ ಇರುವ ವ್ಯತ್ಯಾಸವನ್ನು ರಾಣವ್ ವಿವರಿಸಿದ್ದಾರೆ. ಸೀರಿಯಲ್‌ನಲ್ಲಿ ಇದ್ದಂತೆ ಈಗ ಯಾರೂ ಇಲ್ಲ ಎಂದಿದ್ದಾರೆ. ರಾಧಾ ಹಳ್ಳಿ ಹುಡುಗಿಯ ಪಾತ್ರದಂತಿಲ್ಲ. ರಾಣವ್ ಕೂಡ ಜೆಡಿ ಪಾತ್ರದಂತಿಲ್ಲ. ಇಬ್ಬರೂ ಪರಸ್ಪರ ಇಷ್ಟಪಟ್ಟು ಒಂದಾಗಿರುವುದಾಗಿ ತಿಳಿಸಿದ್ದಾರೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ಪತ್ನಿ ಮಲ್ಲಿಗೆ ಮೋಸ ಮಾಡುವ, ಅವಳಿಗೆ ಚಿತ್ರ ಹಿಂಸೆ ಕೊಡುವ ಪಾತ್ರ ಜೆಡಿಯದ್ದಾಗಿತ್ತು. ಈಗ ನಿಜ ಜೀವನದಲ್ಲಿ ಪ್ರೀತಿಸಿ ಇವರು ಒಂದಾಗಿದ್ದಾರೆ.

ಇದರ ನಡುವೆ ರಾಣವ್ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಚರ್ಚೆ ಶುರುವಾಗಿದೆ. ರಾಣವ್ ಅವರು ಕಲರ್ಸ್ ವಾಹಿನಿಯ ಹೊಸ ಸೀರಿಯಲ್‌ಗೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಮದುವೆಯ ಬೆನ್ನಲ್ಲೇ ಹೊಸ ಧಾರಾವಾಹಿಯ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಜೆಡಿ-ಭಾರ್ಗವಿ; ಸರ್​​ಪ್ರೈಸ್ ಕೊಟ್ಟ ರಾಣವ್-ರಾಧಾ

ಹೊಸ ಬದುಕಿಗೆ ಕಾಲಿಟ್ಟಿರುವ ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ತೆರೆಯ ಮೇಲೆ ಮೆಚ್ಚುಗೆ ಗಳಿಸಿದ್ದ ಜೋಡಿ ನಿಜ ಜೀವನದಲ್ಲೂ ಒಂದಾಗಿರುವುದು ವೀಕ್ಷಕರಿಗೆ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ರಾಣವ್ ಅವರ ಹೊಸ ಧಾರಾವಾಹಿ ಅಪ್ಡೇಟ್ ಬಗ್ಗೆ ಕಾದುನೋಡಬೇಕಿದೆ. ರಾಧಾ ಕೂಡ ಕಿರುತೆರೆ ನಟಿ. ‘ಅಮೃತಧಾರೆ’ ಅರ್ಧಕ್ಕೆ ತೊರೆದ ಅವರು ಕಲರ್ಸ್​ ಕನ್ನಡದಲ್ಲಿ ‘ಭಾರ್ಗವಿ ಎಲ್​​ಎಲ್​​ಬಿ’ ಧಾರಾವಾಹಿ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More